ನಿವೃತ್ತಿ ಘೋಷಿಸಿದ ಡೇಲ್ ಸ್ಟೇನ್‌ಗೆ ಮನಮುಟ್ಟುವ ಸಂದೇಶ ಬರೆದ ಕೊಹ್ಲಿ

ನವದೆಹಲಿ, ಆಗಸ್ಟ್ 6: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾ ತಂಡದ ಮಾರಕ ವೇಗಿ ಡೇಲ್ ಸ್ಟೇನ್‌ಗೆ ಸೋಮವಾರ (ಆಗಸ್ಟ್ 5) ಭಾರತದ ನಾಯಕ ವಿರಾಟ್ ಕೊಹ್ಲಿ, 'ಹ್ಯಾಪಿ ರಿಟೈರ್ಮೆಂಟ್' ಎಂದು ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ. ಇದೇ ಟ್ವೀಟ್‌ನಲ್ಲಿ ಕೊಹ್ಲಿ, ಸ್ಟೇನ್ ಅವರನ್ನು 'ಆಟದ ನಿಜವಾದ ಚಾಂಪಿಯನ್' ಎಂದು ಕರೆದಿದ್ದಾರೆ.
ಟ್ವೀಟ್ ನಲ್ಲಿ ಕೊಹ್ಲಿ, 'ಆಟದ ನಿಜವಾದ ಚಾಂಪಿಯನ್. ವೇಗದ ಮೆಷೀನ್ ಡೇಲ್ ಸ್ಟೇನ್ ಅವರ ನಿವೃತ್ತಿ ಜೀವನ ಖುಷಿಯಾಗಿಲಿ' ಎಂದು ಬರೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ-ಭಾರತ ಮುಖಾಮುಖಿಯ ವೇಳೆ ಕೊಹ್ಲಿ-ಸ್ಟೇನ್ ಇಬ್ಬರೂ ದೈತ್ಯ ಪ್ರತಿಭೆಗಳು ಪರಸ್ಪರ ಪೈಪೋಟಿಗೆ ಮುಂದಾಗುತ್ತಿದ್ದುದನ್ನು ಅಭಿಮಾನಿಗಳು ಕಂಡಿದ್ದಿದೆ.
2008ರಿಂದ 2010ರ ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಪರ ಡೇಲ್ ಸ್ಟೇನ್ ಆಡಿದ್ದರು. ಗಾಯಕ್ಕೀಡಾಗಿ ಕೆಲ ವರ್ಷಗಳ ಕಾಲ ಆಟ ನಿಲ್ಲಿಸಿದ್ದ ಸ್ಟೇನ್, 2019ರಲ್ಲಿ ಆರ್‌ಸಿಬಿ ಪರ ಎರಡು ಪಂದ್ಯಗಳಲ್ಲಿ ಆಡಿ ಎರಡೂ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು ಕೂಡ.
ಐಪಿಎಲ್ ನಲ್ಲಿ ಮತ್ತೆ ಭುಜದ ಗಾಯಕ್ಕೊಳಗಾಗಿ ಟೂರ್ನಿಯಿಂದ ಹೊರಬಿದ್ದ ಡೇಲ್ ಸ್ಟೇನ್‌ಗೆ ಅನಂತರ ವಿಶ್ವಕಪ್‌ನಲ್ಲೂ ಆಡಲಾಗಲಿಲ್ಲ. ಸೋಮವಾರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಟೇನ್, ನಿಯಮಿತ ಓವರ್‌ಗಳ ಕ್ರಿಕೆಟ್‌ನತ್ತ ಗಮನ ಹರಿಸುವುದಾಗಿ ಹೇಳಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications