For Quick Alerts
ALLOW NOTIFICATIONS  
For Daily Alerts
 

ಭಾರತ-ಬಾಂಗ್ಲಾ ಪಂದ್ಯಕ್ಕೆ ತರಹೇವಾರಿ ಟ್ವೀಟ್‌ ಪ್ರತಿಕ್ರಿಯೆಗಳು

ದುಬೈ, ಸೆಪ್ಟೆಂಬರ್ 22: ನಿನ್ನೆ ದುಬೈನಲ್ಲಿ ನಡೆದ ಏಷ್ಯಾಕಪ್‌ನ ಸೂಪರ್‌-4 ಹಂತದ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶದ ಮೇಲೆ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಬಾಂಗ್ಲಾದೇಶವು ನೀಡಿದ್ದ 173 ರನ್‌ಗಳ ಗುರಿಯನ್ನು ಕೇವಲ 36.2 ಓವರ್‌ಗಳಲ್ಲಿ ಇನ್ನೂ 7 ವಿಕೆಟ್ ಇರುವಂತೆಯೇ ತಲುಪಿದ ಭಾರತ ಸರಣಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.

ಮೊನ್ನೆ ಪಾಕಿಸ್ತಾನವನ್ನು ಮಣಿಸಿ ಬೀಗಿದ್ದ ಭಾರತ ನಿನ್ನೆ ಬಾಂಗ್ಲಾದೇಶವನ್ನು ಮಣಿಸಿದೆ. ರೋಹಿತ್ ಶರ್ಮಾರ ಅಜೇಯ 83 ಮತ್ತು ರವೀಂದ್ರ ಜಡೇಜಾ ಅವರ ಅತ್ಯುತ್ತಮ ಬೌಲಿಂಗ್‌ನಿಂದಾಗಿ ಭಾರತವು ಬಾಂಗ್ಲಾ ಮೇಲೆ ಸುಲಭದ ಜಯ ತನ್ನದಾಗಿಸಿಕೊಂಡಿತು.

ಭಾರತ ಬಾಂಗ್ಲಾದೇಶ ಪಂದ್ಯದ ಫಲಿತಾಂಶದ ಬಗ್ಗೆ ಟ್ವಿಟ್ಟರ್‌ನಲ್ಲಿ ತರಹೇವಾರಿ ಟ್ವೀಟ್ ಪ್ರತಿಕ್ರಿಯೆಗಳು ಬಂದಿದ್ದು, ಒಮ್ಮೆ ಕಣ್ಣಾಡಿಸೋಣ ಬನ್ನಿ.

ಪಾಕ್, ಬಾಂಗ್ಲಾಗಿಂತ ಹಾಂಕಾಂಗ್ ಉತ್ತಮ ತಂಡ

ಭಾರತ- ಹಾಂಕಾಂಗ್‌ ಪಂದ್ಯದಲ್ಲಿ ಒಂದು ಹಂತದಲ್ಲಿ ಹಾಂಕಾಂಗ್‌ 174 ರನ್‌ಗಳಿಗೆ ಒಂದೂ ವಿಕೆಟ್ ಕಳೆದುಕೊಂಡಿರಲಿಲ್ಲ. ಆದರೆ ಅದೇ ಭಾರತದ ವಿರುದ್ಧ ಪಾಕಿಸ್ತಾನ 162 ರನ್‌ಗಳಿಗೆ ಆಲ್‌ಔಟ್ ಆಯಿತು. ಬಾಂಗ್ಲಾದೇಶ 173 ರನ್‌ಗಳಿಗೆ ಆಲ್‌ಔಟ್ ಆಯಿತು. ಹಾಗಾಗಿ ಹಾಂಕಾಂಗ್‌ ತಂಡವು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಎರಡನ್ನೂ ಸೋಲಿಸಿದಂತಾಯಿತು ಎಂದು ಲೆಕ್ಕ ನೀಡಿರುವುದು ಚಚ್ಚಾ ಚಕ್ನಾ ಎಂಬ ಪ್ಯಾರೆಡಿ ಖಾತೆ.

ರೋಹಿತ್‌ ಶರ್ಮಾಗೆ ವಿರಾಟ್‌ ಮೇಲೆ ಹೊಟ್ಟೆಉರಿ

ರೋಹಿತ್ ಶರ್ಮಾ ಈ ಸರಣಿಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇಷ್ಟೊಂದು ಚೆನ್ನಾಗಿ ಅವರು ಆಡಿರಲಿಲ್ಲ. ರೋಹಿತ್‌ ಗೆ ವಿರಾಟ್ ಕೊಹ್ಲಿ ಮೇಲೆ ಹೊಟ್ಟೆ ಉರಿ ಇರುವ ಕಾರಣಕ್ಕೆ ಅವರು ಕೊಹ್ಲಿ ನಾಯಕತ್ವದಲ್ಲಿ ಆಡುತ್ತಿಲ್ಲ ಎಂದು ಕೊಂಕು ಟ್ವೀಟ್ ಮಾಡಿದ್ದಾರೆ ವಿರಾಟ್ ಕೊಹ್ಲಿ ಫ್ಯಾನ್ಸ್‌ ಕ್ಲಬ್‌.

ಅಂಡರ್‌ 19 ತಂಡ ಕಳಿಸಿ

ಭಾರತವು ಏಷ್ಯಾಕಪ್‌ಗೆ ತನ್ನ ಅಂಡನ್ 19 ತಂಡವನ್ನು ಕಳಿಸಬೇಕು ಆಗಲಾದರು ಇತರ ಏಷ್ಯಾ ತಂಡಗಳು ಭಾರತಕ್ಕೆ ಸರಿಯಾದ ಪ್ರತಿಸ್ಪರ್ಧೆ ಕೊಡಲಾಗುತ್ತದೆಯಾ ನೋಡಬೇಕು ಎಂದು ಹೇಳಿ ಇತರ ತಂಡಗಳ ಪ್ರತಿಭೆಯನ್ನೇ ಪ್ರಶ್ನೆ ಮಾಡಿದ್ದಾರೆ ಶ್ರವಣ್‌.

ಶೋಯೇಬ್ ಅಖ್ತರ್ ಮಾತು ಉಳಿಸಿದ ಜಮಾನ್

ಫಕ್ಹಾರ್ ಜಮಾನ್‌ ಏಷ್ಯಾಕಪ್‌ನಲ್ಲಿ ದ್ವಿಶತಕ ಭಾರಿಸುತ್ತಾರೆ ಎಂದು ಶೋಯೇಬ್ ಅಖ್ತರ್ ಹೇಳಿದ್ದರು. ಆದರೆ ಅವರು ಅಖ್ತರ್‌ ಮಾತು ಉಳಿಸಲೆಂದು ಒಂದು ಪಂದ್ಯದಲ್ಲಿ 2 ರನ್ ಹಾಗೂ ಉಳಿದ ಎರಡು ಪಂದ್ಯದಲ್ಲಿ 00 ಗಳಿಸಿದ್ದಾರೆ. ಎಂದು ಶೋಯೇಬ್ ಹಾಗೂ ಫಕ್ಹಾರ್ ಜಮಾನ್‌ ಅನ್ನು ಅಣಕಿಸಿದ್ದಾರೆ ಪರಿ.

ವಾಟ್‌ ಎ ಕಮ್‌ ಬ್ಯಾಕ್ ಜಡೇಜಾ...

ತಂಡದಿಂದ ಕೈಬಿಡಲಾಗಿತ್ತು, ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಯ್ತು, ಬರೋಬ್ಬರಿ 15 ತಿಂಗಳುಗಳ ನಂತರ ಅಂತರರಾಷ್ಟ್ರೀಯ ಏಕದಿನ ಪಂದ್ಯ ಆಡಿದ, 29 ರನ್‌ಗೆ 4 ವಿಕೆಟ್ ಪಡೆದರು, ತಂಡಕ್ಕೆ ಮರಳಿದ ಪಂದ್ಯದಲ್ಲೇ ಪಂದ್ಯ ಪುರುಶೋತ್ತಮ, ವಾವ್, ವಾಟ್‌ ಎ ಕಮ್‌ ಬ್ಯಾಕ್ ಜಡೇಜಾ ಎಂದು ಬೆನ್ನುತಟ್ಟಿದ್ದಾರೆ ಸರ್ ರವೀಂದ್ರ ಜಡೇಜಾ ಪ್ಯಾರೆಡಿ ಖಾತೆ.

ಪಾಕಿಸ್ತಾನದ ವಿರುದ್ದ ನೈತಿಕ ವಿಜಯ!

ಭಾರತವು ಪಾಕಿಸ್ತಾನವನ್ನು 162ಕ್ಕೆ ಆಲ್‌ಔಟ್ ಮಾಡಿತು. ಎಂಟು ವಿಕೆಟ್‌ಗಳಿಂದ ಪಂದ್ಯ ಜಯಿಸಿತು. ಬಾಂಗ್ಲಾವನ್ನು 173 ರನ್‌ಗಳಿಗೆ ಆಲ್‌ಔಟ್ ಮಾಡಿತು, 7 ವಿಕೆಟ್‌ಗಳಿಂದ ಗೆದ್ದಿತು. ಹಾಗಾಗಿ ಬಾಂಗ್ಲಾವು ಪಾಕಿಸ್ತಾನಕ್ಕಿಂತ ಉತ್ತಮವಾಗಿ ಆಡಿದೆ ಪಾಕ್‌ ವಿರುದ್ದ ಬಾಂಗ್ಲಾಕ್ಕೆ 'ನೈತಿಕ ಜನ' ದೊರೆತಿದೆ ಎಂದು ಬಾಂಗ್ಲಾದಲ್ಲಿ 'ನಾಗಿನ್ ಡಾನ್ಸ್‌' ಆಡಿ ಸಂಭ್ರಮಪಡುತ್ತಿದ್ದಾರಂತೆ.

ಧೋನಿಯ ಮಾಸ್ಟರ್‌ ಮೈಂಡ್‌ಗೆ ಸಾಕ್ಷಿ

ನಿನ್ನೆಯ ಪಂದ್ಯದಲ್ಲಿ ಧೋನಿಯ ಮಾಸ್ಟರ್‌ ಮೈಂಡ್‌ಗೆ ಮತ್ತೊಂದು ಸಾಕ್ಷಿ ಸಿಕ್ಕಿತು. ಶಕೀಬ್‌-ಉಲ್-ಹಸನ್ ಸತತ ಎರಡು ಬೌಂಡರಿ ಹೊಡೆದಾಗ ರೋಹಿತ್ ಬಳಿ ಹೋದ ಧವನ್‌ ಫೀಲ್ಡಿಂಗ್‌ ಚೇಂಜ್‌ಗೆ ಸಲಹೆ ನೀಡಿ ಸ್ಲಿಪ್‌ನಲ್ಲಿ ನಿಂತಿದ್ದ ಧವನ್‌ರನ್ನು ಲೆಗ್‌ ಗಲ್ಲಿಗೆ ಬದಲಾಯಿಸಿದರು. ಅದರ ಮರು ಎಸೆತದಲ್ಲೇ ಶಕೀಬ್ ನೇರ ಧವನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಬ್ಯಾಟ್ಸ್‌ಮನ್‌ಗಳ ಮನಸ್ಸನ್ನು ವಿಕೆಟ್‌ ಹಿಂದೆಯಿಂದ ಧೋನಿ ಅಳೆದಷ್ಟು ಉತ್ತಮವಾಗಿ ಯಾರೂ ಅಳೆಯಲಾರರು.

Story first published: Saturday, September 22, 2018, 10:57 [IST]
Other articles published on Sep 22, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+