ಚೆನ್ನೈ ಪರ ಆಡಲು ಧೋನಿಗೆ ಅವಕಾಶ, ಥ್ರಿಲ್ಲಾದ ಫ್ಯಾನ್ಸ್

Posted By:

ಬೆಂಗಳೂರು, ಡಿಸೆಂಬರ್ 06: ಟೀಂ ಇಂಡಿಯಾದ ಮಾಜಿ ನಾಯಕ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಇದ್ದ ಆತಂಕ ನಿವಾರಣೆಯಾದ ಸುದ್ದಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ಸಂಭ್ರಮದಿಂದ ಟ್ವೀಟ್ ಮಾಡಲು ಶುರು ಮಾಡಿದ್ದಾರೆ.

ಐಪಿಎಲ್ 2018 : ಆಟಗಾರರ ಸಂಬಳ, ಧೋನಿ ಎಲ್ಲಿಗೆ? ಇತ್ಯಾದಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಐಪಿಎಲ್ ಆಡಳಿತ ಮಂಡಳಿ ಬುಧವಾರ ಸಭೆ ನಡೆಸಿ ಹೊಸ ನಿಯಮಾವಳಿಗಳನ್ನು ರೂಪಿಸಿದ್ದು, ಇದರಲ್ಲಿ ಆಟಗಾರರನ್ನು ಉಳಿಸಿಕೊಳ್ಳಲು ಇದ್ದ ನಿಯಮ ಪ್ರಮುಖವಾಗಿದೆ.

ಎರಡು ವರ್ಷಗಳ ಕಾಲ ಅಮಾನತುಗೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್ ಆರ್) ತಂಡಗಳು ಮತ್ತೊಮ್ಮೆ ಕಣಕ್ಕಿಳಿಯಬಹುದಾಗಿದೆ.

ಬೇರೆ ಬೇರೆ ತಂಡಗಳಲ್ಲಿರುವ ಈ ಎರಡು ತಂಡಗಳ ಪ್ರಮುಖ ಆಟಗಾರರು ಈಗ 2018ರ ಹರಾಜಿಗೆ ಲಭ್ಯರಾಗಿದ್ದಾರೆ. ಆದರೆ, 5 ಆಟಗಾರರನ್ನು ತಂಡಗಳು ಉಳಿಸಿಕೊಳ್ಳುವ ವ್ಯವಸ್ಥೆಯನ್ನು ಐಪಿಎಲ್ ಮಂಡಳಿ ಕಲ್ಪಿಸಿದೆ.

ತಂಡದಲ್ಲಿ ಆಟಗಾರರ ಸಂಖ್ಯೆ

ತಂಡದಲ್ಲಿ ಆಟಗಾರರ ಸಂಖ್ಯೆ: 25 ಆಟಗಾರರು (8 ಗರಿಷ್ಠ ವಿದೇಶಿ ಆಟಗಾರರು), ಕನಿಷ್ಟ 18 ಆಟಗಾರರು. 5 ಹಳೆ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ.

ಧೋನಿ ಮತ್ತೆ ತಂಡಕ್ಕೆ ಸೇರ್ಪಡೆ, ಚೆನ್ನೈ ತಂಡದ ಅಭಿಮಾನಿಗಳಿಂದ ಮೆರ್ಸಲ್ ಚಿತ್ರ ನೆನಪಿಸುವ ಟ್ವೀಟ್ ಗಳು ಬರುತ್ತಿವೆ. ತಲಾ (ನಾಯಕ) ಮತ್ತೆ ತಂಡಕ್ಕೆ ಬಂದಿದ್ದಾರೆ ಎಂದು ಧೋನಿಯನ್ನು ಹೊಗಳಲಾಗುತ್ತಿದೆ.

ಯಾವೆಲ್ಲ ಆಟಗಾರರು ಚೆನ್ನೈಗೆ ವಾಪಸ್?

ಆಟಗಾರರನ್ನು ಉಳಿಸಿಕೊಳ್ಳುವ ವ್ಯವಸ್ಥೆ ಮೂಲಕ ಹಾಗೂ ಖರೀದಿ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ರಮುಖ ಆಟಗಾರರಾದ ಎಂಎಸ್ ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜ, ಡರೇನ್ ಬ್ರಾವೋ ಹಾಗೂ ಬ್ರೆಂಡನ್ ಮೆಕಲಮ್ ರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು.

ತಮಿಳುನಾಡಿನ ರಾಜಕೀಯಕ್ಕೆ ಹೋಲಿಸಲಾಗಿದೆ

ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಗೆ ಮರಳುತ್ತಿರುವುದನ್ನು ತಮಿಳುನಾಡಿನ ರಾಜಕೀಯಕ್ಕೆ ಹೋಲಿಸಲಾಗಿದೆ. ಧೋನಿ ಅವರು ತಂಡಕ್ಕೆ ಮರಳುತ್ತಿರುವುದು ನೋಡಿದರೆ ಜಯಲಲಿತಾ ಅವರಿಗೆ ಪನ್ನೀರ್ ಸೆಲ್ವಂ ಅವರು ಮತ್ತೊಮ್ಮೆ ಅಧಿಕಾರ ಹಸ್ತಾಂತರಿಸಿದಂತೆ ಕಾಣಿಸುತ್ತಿದೆ ಎಂದು ಟ್ವೀಟ್ ಬಂದಿದೆ.

ಧೋನಿಗೆ ಸ್ವಾಗತ ಕೋರುವ ಟ್ವೀಟ್

ಧೋನಿಗೆ ಸ್ವಾಗತ ಕೋರುವ ಟ್ವೀಟ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ವೈವಿಧ್ಯಮಯವಾಗಿವೆ. ವೆಲ್ ಕಮ್ ತಲಾ ಎಂದು ಹ್ಯಾಶ್ ಟ್ಯಾಗ್ ಹಾಕಲಾಗಿದೆ.

ಶ್ರೀನಿಮಾಮ ಹಾಗೂ ಧೋನಿ

ಶ್ರೀನಿಮಾಮ(ಎನ್ ಶ್ರೀನಿವಾಸನ್) ಹಾಗೂ ಧೋನಿ ಅವರು ಈಗ ಯಾವ ರೀತಿ ಕಾಣಬಹುದು ಎಂಬುದನ್ನು ರಜನಿಕಾಂತ್ ನ ಕಬಾಲಿ ಚಿತ್ರದ ದೃಶ್ಯದ ಮೂಲಕ ತೋರಿಸಲಾಗಿದೆ.

Story first published: Wednesday, December 6, 2017, 19:00 [IST]
Other articles published on Dec 6, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ