Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಮೆರಿಕದಲ್ಲಿ ಟ್ರಂಪ್ ಜಯ: ಕೊಹ್ಲಿ ಫ್ಯಾನ್ಸ್ ಫುಲ್ ಖುಷ್, ಆಸೀಸ್ ಪ್ರವಾಸದಲ್ಲಿ ವಿರಾಟ್ ನ್ಯೂ ವರ್ಷನ್

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಹಿಡಿಯಲು ಸಕಲ ರೀತಿಯಲ್ಲಿ ಸಿದ್ಧರಾಗಿದ್ದಾರೆ.‌ ಅಮೆರಿಕದಲ್ಲಿ ಟ್ರಂಪ್ ಗೆಲುವಿನ ಖುಷಿ ಭಾರತದಲ್ಲೂ ಕಂಡು ಬಂದಿದೆ. ಇಷ್ಟೇ ಅಲ್ಲ ಟ್ರಂಪ್, ಗೆಲುವಿನಿಂದ ವಿರಾಟ್ ಕೊಹ್ಲಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಮಂಗಳವಾರ ಅಮೆರಿಕದಲ್ಲಿ ನಡೆದ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಗೆದ್ದು ಗದ್ದುಗೆ ಏರಿದ್ದಾರೆ. ಇವರು ಮ್ಯಾಜಿಕ್ ನಂಬರ್ ಸುಲಭವಾಗಿ ಪಾರು ಮಾಡಿ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರು 295 ಸ್ಥಾನಗಳನ್ನು ವಶಕ್ಕೆ ಪಡೆದು ವೈಟ್ ಹೌಸ್ ಗೆ ಗ್ರೌಂಡ್ ಎಂಟ್ರಿ ನೀಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರೀಸ್ ವಿರುದ್ಧ ಮುನ್ನಡೆ ಸಾಧಿಸದ ಟ್ರಂಪ್ ಗೆಲುವು ದಾಖಲಿಸಿದರು. ಈ ಗೆಲುವು ಭಾರತದಲ್ಲಿನ ಕ್ರೀಡಾ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

Trump s Victory Sparks Joy Among Kohli Fans as Virat Prepares for Aussie Challenge

ಟ್ರಂಪ್ ಗೆಲುವಿಗೂ ಕೊಹ್ಲಿಗೂ ಇರುವ ನಂಟೆನು?

ಹಾಗೆ ನೋಡಿದರೆ ಕ್ರಿಕೆಟ್ ಗೂ ಅಮೆರಿಕಾ ಅಧ್ಯಕ್ಷ ಚುನಾವಣೆಗೆ ಯಾವುದೇ ಸಂಬಂಧ ಇಲ್ಲ. ಆದರೆ ಈ ಗೆಲುವನ್ನು ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಗೆ ಜೋಡಿಸಲಾಗಿದ್ದು ಈ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ.

ಡೊನಾಲ್ಡ್ ಟ್ರಂಪ್ ಇದಕ್ಕೂ ಮೊದಲು 2016ರಲ್ಲಿ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಅಮೆರಿಕದ ಅಧ್ಯಕ್ಷಾವಧಿ ನಾಲ್ಕು ವರ್ಷಗಳ ಇರುತ್ತದೆ. ಈ ನಾಲ್ಕು ವರ್ಷಗಳ ಅವಧಿಯಲ್ಲಿ ವಿರಾಟ್ ಕ್ರಿಕೆಟ್ ಅಂಗಳದ ದೊರೆಯಾಗಿ ಮಿಂಚಿದ್ದರೂ. ಈ ಅವಧಿಯಲ್ಲಿ ವಿರಾಟ್ 169 ಇನಿಂಗ್ಸ್ ಗಳಲ್ಲಿ ಬ್ಯಾಟ್ ಮಾಡಿ 29 ಶತಕ ಸೇರಿದಂತೆ 9120 ರನ್ ಸಿಡಿಸಿದ್ದರು.

2020 ರಲ್ಲಿ ಅಮೆರಿಕದಲ್ಲಿ ನಡೆದ ಚುನಾವಣೆಯಲ್ಲಿ ಜೋ ಬೈಡೆನ್ ವಿರುದ್ಧ ಟ್ರಂಪ್ ಸೋಲನ್ನು ಕಂಡರು. ಅಮೆರಿಕದಲ್ಲಿ ಅಧಿಕಾರ ಹಸ್ತಾಂತರ ಆಗುತ್ತಿದ್ದಂತೆ ಕೊಹ್ಲಿ ಸುವರ್ಣ ಯುಗ ಅಂತ್ಯ ವಾದಂತೆ ಕಂಡಿತು. ಕಳೆದ 4 ವರ್ಷಗಳಲ್ಲಿ ವಿರಾಟ್ ಕೊಹ್ಲಿ 10 ಶತಕ ಸಿಡಿಸಿದ್ದರು. ಈಗ ಮತ್ತೆ ಟ್ರಂಪ್ ಅಧಿಕಾರಕ್ಕೆ ಏರಿದ್ದು, ಕೊಹ್ಲಿ ಅಭಿಮಾನಿಗಳಲ್ಲಿ ನವ ಉತ್ಸಾಹ ತುಂಬಿದೆ.

Trump s Victory Sparks Joy Among Kohli Fans as Virat Prepares for Aussie Challenge

ಇದೆ ನವೆಂಬರ್ ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಈ ಸರಣಿ ಬಹಳ ಮಹತ್ವ ಪಡೆದಿದೆ. ಈ ಸರಣಿಯನ್ನು ವಶಕ್ಕೆ ಪಡೆಯುವ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಸುಲಭವಾಗಿ ಅರ್ಹತೆ ಪಡೆಯಲಿದೆ. ಈಗಾಗಲೇ ಭಾರತ ಆಸೀಸ್ ಪ್ರವಾಸದಲ್ಲಿಎರಡು ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದು ಬೀಗಿದೆ. ಹ್ಯಾಟ್ರಿಕ್ ಗೆಲುವಿನ ಕನಸನ್ನು ರೋಹಿತ್ ಪಡೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಅವರು ಫಾರ್ಮಗೆ ಮರಳುವುದು ಅನಿವಾರ್ಯವಾಗಿದೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಅಮೋಘ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ತಮ್ಮ ಹಳೆಯ ಖದರ್ ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಮಾಡಿ, ಆಸೀಸ್ ಬೌಲರ್ ಗಳ ಹೆಡೆ ಮುರಿ ಕಟ್ಟಬೇಕಿದೆ

Story first published: Thursday, November 7, 2024, 11:48 [IST]
Other articles published on Nov 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+