ವಿಶ್ವಕಪ್: ಕಾಗಿಸೋ ರಬಾಡಾ ಕಳಪೆ ಫಾರ್ಮ್‌ಗೂ ಐಪಿಎಲ್ ಕಾರಣವಂತೆ!

ಲಂಡನ್, ಜೂನ್ 25: ಮಾರಕ ವೇಗಿ ಡೇಲ್ ಸ್ಟೇನ್ ಗಾಯಕ್ಕೆ ಐಪಿಎಲ್ ಅನ್ನು ದೂರಿದ್ದ ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್, ಈ ವಿಶ್ವಕಪ್‌ನಲ್ಲಿ ಮತ್ತೊಬ್ಬ ವೇಗಿ ಕಾಗಿಸೋ ರಬಾಡಾ ಅವರ ಕಳಪೆ ಫಾರ್ಮ್‌ಗೂ ಐಪಿಎಲ್ ಟೂರ್ನಿಯನ್ನು ಕಾರಣವನ್ನಾಗಿಸಿದ್ದಾರೆ. ವಿಶ್ವಕಪ್ ಅನ್ನು ಗಮನದಲ್ಲಿಟ್ಟು ದಕ್ಷಿಣ ಆಫ್ರಿಕಾ ತಂಡ ನಿರ್ವಹಣಾ ಸಮಿತಿಯು ರಬಾಡಾ ಅವರನ್ನು ಐಪಿಎಲ್ 2019ರಲ್ಲಿ ಭಾಗವಹಿಸದಂತೆ ತಡೆಯಲು ಯತ್ನಿಸಿತ್ತು ಎಂದು ಪ್ಲೆಸಿಸ್ ಹೇಳಿಕೊಂಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
'ಐಪಿಎಲ್‌ನಲ್ಲಿ ಆಡಲು ಹೋಗದಂತೆ ರಬಾಡಾ ಅವರನ್ನು ತಡೆಯಲು ನಾವು ಯತ್ನಿಸಿದೆವು. ವಿಶ್ವಕಪ್‌ಕಪ್ ಸಲುವಾಗಿ ರಬಾಡಾ ಹೊಸತನ ಕಾದಿರಿಕೊಳ್ಳುವುದನ್ನು ನಿರೀಕ್ಷೆಸಿದ್ದೆವು. ಆದರೆ ಅದಾಗಲಿಲ್ಲ. ಆತ ಅಲ್ಲಿಗೆ ಹೋದ ಮೇಲೆ ಟೂರ್ನಿಯ ಅರ್ಧದಿಂದಲಾದರೂ ವಾಪಸ್ ಕರೆಸಿಕೊಳ್ಳಲು ಪ್ರಯತ್ನಿಸಿದೆವು' ಎಂದು ಡು ಪ್ಲೆಸಿಸ್ ಹೇಳಿದ್ದಾರೆ.
ಮಾತು ಮುಂದುವರೆಸಿದ 'ಐಪಿಎಲ್‌ನಿಂದ ವಾಪಸ್ ಕರೆಸಿಕೊಳ್ಳುವುದು ಬರೀ ರಬಾಡಾಗೆ ಮಾತ್ರ ಇಲ್ಲ, ಇನ್ನೊಂದಿಷ್ಟು ಆಟಗಾರ ವಿಚಾರದಲ್ಲೂ ಪ್ರಮುಖವಾಗಿತ್ತು. ಈ ಸಂಗತಿಯನ್ನು ನಾನು ಐಪಿಎಲ್ ಆರಂಭಕ್ಕೂ ಮುನ್ನವೇ ಹೇಳಿಕೊಂಡಿದ್ದೆ. ಮೂರೂ ಕ್ರಿಕೆಟ್ ಮಾದರಿಗೂ (ಟೆಸ್ಟ್, ಏಕದಿನ, ಅಂತಾರಾಷ್ಟ್ರೀಯ ಟಿ20) ಪ್ರಮುಖವಾಗಿರುವ ಆಟಗಾರರಿಗೆ ವಿಶ್ರಾಂತಿ ಒದಗಿಸಲು ನಾವು ಯತ್ನಿಸಿದೆವು. ಯಾಕೆಂದರೆ ಆ ಆಟಗಾರರು ಐಪಿಎಲ್‌ಗಿಂತ ಮೂರು ಮಾದರಿಗಳಿಗೆ ಪ್ರಮುಖವಾಗಿ ಬೇಕಿದ್ದವರು' ಎಂದರು.
ಜೂನ್ 23ರಂದು ಲಂಡನ್‌ನ ಲಾರ್ಡ್ಸ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಪ್ರೋಟಿಯಾಸ್ 49 ರನ್ ಸೋಲಿನೊಂದಿಗೆ ನಿರಾಸೆ ಅನುಭವಿಸಿತ್ತು. ಈ ಪಂದ್ಯದ ಬಳಿಕ ಡು ಪ್ಲೆಸಿಸ್ ಐಪಿಎಲ್ ದೂರಿ ಹತಾಶೆಯ ಮಾತುಗಳನ್ನಾಡಿದರು. ಈ ಪಂದ್ಯದಲ್ಲಿ ರಬಾಡಾ ಒಟ್ಟು 10 ಓವರ್ ಎಸೆದು 65 ರನ್ ನೀಡಿದ್ದಾರಾದರೂ ಅವರಿಗೆ ಒಂದೂ ವಿಕೆಟ್ ಲಭಿಸಿರಲಿಲ್ಲ.
ಡೇಲ್ ಸ್ಟೇನ್ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಬೌಲಿಂಗ್ ಬಲ ತುಂಬುವ ಜವಾಬ್ದಾರಿ ಕಾಗಿಸೋ ರಬಾಡ ಅವರ ಮೇಲಿತ್ತು. ಆದರೆ ರಬಾಡಾ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ದುರದೃಷ್ಟವೆಂದರೆ ಐಸಿಸಿ ವಿಶ್ವಕಪ್ 2019ರಲ್ಲಿ ದಕ್ಷಿಣ ಆಫ್ರಿಕಾ ಆಡಿರುವ 7 ಪಂದ್ಯಗಳಲ್ಲಿ 1 ಪಂದ್ಯವನ್ನಷ್ಟೇ ಗೆದ್ದು ಸೆಮಿಫೈನಲ್ ಆಸೆಯನ್ನು ನೆಲಕ್ಕೆ ಕೊಡವಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications