ಸೆಂಚುರಿ ಬಾರಿಸಿದ ಪೃಥ್ವಿ ಶಾಗೆ ಬಹುಪರಾಕ್ ಎಂದ ಟ್ವಿಟ್ಟಿಗರು
ಮುಂಬೈ, ಸೆಪ್ಟೆಂಬರ್ 24: ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡುತ್ತಿರುವ ಪೃಥ್ವಿ ಶಾ ಅವರು ಭರ್ಜರಿ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಭಾರತದ ಅಂಡರ್ 19 ತಂಡದ ನಾಯಕರಾಗಿರುವ 18 ವರ್ಷ ವಯಸ್ಸಿನ ಪೃಥ್ವಿ ಶಾ ಅವರು, ವಿಜಯ್ ಹಜಾರೆ ಏಕದಿನ ಟೂರ್ನಮೆಂಟ್ ನ 3 ಪಂದ್ಯಗಳಿಂದ 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನಂತೆ 287 ರನ್ ಗಳಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಬರೋಡಾ ವಿರುದ್ಧ 66 ಎಸೆತಗಳಲ್ಲಿ 98ರನ್, ಕರ್ನಾಟಕ ವಿರುದ್ಧದ ಪಂದ್ಯದಲ್ಲಿ 53 ಎಸೆತಗಳಲ್ಲಿ 60ರನ್ ಹಾಗೂ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ 61 ಎಸೆತದಲ್ಲಿ ಶತಕ ಬಾರಿಸಿದ್ದಾರೆ.
ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ 81 ಎಸೆತಗಳಲ್ಲಿ 129 ರನ್ಗಳಿಸಿ ಔಟಾದರು. ಇದರಲ್ಲಿ 14 ಬೌಂಡರಿ ಹಾಗೂ 6 ಸಿಕ್ಸರ್ ಗಳಿತ್ತು. ಪೃಥ್ವಿಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 144ರನ್ ಚೆಚ್ಚಿದರು.ಈ ಪಂದ್ಯದಲ್ಲಿ 400ರನ್ ಚೆಚ್ಚಿದ ಮುಂಬೈ ತಂಡವು ರೈಲ್ವೆಸ್ ವಿರುದ್ಧ 173ರನ್ ಗಳ ಸುಲಭ ಜಯ ದಾಖಲಿಸಿತು.

ದ್ರಾವಿಡ್ ಗರಡಿಯಿಂದ ಬಂದಿರುವ ಪ್ರತಿಭೆ
ಅಂಡರ್ 19 ವಿಶ್ವಕಪ್ತಂಡದ ನಾಯಕನಾಗಿ ಭಾರತಕ್ಕೆ ಮತ್ತೊಮ್ಮೆ ಕಪ್ಗೆಲ್ಲಿಸಿಕೊಟ್ಟರು. ಐಪಿಎಲ್ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡುತ್ತಿದ್ದಾರೆ. ರಣಜಿ, ಇಂಡಿಯಾ ಎ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್ ಪ್ರವಾಸದ ಕೊನೆಯೆರಡು ಪಂದ್ಯಗಳಿಗೆ ಆಯ್ಕೆಯಾಗಿದ್ದರು. ಈಗ ಟೀಂ ಇಂಡಿಯಾದ ಬಾಗಿಲು ತಟ್ಟುತ್ತಿದ್ದಾರೆ.
ಪೃಥ್ವಿ ಶಾ ಅಂಕಿ ಅಂಶ
ಭಾರತದ ಅಂಡರ್ 19 ತಂಡದ ನಾಯಕರಾಗಿರುವ 18 ವರ್ಷ ವಯಸ್ಸಿನ ಪೃಥ್ವಿ ಶಾ ಅವರು, ವಿಜಯ್ ಹಜಾರೆ ಏಕದಿನ ಟೂರ್ನಮೆಂಟ್ ನ 3 ಪಂದ್ಯಗಳಿಂದ 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನಂತೆ 287 ರನ್ ಗಳಿಸಿದ್ದಾರೆ. ಈ ವರ್ಷದ ಟೂರ್ನಮೆಂಟ್ ನಲ್ಲಿ ಪೃಥ್ವಿ ಸಾಧನೆಯ ಅಂಕಿ ಅಂಶ ಇಲ್ಲಿದೆ.
ತ್ವರಿತಗತಿಯಲ್ಲಿ 100ರನ್ ಗಳಿಸಿದವರು
ಲಿಸ್ಟ್ ಎ ಪಂದ್ಯಗಳಲ್ಲಿ ತ್ವರಿತಗತಿಯಲ್ಲಿ ಶತಕ ಬಾರಿಸಿದವರ ಪಟ್ಟಿ ಇಲ್ಲಿದೆ.
ಕೊಹ್ಲಿಗೆ ಹೋಲಿಸಿದ ಟ್ವಿಟ್ಟಿಗರು
ಪೃಥ್ವಿ ಶಾಗೆ ಬಹುಪರಾಕ್ ಎಂದ ಟ್ವಿಟ್ಟಿಗರು, ಭವಿಷ್ಯದ ತಾರೆ, ಮುಂದಿನ ವಿರಾಟ್ ಕೊಹ್ಲಿ ಎಂದಿದ್ದಾರೆ. ಮತ್ತೆ ಕೆಲವರು ಸೆಹ್ವಾಗ್, ಸಚಿನ್ ಇಬ್ಬರ ಕಾಂಬಿನೇಷನ್ ಪೃಥ್ವಿ ಬೇಗ, ಟೀಂ ಇಂಡಿಯಾ ಪರ ಆಡಲಿ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications