ಮಿಸ್ಟರ್ 360 ಎಬಿ ಡಿ ವಿಲಿಯರ್ಸ್ 'ಏಂಜೆಲ್ ಆಫ್ ಕ್ರಿಕೆಟ್'

ಬೆಂಗಳೂರು, ಮೇ 23: ಸುಮಾರು 14 ವರ್ಷಗಳ ಕಾಲ ಕ್ರಿಕೆಟ್ ಪ್ರೇಮಿಗಳ ಮನ ತಣಿಸಿದ ಮಿ. 360 ಎಬಿ ಡಿ ವಿಲಿಯರ್ಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಟಿಗೆ ವಿದಾಯ ಹೇಳಿದ್ದಾರೆ.
114 ಟೆಸ್ಟ್, 228 ಏಕದಿನ, 78 ಟಿ20ಐಗಳಿಂದ 47ಶತಕಗಳು ಸೇರಿದಂತೆ ಸುಮಾರು 20 ಸಾವಿರಕ್ಕೂ ಅಧಿಕ ರನ್ ಗಳನ್ನು ಗಳಿಸಿದ ಎಬಿಡಿ, ಕ್ರಿಕೆಟ್ ಆಟಕ್ಕೆ ಹೊಸ ಭಾಷ್ಯ ಬರೆದವರು.
ಅತ್ಯಂತ ತ್ವರಿತ ಗತಿಯಲ್ಲಿ 50, 100, 150ರನ್ ಗಳನ್ನು ಒಡಿಐನಲ್ಲಿ ಬಾರಿಸಿದ ಎಬಿಡಿ ಆಡುವ ಶೈಲಿಗೆ ಮನ ಸೋಲದವರಿಲ್ಲ. ಎದುರಾಳಿ ತಂಡದವರು ಹೊಟ್ಟೆಕಿಚ್ಚು ಪಡುವಂಥ ಆಟಗಾರ, ಸ್ನೇಹ ಜೀವಿ, ಅಜಾತಶತ್ರುವಾಗಿ ಉಳಿದವರು.
ವಿದಾಯದ ಪಂದ್ಯ, ವಿಶ್ವಕಪ್ ಗೆಲ್ಲದೇ ವಿದಾಯ ಹೇಳಿದ್ದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. 34 ವರ್ಷ ವಯಸ್ಸಿನ ಎಬಿಡಿ ಅವರು ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಕ್ಕೆ ಮಾಜಿ ಕ್ರಿಕೆಟರ್ಸ್, ಫ್ಯಾನ್ಸ್ ಗಳಿಂದ ಭರಪೂರ ಪ್ರತಿಕ್ರಿಯೆಗಳು ಬಂದಿವೆ.
ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು 'ಗಾಡ್ ಆಫ್ ಕ್ರಿಕೆಟ್' ಎಂದು ಅಭಿಮಾನಿಗಳು ಕರೆಯುವುದಾದರೆ, ಎಬಿ ಡಿ ವಿಲಿಯರ್ಸ್ ಅವರನ್ನು 'ಏಂಜೆಲ್ ಆಫ್ ಕ್ರಿಕೆಟ್' ಎಂದೇಕೆ ಕರೆಯಬಾರದು ಎಂದು ಅಭಿಮಾನಿಗಳು ಕೇಳಿದ್ದಾರೆ.
ವಿಶ್ವಕಪ್ ಗೆಲುವಿಲ್ಲ, ವಿದಾಯದ ಪಂದ್ಯವಿಲ್ಲ
ವಿಶ್ವಕಪ್ ಗೆಲುವಿಲ್ಲ, ವಿದಾಯದ ಪಂದ್ಯವಿಲ್ಲ, ಇದು ಯಾಕೋ ಸರಿಯಲ್ಲ
ಎಬಿ ಡಿ ಪಂದ್ಯಗಳ ಅಂಕಿ ಅಂಶ
ಮಿಸ್ಟರ್ 360 ಎಬಿ ಡಿ ವಿಲಿಯರ್ಸ್ ಪಂದ್ಯಗಳ ಅಂಕಿ ಅಂಶಗಳನ್ನು ಹಂಚಿಕೊಂಡ ಅಭಿಮಾನಿಗಳು.
360 ಕೋನದಲ್ಲಿ ಬ್ಯಾಟಿಂಗ್ ಆಡುವುದನ್ನು ಕಲಿಸಿದ
360 ಕೋನದಲ್ಲಿ ಬ್ಯಾಟಿಂಗ್ ಆಡುವುದನ್ನು ಕಲಿಸಿದ ಎಬಿ ಡಿ ವಿಲಿಯರ್ಸ್.
ಪ್ರಮುಖ ಕಪ್ ಗೆದ್ದಿಲ್ಲ
ಎಬಿ ಡಿ ವಿಲಿಯರ್ಸ್ ಅವರು ಯಾವುದೇ ಪ್ರಮುಖ ಕಪ್ ಗೆದ್ದಿಲ್ಲ, 2019ರ ವಿಶ್ವಕಪ್ ತನಕವಾದರೂ ಆಡಬೇಕಿತ್ತು.
ಕ್ರಿಕೆಟ್ ಆಟದ ಸಂಭಾವಿತ ಆಟಗಾರ
ಕ್ರಿಕೆಟ್ ಜಂಟೆಲ್ ಮನ್ ಗೇಮ್ ಎನ್ನುವುದಾರೆ ಈ ಆಟದ ಸಂಭಾವಿತ ಆಟಗಾರ ಎಬಿ ಡಿ ವಿಲಿಯರ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications