ಸಿಪಿಎಲ್ 2020: 28 ಎಸೆತಕ್ಕೆ 72 ರನ್ ಚಚ್ಚಿ ಪಂದ್ಯ ಗೆಲ್ಲಿಸಿದ ಕಿರಾನ್ ಪೊಲಾರ್ಡ್

ಸಿಪಿಎಲ್ 13ನೇ ಆವೃತ್ತಿಯ 17ನೇ ಪಂದ್ಯ ಈ ಬಾರಿಯ ಅತ್ಯಂತ ರೋಚಕ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಅಂತಿಮ ಹಂತದವರೆಗೂ ಗೆಲುವು ನಿಶ್ಚಿತ ಎಂಬಂತ ಸ್ಥಿತಿಯಲ್ಲಿದ್ದ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡಕ್ಕೆ ಕಿರಾನ್ ಪೊಲಾರ್ಡ್ ನೀಡಿದ ಶಾಕ್‌ನಿಂದ ಹೊರ ಬರಲು ಖಂಡಿತಾ ಹಲವು ದಿನಗಳೇ ಬೇಕಾಗಬಹುದು.
ಮೊದಲು ಬ್ಯಾಟಿಂಗ್ ಮಾಡಿದ ಬಾರ್ಬಡೋಸ್ ಟ್ರಿಡೆಂಟ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ಎನ್ ಗಳಿಸಿತ್ತು. ಟೂರ್ನಿಯಲ್ಲಿ ಒಂದೂ ಸೋಲನ್ನು ಕಾಣದೆ ಮುನ್ನುಗ್ಗುತ್ತಿದ್ದ ಟಿನ್‌ಬ್ಯಾರ್ಗೋ ನೈಟ್ ರೈಡರ್ಸ್ ತಂಡಕ್ಕೆ ಬಾರ್ಬಡೋಸ್ ಬೌಲರ್‌ಗಳು ಆಘಾತದ ಮೇಲೆ ಆಘಾತ ನೀಡಲು ಆರಂಭಿಸಿದರು.

ಪಂದ್ಯದ ಗತಿ ಬದಲಾಯಿಸಿದ ಪೊಲಾರ್ಡ್
ಎರಡನೇ ಓವರ್‌ನಲ್ಲಿ 2 ವಿಕೆಟ್ ಕಳೆದು ಕೊಂಡ ಟಿಕೆಆರ್ ತಂಡ ಇದರಿಮದ ಚೇತರಿಸಿಕೊಳ್ಳದೆ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಲೇ ಸಾಗಿತ್ತು. ಒಂದು ಹಂತದಲ್ಲಿ ಟಿಕೆಆರ್ ತಂಡ 100 ರಬ್ ಗಳಿಸಿವುದು ಅಸಾಧ್ಯ ಎಂಬ ಸ್ಥಿತಿಯಲ್ಲಿತ್ತು. ಆದರೆ ಆಗ ಕಣಕ್ಕಿಳಿದಿದ್ದು ಕಿರಾನ್ ಪೊಲಾರ್ಡ್. ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಬಿಟ್ಟರು.

ಸಂಕಷ್ಟದ ವೇಳೆ ಕಣಕ್ಕಿಳಿದ ಪೊಲಾರ್ಡ್
ಕಿರಾನ್ ಪೊಲಾರ್ಡ್ ಕಣಕ್ಕಿಳಿಯುವ ವೇಳೆಗೆ ಟಿಕೆಆರ್ ತಂಡ 62 ರನ್‌ಗಳಿಗೆ ತನ್ನ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಮುಂದಿನ 48 ಎಸೆತಗಳಲ್ಲಿ ಟಿಕೆಆರ್ ತಂಡಕ್ಕೆ 87 ರನ್‌ಗಳ ಅವಶ್ಯಕತೆಯಿತ್ತು. ಆದರೆ ಕಿರಾ್ ಪೊಲಾರ್ಡ್ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಊಹೆಯನ್ನೂ ಮೀರಿ ಟಿಕೆಆರ್ ತಂಡ ಗೆಲ್ಲವಂತೆ ಮಾಡಿದ್ದರು.

ಸಿಡಿಲಬ್ಬರದ ಆಟ
ಕ್ರೀಸ್‌ಗೆ ಇಳಿದ ಕಿರಾನ್ ಪೊಲಾರ್ಡ್ ಕೇವಲ 28 ಎಸೆತಗಳಲ್ಲಿ ಸಿಡಿಲಬ್ಬರದ ರೀತಿಯಲ್ಲಿ 72 ರನ್ ಸಿಡಿಸಿದರು. ಇದರಲ್ಲಿ 9 ಸಿಕ್ಸರ್ ಹಾಗೂ 2 ಬೌಂಡರಿ ಸೇರಿತ್ತು. ಪಂದ್ಯದ ಅಂತಿಮ ಓವರ್‌ನಲ್ಲಿ ಗೆಲುವಿಗೆ 15ರನ್‌ಗಳ ಅವಶ್ಯಕತೆಯಿತ್ತು. ಕೊನೆಯ ಓವರ್‌ನಲ್ಲಿ ಪೊಲಾರ್ಡ್ ರನ್‌ಔಟ್‌ಗೆ ಬಲಿಯಾದರು.

ಲಾಸ್ಟ್ ಓವರ್ ಥ್ರಿಲ್ಲರ್
ತಂಡದ ಗೆಲುವಿಗೆ ಇನ್ನೂ 8 ರನ್‌ಗಳ ಅವಶ್ಯಕತೆಯಿತ್ತು. ಆದರೆ ಕ್ರೀಸ್‌ನಲ್ಲಿದ್ದ ಖಾರಿ ಪಿರ್ರೆ ಗೆಲುವು ತಪ್ಪಿಸಿಕೊಳ್ಳದಂತೆ ನೋಡಿಕೊಂಡರು, ಈ ಮೂಲಕ ಸೋಲಿನಂಚಿಗೆ ಬಂದಿದ್ದ ಪಂದ್ಯವನ್ನೂ ಗೆದ್ದುಕೊಂಡ ಟಿಕೆಆರ್ ಆಜೇಯವಾಗಿಯೇ ಮುಂದುವರಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications