ದ್ರಾವಿಡ್ ಕೋಚಿಂಗ್ ಕಮಾಲ್, ಕಿರಿಯರಿಗೆ ಕಿರೀಟ
ಕೊಲಂಬೋ, ಡಿ.21: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ತರಬೇತಿ ನೀಡಿದ ಅಂಡರ್ 19 ತಂಡ ತ್ರಿಕೋನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಕಪ್ ಗೆದ್ದುಕೊಂಡಿದೆ. ಅಂತಿಮ ಹಣಾಹಣಿಯಲ್ಲಿ ಶ್ರೀಲಂಕಾದ ಕೋಲ್ಟ್ ಗಳನ್ನು 5 ವಿಕೆಟ್ ಗಳಿಂದ ಸೋಲಿಸಿದ ಭಾರತದ ಕೋಲ್ಟ್ ಸೋಮವಾರ ವಿಜಯೋತ್ಸವ ಆಚರಿಸಿದೆ.
ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 159 ರನ್ ಚೇಸ್ ಮಾಡಿದ ಟೀಂ ಇಂಡಿಯಾಕ್ಕೆ ಆರಂಭಿಕ ಆಟಗಾರ ವಾಷಿಂಗ್ಟನ್ ಸುಂದರ್ ಮತ್ತೊಮ್ಮೆ ಆಸರೆಯಾದರು. ಸುಂದರ್ 56 ಹಾಗೂ ರಿಷಬ್ ಪಂತ್ 35ರನ್ ಗಳಿಸಿ 33.5 ಓವರ್ ಗಳಲ್ಲೇ ಗುರಿ ಬೆನ್ನಟ್ಟಿ ಜಯ ಸಾಧಿಸಿದರು.[ವಾಷಿಂಗ್ಟನ್ 'ಸುಂದರ' ಆಟ, ಯು-19 ತಂಡ ಫೈನಲಿಗೆ]

ಶ್ರೀಲಂಕಾ ಪರ ಎಡಗೈ ಸ್ಪಿನ್ನರ್ ಧಮಿತಾ ಸಿಲ್ವಾ ಅವರು ಸತತ ಎರಡು ವಿಕೆಟ್ ಕಿತ್ತು ಕೊಂಚ ಆತಂಕ ಉಂಟು ಮಾಡಿದ್ದರು. ಆದರೆ, ರಿಕಿ ಭೂಯಿ 29 ರನ್ ಗಳಿಸಿ ಅಜೇಯವಾಗಿ ಉಳಿದು ಗೆಲುವು ತಂದು ಕೊಟ್ಟರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 47.2 ಓವರ್ ಗಳಲ್ಲಿ 158 ಸ್ಕೋರಿಗೆ ಆಲೌಟ್ ಆಯಿತು. ಲಂಕಾ ಪರ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವಿಶಾದ್ ರಂದಿಕಾ 58ರನ್ ಗಳಿಸಿ ಟಾಪ್ ಸ್ಕೋರರ್ ಎಣಿಸಿದರು. ಭಾರತದ ಪರ ಖಲೀಲ್ ಅಹ್ಮದ್ 3 ವಿಕೆಟ್ ಕಿತ್ತು ಉತ್ತಮ ಪ್ರದರ್ಶನ ನೀಡಿದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ : 158 ಆಲೌಟ್ 47.2 ಓವರ್ಸ್
(ವಿಶಾದ್ ರಂದಿಕಾ 58, ದಮಿತಾ ಸಿಲ್ವ 23, ಖಲೀಲ್ ಅಹ್ಮದ್ 3/29)
ಭಾರತ: 159/5, 33.5 ಓವರ್ಸ್
(ವಾಷಿಂಗ್ಟನ್ ಸುಂದರ್ 56, ರಿಷಬ್ ಪಂತ್ 35, ದಮಿತಾ ಸಿಲ್ವ 3/18)
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications