ಕ್ಯಾಚ್ ಬಿಟ್ಟು ಅಗ್ರಸ್ಥಾನವನ್ನು ಹೈದರಾಬಾದ್‌ಗೆ ಬಿಟ್ಟುಕೊಟ್ಟ ಕಿಂಗ್ಸ್
ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್)ನ 19ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಹಾಗೂ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳು ಬುಧವಾರ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಪಂಜಾಬ್ ಪಾಲಾಯಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ತಂಡದ ಆರಂಭ ಅಭಿಷೇಕ್ ಶರ್ಮಾ (35) ಹಾಗೂ ಟ್ರಾವಿಸ್ ಹೆಡ್ (35) ಜೋಡಿ 54 ರನ್ ಕಲೆ ಹಾಕಿತು. ಇಶಾನ್ ಕಿಶನ್ (32 ಎಸೆತಗಳಲ್ಲಿ 55 ರನ್) ಹಾಗೂ ಹೆನ್ರಿಕ್ ಕ್ಲಾಸೇನ್ (43 ಎಸೆತಗಳಲ್ಲಿ 69 ರನ್) ಮೂರನೇ ವಿಕೆಟ್‌ಗೆ 88 ರನ್ ಸೇರಿಸಿತು. ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ಕುಮಾರ್ ರೆಡ್ಡಿ (29 ರನ್) ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಸನ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 235 ರನ್ ಸೇರಿಸಿತು.

ಇದೇ ಲೀಗ್‌ನಲ್ಲಿ ದೊಡ್ಡ ಮೊತ್ತವನ್ನು ಚೇಸ್ ಮಾಡಿದ ಅನುಭವ ಹೊಂದಿರುವ ಪಂಜಾಬ್ ಕಿಂಗ್ಸ್ ತಂಡ ಆತ್ಮವಿಶ್ವಾಸದಿಂದಲೇ ಕಣಕ್ಕೆ ಇಳಿಯಿತು. ಆದರೆ ಪವರ್ ಪ್ಲೇನಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸುವಲ್ಲಿ ಪಂಜಾಬ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ವಿಫಲರಾದರು. ಪಂಜಾಬ್ ತಂಡದ ಪ್ರಿಯಾಂಶ್ ಆರ್ಯ (1), ಪ್ರಭ್‌ಸಿಮ್ರನ್ ಸಿಂಗ್ (3), ಚೇಸ್ ಮಾಸ್ಟರ್ ಎಂದೇ ಖ್ಯಾತಿ ಪಡೆಯುತ್ತಿರುವ ಶ್ರೇಯಸ್ ಅಯ್ಯರ್ (5) ಪವರ್ ಪ್ಲೇನಲ್ಲಿ ವಿಕೆಟ್ ಒಪ್ಪಿಸಿದರು. ಇದು ಸಹ ಪಂಜಾಬ್ ತಂಡ ಸೋಲಿಗೆ ಪ್ರಮುಖ ಕಾರಣವಾಗಿದೆ. ಆದರೆ ಇದನ್ನೂ ಬಿಟ್ಟು ಇನ್ನೊಂದು ದೊಡ್ಡ ಕಾರಣವಿದೆ.
ಪಂಜಾಬ್ ತಂಡ ಪವರ್ ಪ್ಲೇನಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟರ್ ಆಧಾರವಾಗಲಿಲ್ಲ. ಆದರೆ ಯುವ ಆಟಗಾರ ಕೂಪರ್ ಕಾನೋಲಿ 59 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ ಸಹಿತ ಅಜೇಯ 107 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು.
ಕ್ಯಾಚ್ ಬಿಟ್ಟು ಕೈ ಸುಟ್ಟುಕೊಂಡ ಪಂಜಾಬ್
ಪಂಜಾಬ್ ಈ ಪಂದ್ಯದಲ್ಲಿ ಸಾಲು ಸಾಲು ಕ್ಯಾಚ್‌ಗಳನ್ನು ಕೈ ಬಿಟ್ಟಿದೆ. ಇಶಾನ್ ಕಿಶನ್ 9 ರನ್ ಹಾಗೂ 18 ರನ್ ಆಗಿದ್ದಾಗ ಪಂಜಾಬ್ ತಂಡದ ಫೀಲ್ಡರ್‌ಗಳು ಕ್ಯಾಚ್ ಬಿಟ್ಟರು. ಇನ್ನು ಹೆನ್ರಿಕ್ ಕ್ಲಾಸೆನ್ ಸಹ 9 ರನ್ ಆಗಿದ್ದಾಗ ಜೀವದಾನ ಪಡೆದರು. ಈ ಮೂರು ಕ್ಯಾಚ್ ಬಿಟ್ಟ ಪರಿಣಾಮ ಇಶಾನ್, ಕ್ಲಾಸೇನ್ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇದುವೇ ಪಂಜಾಬ್ ಹೀನಾಯ ಸೋಲಿಗೆ ಕಾರಣವಾಯಿತು.
ಸಂಕ್ಷಿಪ್ತ ಸ್ಕೋರ್:
ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 235: ಇಶಾನ್ ಕಿಶನ್ 55, ಹೆನ್ರಿಕ್ ಕ್ಲಾಸೇನ್ 69, ಟ್ರಾವಿಸ್ ಹೆಡ್ 38, ಯುಜುವೇಂದ್ರ ಚಹಾಲ್ (ಪಂಜಾಬ್) 32ಕ್ಕೆ 1
ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 202: ಕೂಪರ್ ಕಾನೋಲಿ ಅಜೇಯ 107, ಮಾರ್ಕಸ್ ಸ್ಟೋಯ್ನಿಸ್ 28, ಪ್ಯಾಟ್ ಕಮಿನ್ಸ್ (ಎಸ್‌ಆರ್‌ಎಚ್) 34ಕ್ಕೆ 2,
ಪಂದ್ಯದ ಫಲಿತಾಂಶ: 33 ರನ್ ಜಯ ಸಾಧಿಸಿ ಹೈದರಾಬಾದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications