ಸುಹಾನಾ ಖಾನ್ ನತ್ತ ಎಲ್ಲರ ಚಿತ್ತ
ಪಂದ್ಯ ನೋಡಲು ಆಗಮಿಸಿದ್ದ ಕೆಕೆಆರ್ ತಂಡದ ಮಾಲೀಕ ಶಾರುಕ್ ಖಾನ್ ಮತ್ತು ಆತನ ಕುಟುಂಬದ ಚಿತ್ರಗಳು ಟ್ವಿಟ್ಟರ್‌ನಲ್ಲಿ ವೈರಲ್ ಆಗಿವೆ. ಅದರಲ್ಲಿಯೂ ಶಾರುಕ್ ಮಗಳು ಸುಹಾನಾ ಖಾನ್ ಅಂತೂ ನಿನ್ನೆ ಪಂದ್ಯದಲ್ಲಿ ಅತ್ಯುತ್ತಮ ಆಟ ಆಡಿ ಕೆಕೆಆರ್‌ಗೆ ಗೆಲುವು ದೊರಕಿಸಿದ ಸುನಿಲ್ ನರೇನ್‌ಗಿಂತಲೂ ಹೆಚ್ಚಿನ 'ಕ್ಯಾಮೆರಾ ಫೋಕಸ್' ಗಳಿಸಿದ್ದಾರೆ. ಈಗಾಗಲೇ ಕೆಲವರು 'ಶಾರುಕ್ ಖಾನ್ ಮಗಳನ್ನು ಮದುವೆ ಆಗುವುದು ಹೇಗೆ?' ಎಂದು ಗೂಗಲ್‌ನಲ್ಲಿ ಹುಡುಕುತ್ತಿದ್ದಾರಂತೆ.
ಎಬಿಡಿ ಆಡಿದ 11 ಪಂದ್ಯದಲ್ಲಿ ಸೋಲು
ಕಳೆದ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಆರ್‌ಸಿಬಿಗೆ ಈ ಐಪಿಎಲ್ ಋತುವಿನ ಮೊದಲ ಪಂದ್ಯದಲ್ಲೇ ಸೋಲು ಅನುಭವಿಸುವುದು ಆರ್‌ಸಿಬಿ ಅಭಿಮಾನಿಗಳಲ್ಲಿ ಸಹಜವಾಗಿಯೇ ಬೇಸರ ಮೂಡಿಸಿದೆ. ಆರ್‌ಸಿಬಿಯು ಎಬಿಡಿವಿಲಿಯರ್ಸ್ ಉಪಸ್ಥಿತಿಯಲ್ಲಿ ಆಡಿದ ಕಳೆದ 11 ಪಂದ್ಯಗಳಲ್ಲಿ ಸತತವಾಗಿ ಸೋಲನ್ನು ಅನುಭವಿಸಿದೆ.
ಅದೃಷ್ಟದ ಹುಡುಗ ರಾನಾ
ಸತತ ಎರಡು ಎಸೆತದಲ್ಲಿ ಸೆಟ್ ಬ್ಯಾಟ್ಸ್‌ಮನ್‌ಗಳಾದ ಎಬಿಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದ ಸಾಂದರ್ಭಿಕ ಬೌಲರ್ ರಾನಾ ಅವರ ಬಗ್ಗೆ ಸಾಕಷ್ಟು ಟ್ವೀಟ್‌ಗಳು ಹರಿದಾಡುತ್ತಿವೆ. 'ನಾನೊಮ್ಮೆ ಹೀಗೆ ಎರಡು ಎಸೆತದಲ್ಲಿ ಇಬ್ಬರು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದೆ' ಎಂದು ರಾನಾ ತನ್ನ ಮೊಮ್ಮಕ್ಕಳಿಗೆ ಕತೆ ಹೇಳಬಹುದು. ಎಂದು ಕಾಲೆಳೆದಿದ್ದಾರೆ ಮೊಹಮ್ಮದ್ ಕೈಫ್. ರಾನಾ ಆ ಎರಡು ವಿಕೆಟ್ ತೆಗೆದ ನಂತರ ತನ್ನ ಕ್ರಿಕೆಟ್ ವೃತ್ತಿಗೆ ನಿವೃತ್ತಿ ಹೇಳಿದ್ದರೂ ಅವರ ಕ್ರಿಕೆಟ್ ಜೀವನ ಪರಿಪೂರ್ಣವೇ ಆಗಿರುತ್ತಿತ್ತು ಎಂದಿದ್ದಾರೆ ಮತ್ತೊಬ್ಬರು.
ಆರ್‌ಸಿಬಿ ಅಭಿಮಾನಿಗಳ ಸ್ಥಿತಿ..
ಮೊದಲ ಪಂದ್ಯವನ್ನು ಕಾತರದಿಂದ ಎದುರುನೋಡುತ್ತಿದ್ದ ಆರ್‌ಸಿಬಿ ಅಭಿಮಾನಿಗಳು, ಆರ್‌ಸಿಬಿಯು ಪಂದ್ಯ ಸೋತನಂತರ ತಮ್ಮ ಹತಾಶೆಯನ್ನು ಹೀಗೆ ವ್ಯಕ್ತಪಡಿಸಿರಬಹುದೇ ಎಂದು ಇಲ್ಲೊಬ್ಬರು ಟ್ವೀಟ್ ಮಾಡಿದ್ದಾರೆ. ಒಂದು ಪಂದ್ಯ ಸೋತದ್ದಕ್ಕೇ ಹೀಗೆಲ್ಲಾ ಕಾಲೆಳೆಯುವುದೇ ಪಾಪ...
ಎಬಿಡಿ, ವಿರಾಟ್ ಇಬ್ಬರಿಂದಲೇ ಆರ್‌ಸಿಬಿ
ಎಬಿಡಿ ಮತ್ತು ವಿರಾಟ್ ಕೊಹ್ಲಿ ಸ್ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ರನ್‌ರೇಟ್ ಉತ್ತಮವಾಗಿತ್ತು, ಸುನಿಲ್ ನರೇನ್‌ಗೆ ಸಿಕ್ಸ್ ಭಾರಿಸಿ ದೊಡ್ಡ ಇನ್ನಿಂಗ್ಸ್ ಕಟ್ಟುವ ಭರವಸೆಯನ್ನು ಎಬಿಡಿ ತೋರಿದ್ದರು, ಆದರೆ ವಿರಾಟ್ ಮತ್ತು ಎಬಿಡಿ ಔಟ್ ಆದ ನಂತರ ಆರ್‌ಸಿಬಿ ತಂಡ ಕುಸಿಯಲಾರಂಭಿಸಿತು. ಇದನ್ನು ಚಿತ್ರರೂಪದಲ್ಲಿ ಹೇಳಿದ್ದಾರೆ ಇಲ್ಲೊಬ್ಬರು. ಎಬಿಡಿ ಮತ್ತು ವಿರಾಟ್ ಇಬ್ಬರೇ ಇಡೀ ತಂಡವನ್ನು ಕಾಪಾಡುತ್ತಿದ್ದಾರೆ.
ಆಕಾಶ್ ಚೋಪ್ರಾ ವಿಶ್ಲೇಷಣೆ
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಈವರೆಗೆ ಐಪಿಎಲ್‌ನಲ್ಲಿ ನಡೆದ ಮೂರು ಪಂದ್ಯಗಳ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಟಾಸ್ ಗೆದ್ದು ಚೇಸಿಂಗ್ ಆಯ್ಕೆ ಮಾಡಿಕೊಂಡ ಮೂರು ತಂಡಗಳು ವಿಜಯಿಯಾಗಿವೆ, ಜೊತೆಗೆ ಗೆದ್ದ ತಂಡ ಮೂರು ಜನ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿದೆ ಹಾಗಾಗಿ ಇದು ಗೆಲುವಿನ ಮಂತ್ರ ಸಹ ಆಗಿರಬಹುದು ಎಂಬುದು ಅವರ ವಿಶ್ಲೇಷಣೆ. ನೆನಪಿರಲಿ ಪಂದ್ಯ ಪ್ರಾರಂಭಕ್ಕೂ ಮುನ್ನಾ ಆಕಾಶ್ ಚೋಪ್ರಾ ಹೇಳಿದ್ದ ಯಾವ ತಂಡವೂ ಗೆದ್ದಿಲ್ಲ.
ಸುನಿಲ್ ನರೇನ್ ಔಟ್ ಆಫ್ ಸಿಲೆಬಸ್
ಕೆಕೆಆರ್‌ನ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್‌ಲೆನ್ ಅನ್ನು ತಡೆಯಲು ಆರ್‌ಸಿಬಿ ಬೌಲರ್‌ಗಳು ತಯಾರಿ ನಡೆಸಿದ್ದರು ಲೇನ್ ಅನ್ನು ಭೇಗನೆ ಔಟ್ ಮಾಡುವಲ್ಲಿ ಯಶಸ್ವಿಯೂ ಆದರು ಆದರೆ ಬೌಲರ್ ಸುನಿಲ್ ನರೇನ್ ಓಪನಿಂಗ್ ಬಂದು ಹೀಗೆ ಬ್ಯಾಟಿಂಗ್ ಮಾಡುತ್ತಾರೆಂದು ಅವರು ನಿರೀಕ್ಷಿಸಿಯೇ ಇರಲಿಲ್ಲ, ಅದಕ್ಕೆ ಇಲ್ಲೊಬ್ಬರು 'ಸುನಿಲ್ ನರೇನ್ 'ಔಟ್ ಆಫ್ ಸಿಲೆಬಸ್ ಪ್ರಶ್ನೆಯಾಗಿ ಬಂದು ಆರ್‌ಸಿಬಿಗರನ್ನು ಕಾಡಿದರು' ಎಂದು.
ಮಾನವೀಯತೆ ಮೆರೆದ ಕೆಕೆಆರ್
ಪಂದ್ಯ ಮುಗಿದ ನಂತರ ಕೆಕೆಆರ್ ತಂಡ ಮಾನವೀಯ ಮೆರೆದಿದೆ. ನಿನ್ನೆ ಸುನಿಲ್ ನರೇನ್‌ಗೆ ಬಂದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಅವರು ಕೆಕೆಆರ್‌ನ ಅಪ್ಪಟ ಅಭಿಮಾನಿ ಹರ್ಷಲ್ ಗೊಯೆಂಕಾ ಅವರಿಗೆ ನೀಡಿದ್ದಾರೆ. ಹರ್ಷಲ್ ಅವರು ಖಾಯಿಲೆಯಿಂದ ಬಳಲುತ್ತಿದ್ದು ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಕೆಕೆಆರ್ ತಂಡಕ್ಕೆ ಬರುವ ಎಲ್ಲಾ ಪಂದ್ಯ ಪುರುಶೋತ್ತಮ ಪ್ರಶಸ್ತಿಗಳನ್ನು ಹರ್ಷಲ್ ಗೊಯೆಂಕಾ ಅವರಿಗೆ ನೀಡಲು ಕೆಕೆಆರ್ ತಂಡ ನಿರ್ಧರಿಸಿದೆ.


Click it and Unblock the Notifications











