ಆಸೀಸ್ ಎದುರು ಭಾರತ ಸೋತರೂ ಸೋಲಬಹುದು: ಟ್ವೀಟಿಗರ ಆಕ್ರೋಶ!

ಅಡಿಲೇಡ್, ಡಿಸೆಂಬರ್ 5: ಅಡಿಲೇಡ್ ಸ್ಟೇಡಿಯಂನಲ್ಲಿ ಗುರುವಾರ (ಡಿಸೆಂಬರ್ 6) ಆರಂಭಗೊಳ್ಳಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕಾಗಿ ಎರಡೂ ದೇಶಗಳು ತಂಡವನ್ನು ಪ್ರಕಟಿಸಿವೆ. ಆದರೆ ಪ್ರಕಟಿತ ಭಾರತ ತಂಡದ ಬಗ್ಗೆ ಭಾರತದ ಅಭಿಮಾನಿಗಳಿಂದ ಬೇಸರವೂ ವ್ಯಕ್ತವಾಗಿದೆ.
ಕಾರಣ, ಬುಧವಾರ (ಡಿಸೆಂಬರ್ 5) ಪ್ರಕಟಿಸಲಾದ ಭಾರತದ 12 ಜನರ ತಂಡದಲ್ಲಿ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ, ವೇಗಿ ಉಮೇಶ್ ಯಾದವ್ ಇವರಲ್ಲಿ ಯಾರಿಗೂ ಸ್ಥಾನ ನೀಡಿಲ್ಲ. ಹೀಗಾಗಿ ತಂಡದ ಬಗ್ಗೆ ಅಭಿಮಾನಿಗಳು ನಿರಾಶೆ ತೋರಿಕೊಂಡಿದ್ದಾರೆ.
ಟ್ವಿಟರ್ ಮೂಲಕ ತಂಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯದಲ್ಲಿ ಭಾರತ ಗೆಲ್ಲೋದು ಕಷ್ಟವಿದೆ ಎಂದು ದಿಗಿಲು ತೋರಿಕೊಂಡಿದ್ದಾರೆ. ಟ್ವಿಟರ್ ನಲ್ಲಿ ವ್ಯಕ್ತವಾದ ಕೆಲ 'ತಳಮಳ'ಗಳು ಕೆಳಗಿವೆ. ಇವರ ತಳಮಳಕ್ಕೆ ಕಾರಣವೂ ಅರ್ಥವೂ ಇದ್ದಂತಿದೆ!
ತುಂಬಾ ಬೇಸರವೆನಿಸಿದೆ
'ತಂಡ ಸಮಿತಿ ಭುವನೇಶ್ವರ್ ಅವರನ್ನು ಈಗಲೂ 'ಷರತ್ತು ಅನ್ವಯ'ದ ಬೌಲರ್ ಅಡಿಯಲ್ಲಿ ನೋಡುತ್ತಿರುವುದು ಬೇಸರವುಂಟು ಮಾಡುತ್ತಿದೆ. ಇಂಗ್ಲೆಂಡ್ ಸರಣಿಯಲ್ಲೂ ಭುವಿ ಮಿಸ್ ಆಗಿದ್ದರು. ಈಗ ಅವರು ಲಭ್ಯರಿದ್ದರೂ ತಂಡದಲ್ಲಿ ಸ್ಥಾನ ನೀಡಿಲ್ಲ' ಎಂದು ಇಲ್ಲೊಬ್ಬರು ಬೇಸರ ತೋರಿಕೊಂಡಿದ್ದಾರೆ.
ರಾಹುಲ್ ನನ್ನು ಆರಿಸಿದ್ದೀರಿ!
ಅಂತಾರಾಷ್ಟ್ರೀಯ ಸರಣಿಗಳಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡಿದ್ದು ಗೊತ್ತಿದ್ದರೂ ನೀವು (ಆಯ್ಕೆ ಸಮಿತಿ) ಭುವಿಯನ್ನು ಬದಿಗಿಟ್ಟಿದ್ದೀರಿ. ಕೆಎಲ್ ರಾಹುಲ್ ಎಷ್ಟುಸಾರಿ ವೈಫಲ್ಯ ತೋರಿಕೊಂಡರೂ ಅವರನ್ನೇ ಆರಿಸಿದ್ದೀರಿ. ನಾಳೆ ಸೋತರೂ ಅದಕ್ಕೆ ನೀವೇ ಹೊಣೆಗಾರರು ಎಂಬರ್ಥದಲ್ಲಿ ಧೃವಿನ್ ಶಾ ಟ್ವೀಟ್ ಮಾಡಿದ್ದಾರೆ.
ಬ್ಯಾಟಿಂಗ್‌ಗೆ ಪ್ರಾಶಸ್ತ್ಯ
ಆಸೀಸ್-ಭಾರತ ಸರಣಿಗೆ ಪ್ರಕಟಿಸಲಾಗಿರುವ ಎರಡೂ ತಂಡಗಳನ್ನು ಗಮನಿಸಿದರೆ ಕುತೂಹಲಕಾರಿ ಅಂಶವೊಂದು ಕಾಣಸಿಗುತ್ತದೆ. ಅದೇನೆಂದರೆ ಇಲ್ಲಿ ಬೌಲರ್‌ಗಳಿಗಿಂತ ಬ್ಯಾಟ್ಸ್ಮನ್ ಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿರುವುದು ಕಾಣಿಸುತ್ತಿದೆ. ಅದರಲ್ಲೂ ವೇಗಿಗಳ ದೃಷ್ಟಿಯಿಂದ ಭಾರತ ತಂಡ ಸಂಪೂರ್ಣ ಎಡವಿದೆ ಎಂದು ಡೇವಿಡ್ ಇಂಗ್ರಮ್ ಪ್ರತಿಕ್ರಿಯಿಸಿದ್ದಾರೆ.
ಭಾರತ ಬಹುಶಃ ಸೋಲಬಹುದು
ತಂಡದಲ್ಲಿ ಭುವನೇಶ್ವರ್ ಕುಮಾರ್ ಇಲ್ಲ, ಉಮೇಶ್ ಯಾದವ್ ಇಲ್ಲ, ಕುಲದೀಪ್ ಯಾದವ್ ಇಲ್ಲ. ಈ ಸಂಯೋಜನೆಯಲ್ಲಿ ಭಾರತ ಸೋಲುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ಪರಿಸ್ಥಿತಿಗೆ ಅಶ್ವಿನ್ ಬದಲು ಜಡೇಜಾ ಸೂಕ್ತರಿದ್ದರು ಎಂಬುದಾಗಿ ಸಚಿನ್ ಸೂರ್ಯವಂಶಿ ಅವರ ವಿಶ್ಲೇಷಣೆ.
ಕುಲದೀಪ್‌ಗಾಗಿ ಎದುರು ನೋಡುತ್ತಿದ್ದೇನೆ
ಆಸ್ಟ್ರೇಲಿಯಾ ಪರಿಸ್ಥಿತಿಯ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಆಡುವ 11 ಮಂದಿಯ ತಂಡದಲ್ಲಿ ನಾನು ಕುಲದೀಪ್ ಯಾದವ್ ಇರುವುದನ್ನು ನೋಡಲು ಕಾತರನಾಗಿದ್ದೇನೆ ಎಂದು ಮಿಖೇಲ್ ಟ್ವೀಟ್ ಮಾಡಿದ್ದಾರೆ.
12 ಮಂದಿಯ ಭಾರತ ತಂಡ: ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರಾ, ರೋಹಿತ್ ಶರ್ಮಾ, ಹನುಮ ವಿಹಾರಿ, ರಿಷಬ್ ಪಂತ್, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ.
ಆಸ್ಟ್ರೇಲಿಯಾ ತಂಡ: ಮಾರ್ಕಸ್ ಹ್ಯಾರಿಸ್, ಆರನ್ ಫಿಂಚ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೇನ್ (ಸಿ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝೆಲ್ವುಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications