Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾಕ್ಕೆ 268 ರನ್ ಗುರಿ ನೀಡಿದ ಧೋನಿ ಪಡೆ

ಮೆಲ್ಬೋರ್ನ್, ಜ, 18: ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾನಕ್ಕೆ 268 ರನ್ ಗಳ ಗುರಿ ನೀಡಿದೆ. ಆರಂಭಿಕ ರೋಹಿತ್ ಶರ್ಮಾ ಶತಕ, ಸುರೇಶ್ ರೈನಾ ಅರ್ಧಶತಕದ ನೆರವಿನಿಂದ ಗೌರವಾರ್ಹ ಮೊತ್ತ ಕಲೆಹಾಕಿದೆ.

ಆಸ್ಟ್ರೇಲಿಯಾ ಬೌಲರ್ ಗಳನ್ನು ಕಾಡಿದ ರೋಹಿತ್ ಶರ್ಮಾ 139 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ 138 ರನ್ ಕಲೆಹಾಕಿದರು. 48 ನೇ ಓವರ್ ನಲ್ಲಿ ಶರ್ಮಾ ವಿಕೆಟ್ ಒಪ್ಪಿಸಿದಾಗ ಭಾರತದ ಮೊತ್ತ 262. ಒಂದೆಡೆ ವಿಕೆಟ್ ಗಳು ಉದುರುತ್ತಿದ್ದರೂ ಕ್ರೀಸ್ ಗೆ ಕಚ್ಚಿ ನಿಂತ ಶರ್ಮಾ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವುದಕ್ಕೆ ನೆರವಾದರು.[ತ್ರಿಕೋನ ಸರಣಿ: ರೋಹಿತ್ ಶರ್ಮಾ ಭರ್ಜರಿ ಶತಕ]

cricket

ಸುರೇಶ್ ರೈನಾ(51) ಬಿಟ್ಟರೆ ಭಾರತದ ಮಧ್ಯಮ ಕ್ರಮಾಂಕದ ಯಾವ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಧವನ್ (2), ರಹಾನೆ (12), ಕೊಹ್ಲಿ (9) ಮತ್ತು ನಾಯಕ ಎಂಸ್ ಧೋನಿ ಕೇವಲ (19) ರನ್ ಗಳಿಸಿ ಪೆವಿಲಿಯನ್ ಗೆ ಸೇರಿಕೊಂಡರು.

ಭಾರತ ಆಲ್ ರೌಂಡರ್ ರವಿಂದ್ರ ಜಡೇಜಾ ಮತ್ತು ಇಶಾಂತ್ ಶರ್ಮಾ ಅವರನ್ನು ಬಿಟ್ಟು ಕಣಕ್ಕೆ ಇಳಿದಿತ್ತು. 59 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಮತ್ತು ರೈನಾ ನಾಲ್ಕನೇ ವಿಕೆಟ್‌ಗೆ 126 ರನ್‌ಗಳ ಜೊತೆಯಾಟ ನೀಡಿದ್ದು 267 ರನ್ ಪೇರಿಸಲು ನೆರವಾಯಿತು.

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+