ಏಷ್ಯಾಕಪ್ ಗೂ ಮುನ್ನ ಕೊಹ್ಲಿ-ರೋಹಿತ್ ಟ್ವೀಟ್ ಆನ್ ಫಾಲೋ?

ಬೆಂಗಳೂರು, ಸೆಪ್ಟೆಂಬರ್ 05: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಏಷ್ಯಾಕಪ್ ಗಾಗಿ ಏಕದಿನ ತಂಡಕ್ಕೆ ನಾಯಕರಾಗಿರುವ ರೋಹಿತ್ ಶರ್ಮಾ ನಡುವೆ ಮನಸ್ತಾಪ ಉಂಟಾಗಿದೆಯೋ ಎಂಬ ಅನುಮಾನ ಮೂಡಿದೆ.
ಟ್ವಿಟ್ಟರ್ ನಲ್ಲಿ ಕೊಹ್ಲಿಯನ್ನು ರೋಹಿತ್ ಶರ್ಮಾ ಅನ್ ಫಾಲೋ ಮಾಡಿದ್ದಾರೆ.ಏಕೆ? ಏನೂ? ಗೊತ್ತಿಲ್ಲ. ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಚರ್ಚೆಯಂತೂ ಜೋರಾಗಿ ನಡೆದಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿದ್ದ ರೋಹಿತ್ ಶರ್ಮಾ ಅವರು ಏಷ್ಯಾಕಪ್ 2018 ಆಡಲಿರುವ ಭಾರತ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಕೊಹ್ಲಿಯನ್ನು ಅನ್ಫಾಲೋ ಮಾಡಿದ್ದು ಏಕೆ ಎಂಬುದರ ಬಗ್ಗೆ ಗೊಂದಲ ಮೂಡಿದ್ದರಿಂದ ಟ್ವಿಟ್ಟರ್ನಲ್ಲಿ ಏನಿದರ ಮರ್ಮ ಎಂದು ಕಾರಣ ಕೇಳಿ ಅಭಿಮಾನಿಗಳು ಸರಣಿ ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಕೂಡ ರೋಹಿತ್ ಶರ್ಮಾರನ್ನು ಫಾಲೋ ಮಾಡಿಲ್ಲ. ಇದೇನು ದೊಡ್ಡ ವಿಷಯವಲ್ಲ ಎಂದು ಕೆಲವರು ಹೇಳಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 3 ದ್ವಿಶತಕ, ಟಿ20 ಕ್ರಿಕೆಟ್ನಲ್ಲಿ 3 ಶತಕ ಸಿಡಿಸಿರುವ ವಿಶ್ವದ ಏಕೈಕ ಆಟಗಾರನಾಗಿರುವ ರೋಹಿತ್ ಶರ್ಮಾ ಅವರು ನಾಯಕರಾಗಿ ಮುಂದುವರೆದರೆ ಮುಂದಿನ ವಿಶ್ವಕಪ್ ಗೆ ನಾಯಕ ಯಾರು ಎಂಬ ಪೈಪೋಟಿ ಶುರುವಾಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.
ತಾಂತ್ರಿಕ ಕಾರಣಗಳಿಗಾಗಿ ಈ ಅನ್ಫಾಲೋ ಘಟನೆ ನಡೆದಿರುವುದು ಈಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications