ತ್ರಿಕೋನ ಸರಣಿ: ರೋಹಿತ್ ಶರ್ಮಾ ಭರ್ಜರಿ ಶತಕ
ಮೆಲ್ಬೋರ್ನ್, ಜ, 18: ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ದಾಖಲಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಧೋನಿ ಪಡೆ ಬೃಹತ್ ಮೊತ್ತ ಕಲೆ ಹಾಕುವ ಲಕ್ಷಣ ತೋರಿದೆ.

ಆರಂಭಿಕ ಶಿಖರ್ ಧವನ್, ರೆಹಾನೆ ಮತ್ತು ವಿರಾಟ್ ಕೊಹ್ಲಿ ಅವರನ್ನು ಬೇಗ ಕಳೆದುಕೊಂಡರೂ ಮಧ್ಯಮ ಕ್ರಮಾಂಕದ ಶಕ್ತಿ ಸುರೇಶ್ ರೈನಾ ಮತ್ತು ಒಂದು ಕಡೆ ಕ್ರೀಸ್ ಕಾಯ್ದುಕೊಂಡ ರೋಹಿತ್ ಶರ್ಮಾ ಉತ್ತಮ ಜತೆಯಾಟ ನೀಡಿದರು. 59 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮತ್ತು ರೈನಾ ನಾಲ್ಕನೇ ವಿಕೆಟ್‌ಗೆ ಭರ್ಜರಿ 126 ರನ್‌ಗಳ ಜೊತೆಯಾಟ ನೀಡಿದರು. ರೈನಾ 51 ರನ್‌ಗಳಿಸಿ ಪೆವಿಕಿಯನ್ ಗೆ ತೆರಳಿದರು.[ಭಾರತ ವಿಶ್ವಕಪ್ ತಂಡಕ್ಕೆ ಪರಿಸರ ಪ್ರೇಮದ ಜರ್ಸಿ]
ಅರ್ಧ ಶತಕ ಗಳಿಸಿ ರೈನಾ ವಿಕೆಟ್ ಒಪ್ಪಿಸಿದರೆ, ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ನಲ್ಲಿ 6 ನೇ ಶತಕ ದಾಖಲಿಸಿ ಆಟವಾಡುತ್ತಿದ್ದಾರೆ. ಇತ್ತೀಚಿನ ವರದಿಯಂತೆ ಭಾರತ 44 ಒವರ್ ಗಳಲ್ಲಿ 237 ರನ್ ಗಳಿಸಿದ್ದು ಶತಕವೀರ ರೋಹಿತ್ ಶರ್ಮಾ 127 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications