ಟ್ವಿಟ್ಟರ್ ನಲ್ಲಿ ಕೊಹ್ಲಿಗೆ ಸಲಹೆ, ಗೆಲ್ಲುವುದನ್ನು ಕಲಿರಿ!

ಲೀಡ್ಸ್, ಜುಲೈ 18: ಅತಿಥೇಯ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯ ರೋಚಕವಾಗಿರುತ್ತದೆ. ಟಿ20ಐ ಸರಣಿ ಗೆದ್ದಂತೆ, ಏಕದಿನ ಸರಣಿಯನ್ನು ಭಾರತ ಗೆಲ್ಲಲಿದೆ ಎಂಬ ಕನಸು ಕಂಡಿದ್ದ ಭಾರತ ತಂಡದ ಅಭಿಮಾನಿಗಳಿಗೆ ನಿರಾಶೆಯಾಗಿದೆ.
ಏಕದಿನ ಕ್ರಿಕೆಟ್ ನಲ್ಲಿ ಯಾರು ನಂ. 1 ಎಂಬುದನ್ನು ಭಾರತಕ್ಕೆ ಇಂಗ್ಲೆಂಡ್ ತೋರಿಸಿಕೊಟ್ಟಿದೆ. ಭಾರತ ನೀಡಿದ್ದ 257 ಸಾಧಾರಣ ರನ್ ಗುರಿಯನ್ನು ಇಂಗ್ಲೆಂಡ್ 44.3 ಓವರ್ ಗಳಲ್ಲಿ ತಲುಪಿತು. ಕೇವಲ 2 ವಿಕೆಟ್ ನಷ್ಟದೊಂದಿಗೆ 260 ರನ್ ಗಳಿಸಿ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು. ಜೋ ರೂಟ್ ಮತ್ತು ಇಯಾನ್ ಮಾರ್ಗನ್ ಜೊತೆಯಾಟ ಇಂಗ್ಲೆಂಡ್ ಗೆಲುವನ್ನು ಬರೆಯಿತು.
ಭಾರತ 50 ಓವರ್ ಗಳಿಗೆ 8 ವಿಕೆಟ್ ಕಳೆದು 256 ರನ್ ಪೇರಿಸಿ ಇಂಗ್ಲೆಂಡ್ ಗೆ 257 ರನ್ ಗುರಿ ನೀಡಿತ್ತು. ಶಾರ್ದೂಲ್ ಠಾಕೂರ್ 22 (13), ಭುವನೇಶ್ವರ್ ಕುಮಾರ್ 21 (35) ರನ್ ಗಳಿಸಿ ಅಂತಿಮ ಓವರ್ ಗಳಲ್ಲಿ ತಂಡಕ್ಕೆ ರನ್ ಬಲ ತುಂಬಿದ್ದು ಬಿಟ್ಟರೆ, ಬ್ಯಾಟಿಂಗ್ ವೈಫಲ್ಯ, ಪ್ರಖರ ಬೌಲಿಂಗ್ ದಾಳಿಯಿಲ್ಲದೆ, ಬಿಗಿ ಫೀಲ್ಡಿಂಗ್ ಕೊರತೆ ಎಲ್ಲವೂ ಭಾರತದ ಸೋಲಿಗೆ ಕಾರಣವಾಯ್ತು
ಕೆಎಲ್ ರಾಹುಲ್ ಆಡಿಸದೆ ತಪ್ಪು ಮಾಡಿದ್ರಿ
ಕೆಎಲ್ ರಾಹುಲ್ ಆಡಿಸದೆ ತಪ್ಪು ಮಾಡಿದ್ರಿ, ಧವನ್ ರನೌಟ್ ಮಾಡಿದ್ರಿ, ಉತ್ತಮ ಎಸೆತಕ್ಕೆ ಬಲಿಯಾದ್ರಿ, ಕೊಹ್ಲಿ ಏನ್ಮಾಡ್ಬಿಟ್ರಿ
ಜಾರ್ಜ್ ಕ್ಲೂನಿ ಥರಾ ಕಾಣುತ್ತಿರುವ ಧೋನಿ
ಹಾಲಿವುಡ್ ನಟ ಜಾರ್ಜ್ ಕ್ಲೂನಿ ಥರಾ ಕಾಣುತ್ತಿರುವ ಧೋನಿ, ವೃತ್ತಿ ಬದುಕಿನ ಕೊನೆ ದಿನಗಳನ್ನು ಎದುರಿಸುತ್ತಿದ್ದಾರೆಯೇ?
ತಂಡದ ಆಯ್ಕೆಯಲ್ಲಿ ಎಡವಿದ ಕೊಹ್ಲಿ
ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್ ರನ್ನು ಬದಲಿ ಆಟಗಾರರಂತೆ ಬಳಸಿದ ಕೊಹ್ಲಿ ಅವರು ಆಡುವ ಹನ್ನೊಂದು ಮಂದಿ ಆಯ್ಕೆಯಲ್ಲಿ ಸಂಪೂರ್ಣ ವಿಫಲರಾದರು.
ಇಂಗ್ಲೆಂಡ್ ಸರಣಿಯಿಂದ ಪಾಠ ಕಲಿಯಿರಿ
ಕಳೆದ ಬಾರಿ ಇಂಗ್ಲೆಂಡ್ ಸರಣಿ ಕಳೆದುಕೊಂಡ ಬಳಿಕ ಭಾರತ ಉತ್ತಮ ರೀತಿಯಲ್ಲಿ ಆಡಿತ್ತು, ಈಗ ಯಾರ ರೀತಿ ಬದಲಾಗುತ್ತೋ ಕಾದು ನೋಡಬೇಕಿದೆ.ವಿಶ್ವಕಪ್ ಗೆ ತಯಾರಿ ಸರಿಯಾಗಿ ಆಗಬೇಕಿದೆ.
ಈಗಿನ ಧೋನಿ- ಆಗಿನ ಧೋನಿ
ಈಗಿನ ಧೋನಿಯನ್ನು ಆಗಿನ ಧೋನಿ ತಂಡದಿಂದ ಕಿತ್ತು ಹಾಕುತ್ತಿದ್ದರು. 2010ರ ಧೋನಿ ನಾಯಕರಾಗಿದ್ದರೆ, 2018ರ ಧೋನಿಯನ್ನು ಒಡಿಐ ತಂಡದಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ.
ಸತತ ಸರಣಿ ಗೆಲುವಿನ ನಂತರ ಸೋಲು
ಸತತ ಸರಣಿ ಗೆಲುವಿನ ನಂತರ ಸೋಲು. 9 ಸರಣಿ ಗೆಲುವಿನ ನಂತರ ಭಾರತಕ್ಕೆ ಮೊದಲ ದ್ವಿಪಕ್ಷೀಯ ಸರಣಿ ಸೋಲು. ಇಂಗ್ಲೆಂಡಿಗೆ ಸತತ 8ನೇ ಸರಣಿ ಜಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications