ಟಿ20 ತಂಡಕ್ಕೆ ಮರಳಿದ ನೆಹ್ರಾ, ಯಾಕ್ ಗಾಬರಿ ಆದ್ರಾ!
ಬೆಂಗಳೂರು, ಅಕ್ಟೋಬರ್ 03: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರು ಟಿ20ಐ ಪಂದ್ಯಗಳಿಗೆ 15 ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಹಿರಿಯ ಅನುಭವಿ ವೇಗದ ಬೌಲರ್ ಆಶಿಶ್ ನೆಹ್ರಾ ತಂಡಕ್ಕೆ ಮರಳಿರುವುದು ಹಲವರಿಗೆ ಅಚ್ಚರಿ ತಂದಿದೆ.
ಅಕ್ಟೋಬರ್ 7ರಿಂದ ಟಿ-20 ಸರಣಿ ಆರಂಭವಾಗಲಿದ್ದು ಮೊದಲ ಪಂದ್ಯ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ವಿರಾಮ ಪಡೆದಿದ್ದ ಹಿರಿಯ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಟಿ-20 ತಂಡದಲ್ಲಿಯೂ ಕಾಣಿಸಿಕೊಂಡಿಲ್ಲ.
ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ತಂಡಕ್ಕೆ ಆಯ್ಕೆಯಾಗದ ಇತರ ಪ್ರಮುಖ ಆಟಗಾರರಾಗಿದ್ದಾರೆ.
ಆದರೆ, 38 ವರ್ಷ ವಯಸ್ಸಿನ ನೆಹ್ರಾ ಅವರಿಗೆ ಆಯ್ಕೆದಾರರು ಮಣೆ ಹಾಕಿರುವುದಕ್ಕೆ ಟ್ವಿಟ್ಟರ್ ನಲ್ಲಿ ಅಚ್ಚರಿ ವ್ಯಕ್ತವಾಗಿದೆ.
ಕೆಲವರು ಮಾತ್ರ ನೆಹ್ರಾ ಅವರ ಅನುಭವ ಟಿ20 ತಂಡಕ್ಕೆ ಅಗತ್ಯ ಎಂದಿದ್ದಾರೆ. ನೆಹ್ರಾ ಅವರ ಪರ ವಿರೋಧ ಟ್ವೀಟ್ ಗಳತ್ತ ಒಂದು ನೋಟ ಇಲ್ಲಿದೆ.
ಗಾಯಾಳುವಾಗಿದ್ದರಿಂದ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದ ನೆಹ್ರಾ, ಆಸೀಸ್ ವಿರುದ್ಧ ಆಡಿದ್ದರು.
ಕಳೆದ ವರ್ಷ ಏಷ್ಯಾ ಕಪ್ ಟಿ20ಯಲ್ಲಿ 16.50 ಬೌಲಿಂಗ್ ಸರಾಸರಿಯಂತೆ 6 ವಿಕೆಟ್ ಗಳಿಸಿದ್ದರು. ವಿಶ್ವ ಟಿ20ಯಲ್ಲಿ 22 ಸರಾಸರಿಯಂತೆ 5 ವಿಕೆಟ್ ಗಳಿಸಿದ್ದರು.
ಐಪಿಎಲ್ ಸೇರಿದಂತೆ ಟಿ20ಯಲ್ಲಿ ನೆಹ್ರಾ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಆದರೆ, ಯುವ ಕ್ರಿಕೆಟರ್ಸ್ ಬದಿಗೊತ್ತಿ ನೆಹ್ರಾಗೆ ಸ್ಥಾನ ಕಲ್ಪಿಸಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಪ್ರಶ್ನೆ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications