For Quick Alerts
ALLOW NOTIFICATIONS  
For Daily Alerts
 

IPL 2025 : ಡೆಲ್ಲಿ ಕ್ಯಾಪಿಟಲ್ಸ್‌ ರಿಟೆನ್ಷನ್‌ ಟೆನ್ಷನ್‌ ಹೆಚ್ಚಿಸಿದ ದಕ್ಷಿಣ ಆಫ್ರಿಕಾ ಪ್ಲೇಯರ್

ಐಪಿಎಲ್‌ ಮಾಲೀಕರು ಭಾರತದಲ್ಲಿ ಯಾವ ಆಟಗಾರನನ್ನು ಉಳಿಸಿಕೊಳ್ಳಬೇಕು? ಯಾರನ್ನು ಕೈ ಬಿಡಬೇಕು ಎಂದು ಲೀಸ್ಟ್‌ ಮೇಲೆ ಲೀಸ್ಟ್ ಮಾಡುತ್ತಲೇ ಇದ್ದಾರೆ. ಈ ಲೀಸ್ಟ್‌ ದಿನದ ಕೊನೆಯಲ್ಲಿ ಚೇಂಜ್‌ ಆಗುತ್ತಲೇ ಇರುತ್ತದೆ. ಇದಕ್ಕೆ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟಗಾರರು ನೀಡುತ್ತಿರುವ ಪ್ರದರ್ಶನ. ಸ್ಟಾರ್‌ ಆಟಗಾರರು ತಮ್ಮ ತಮ್ಮ ದೇಶದ ಪರ ಅಬ್ಬರದ ಆಟವನ್ನು ಆಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ದೇಶೀಯ ಪಂದ್ಯಗಳಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು, ತಮ್ಮನ್ನು ತಮ್ಮ ತಮ್ಮ ತಂಡಗಳಲ್ಲಿ ಉಳಿಸಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ. ಆರ್‌ಸಿಬಿ ಪ್ಲೇಯರ್‌ ರಜತ್ ಪಟೀದಾರ್‌ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಬಿರುಸಿನ ಶತಕ ಬಾರಿಸಿ ಮ್ಯಾನೇಜ್ಮೆಂಟ್‌ ಕಣ್ಣು ತೆರೆಸಿದ್ದಾರೆ. ಇನ್ನು ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇಯರ್‌ ಬ್ಯಾಟಿಂಗ್‌ ಮೋಡಿ ಮಾಡಿದ್ದಾರೆ.

Tristan Stubbs Impresses Delhi Capitals with Record Century

ತನ್ನ ಶಿಸ್ತು ಬದ್ಧ ಆಟದ ಮೂಲಕ ಡೆಲ್ಲಿ ಟೆನ್ಷನ್‌ ಡಬಲ್ ಮಾಡಿದ ಆಟಗಾರ ದಕ್ಷಿಣ ಆಫ್ರಿಕಾದ ಟ್ರಿಸ್ಟಾನ್ ಸ್ಟಬ್ಸ್. ರಿಟೆನ್ಷನ್‌ ಲೀಸ್ಟ್‌ ನೀಡುವ ಎರಡೂ ದಿನಗಳ ಮುನ್ನವೇ ಇವರು ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ಅಲ್ಲದೆ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಟ್ರಿಸ್ಟಾನ್ ಸ್ಟಬ್ಸ್ ಶತಕ

ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನವೇ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಆಟಗಾರ ಟೋನಿ ಡಿಜಾರ್ಜ್ ತಮ್ಮ ವೃತ್ತಿ ಜೀವನದ ಮೊದಲ ಶತಕ ಬಾರಿಸಿದರು. ಇವರು 146 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದರು.

Tristan Stubbs Impresses Delhi Capitals with Record Century

ಇದಾದ ಕೆಲವೇ ಕ್ಷಣಗಳಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಕೂಡ ತಮ್ಮ ಮೊದಲ ಟೆಸ್ಟ್ ಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಇವರ ಅಮೋಘ ಬ್ಯಾಟಿಂಗ್‌ನಲ್ಲಿ ಐದು ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿವೆ.

ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಟೋನಿ ಡಿ ಜಾರ್ಜಿ ಎರಡನೇ ವಿಕೆಟ್‌ಗೆ 201 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ವಿಕೆಟ್‌ಗೆ ನೀಡಿದ ಎರಡನೇ ಉತ್ತಮ ಜೊತೆಯಾಟ ಎಂಬ ಹೆಗ್ಗಳಿಕೆಗೆ ಈ ಜೋಡಿ ಪಾತ್ರವಾಗಿದೆ. ಈ ಜೋಡಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ದಾಖಲೆಯನ್ನು ಅಳಿಸಿ ಹಾಕಿದೆ.

ಐಪಿಎಲ್‌ ಸಾಧನೆ

ಟ್ರಿಸ್ಟಾನ್ ಸ್ಟಬ್ಸ್ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 18 ಪಂದ್ಯಗಳಲ್ಲಿ 36.82ರ ಸರಾಸರಿಯಲ್ಲಿ 405 ರನ್‌ ಸಿಡಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಅಲ್ಲದೆ ಇವರು ಐಪಿಎಲ್‌ನಲ್ಲಿ ತಲಾ 26 ಬೌಂಡರಿ ಹಾಗೂ ಸಿಕ್ಸರ್‌ ಸಿಡಿಸಿದ್ದಾರೆ.

Story first published: Wednesday, October 30, 2024, 7:30 [IST]
Other articles published on Oct 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+