ಟೀಮ್ ಇಂಡಿಯಾಕ್ಕೆ ಆಧಾರವಾಗಿದ್ದು ಟ್ರಕ್ ಡ್ರೈವರ್ ಮಗ
ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಲೀಡ್ಸ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್‌ಗಳ ಹೀನಾಯ ಸೋಲನ್ನು ಕಂಡಿತು. ಈ ಸೋಲು ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದರೆ ಇಂಗ್ಲೆಂಡ್‌ನಿಂದ ಟೀಮ್ ಇಂಡಿಯಾ ಅಭಿಮಾನಿಗಳು ಖುಷಿ ಪಡುವಂತಹ ಸುದ್ದಿಯೊಂದು ಬಂದಿದೆ. ಬಡತನದಲ್ಲಿ ಅರಳಿದ ಪ್ರತಿಭೆಯೊಂದು ಅಬ್ಬರಿಸಿದೆ. ಈ ಯುವ ಆಟಗಾರನ ಅಮೋಘ ಆಟದ ಪರಿಣಾಮ ಯಂಗ್ ಟೀಮ್ ಇಂಡಿಯಾ ಭಾರಿ ಜಯ ಸಾಧಿಸಿದೆ.
ಭಾರತದ ಅಂಡರ್ 19 ತಂಡ ಸಹ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಯುವ ತಂಡ ಯಂಗ್ ಲಯನ್ಸ್ ಇನ್ವಿಟೇಶನಲ್ ಇಲೆವೆನ್ ವಿರುದ್ಧ ಏಕದಿನ ಪಂದ್ಯವನ್ನು ಆಡಿತು. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಆಯುಷ್ ಮಾತ್ರೆ, ವೈಭವ್ ಸುರ್ಯವಂಶಿ ರನ್ ಕಲೆ ಹಾಕುವಲ್ಲಿ ವಿಫಲರಾದರೂ, ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 442 ರನ್ ಸೇರಿಸಿತು. ಈ ವೇಳೆ ಟೀಮ್ ಇಂಡಿಯಾಕ್ಕೆ ಆಧಾರವಾಗಿದ್ದು ಹರ್ವಂಶ್ ಪಂಗಾಲಿಯಾ.

ಈಗಾಗಲೇ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಸದ್ದು ಮಾಡಿದ್ದ ಆಯುಷ್ ಮಾತ್ರೆ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ಇನ್ನು ಐಪಿಎಲ್‌ನಲ್ಲಿ ಶತಕ ಬಾರಿಸಿ ಆರ್ಭಟಿಸಿದ್ದ ವೈಭವ್ ಸೂರ್ಯಂವಶಿ (17) ಸಹ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೆ ಭಾರತದ 9ನೇ ಕ್ರಮಾಂಕದ ಬ್ಯಾಟರ್ ಹರ್ವಂಶ್ ಪಂಗಾಲಿಯಾ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದ್ರು. ಇವರು ಜಸ್ಟ್ 52 ಎಸೆತಗಳಲ್ಲಿ 8 ಬೌಂಡರಿ, 9 ಸಿಕ್ಸರ್ ಸಹಾಯದಿಂದ 198ರ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 103 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರ ಕ್ಲಾಸಿಕ್ ಆಟದ ಪರಿಣಾಮವೇ ಟೀಮ್ ಇಂಡಿಯಾ ಬೃಹತ್ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು.
ಟ್ರಕ್ ಡ್ರೈವರ್ ಮಗನ ಅಬ್ಬರ
ಗುರಿಯನ್ನು ಬೆನ್ನಟ್ಟಿದ ಯಂಗ್ ಲಯನ್ಸ್ ಇನ್ವಿಟೇಶನಲ್ ಇಲೆವೆನ್ ತಂಡವು 41.1 ಓವರ್‌ಗಳಲ್ಲಿ ಕೇವಲ 211 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಯುವ ತಂಡದ ಪರ ವಿಲ್ ಬೆನ್ನಿಸನ್ 14 ಬೌಂಡರಿ, 1 ಸಿಕ್ಸರ್ ಸಹಾಯದಿಂದ 103 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ದೀಪೇಶ್ ದೇವೇಂದ್ರನ್ 3, ವಿಹಾನ್ ಮಲ್ಹೋತ್ರಾ, ನಮನ್ ಪುಷ್ಪಕ್ ತಲಾ 2 ವಿಕೆಟ್ ಪಡೆದರು.

ಹರ್ವಂಶ್ ಪಂಗಾಲಿಯಾನ ಗುಜರಾತ್‌ನ ಕಚ್‌ನ ರಣ್‌ನಲ್ಲಿರುವ ಗಾಂಧಿಧಾಮ್ ಎಂಬ ಸಣ್ಣ ಪಟ್ಟಣದವರು. ಹರ್ವಂಶ್ ಅವರ ತಂದೆ ಕೆನಡಾದಲ್ಲಿ ಟ್ರಕ್ ಓಡಿಸುತ್ತಾರೆ. ಹರ್ವಂಶ್ ನಕುಲ್ ಅಯಾಚಿ ಅವರ ಮಾರ್ಗದರ್ಶನದಲ್ಲಿ ನೀಲಕಂಠ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications