ಕೊಹ್ಲಿ ಅಣಕಿಸಿದ ಮ್ಯಾಕ್ಸ್ ವೆಲ್, ಟ್ವಿಟ್ಟರ್ ನಿಂದ ಫ್ಯಾನ್ಸ್ ಗರಂ
ರಾಂಚಿ, ಮಾರ್ಚ್ 18: ಬೆಂಗಳೂರಿನಲ್ಲಿ ಆರಂಭವಾದ 'ಅಣಕು ಆಟ' ರಾಂಚಿಯಲ್ಲೂ ಮುಂದುವರೆದಿದೆ. ಆಸ್ಟ್ರೇಲಿಯನ್ನರು ತಮ್ಮ ತಂಟೆ, ತರ್ಲೆ ಬುದ್ಧಿ ಬಿಡಲ್ಲ ಬಿಡಿ. ಗಾಯಾಳು ವಿರಾಟ್ ಕೊಹ್ಲಿಯನ್ನು ಆಸೀಸ್ ಆಟಗಾರರು ಬಿಟ್ಟಿಲ್ಲ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರದಂದು ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಆಡಿಕೊಂಡು ನಗಾಡಿದ್ದಾರೆ. ಅಣಕಿಸಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಟ್ವೀಟ್ ಮಾಡಿ ತಮ್ಮ ಸಿಟ್ಟು ತೀರಿಸಿಕೊಂಡಿದ್ದಾರೆ.
ಪಂದ್ಯದ 80.3 ನೇ ಓವರ್ ನಲ್ಲಿ ಬೌಂಡರಿ ಬಳಿ ಸಾಗುತ್ತಿದ್ದ ಚೆಂಡನ್ನು ಡೈವ್ ಮಾಡಿ ತಡೆದ ಗ್ಲೆನ್ ಮ್ಯಾಕ್ಸ್ ವೆಲ್ ಅವರು, ಕೊಹ್ಲಿಗೆ ಹೇಗೆ ಡೈವ್ ಮಾಡಬೇಕು ಎಂಬುದನ್ನು ತೋರಿಸಿದರು. ಆದರೆ, ಗ್ಲೆನ್ ತರ್ಲೆ ಅಲ್ಲಿಗೆ ನಿಲ್ಲಲಿಲ್ಲ. ಬೌಂಡರಿ ಗೆರೆ ದಾಟಿ ಬರುವಾಗ ಬಲ ಭುಜದ ಮೇಲೆ ಕೈ ಇರಿಸಿಕೊಂಡು ಕೊಹ್ಲಿ ನಿನ್ನೆ ನೋವು ಅನುಭವಿಸಿದಂತೆ ಮುಖ ಮಾಡಿ ನಗೆಯಾಡಿದರು.

ಬೇಕಂತಲೇ ಅಣಕಿಸಿದ್ದು
ಗ್ಲೆನ್ ಮ್ಯಾಕ್ಸ್ ವೆಲ್ ಅವರು ಡೈವ್ ಹೊಡೆದು ಫೀಲ್ಡ್ ಮಾಡಿದ ವಿಧಾನವನ್ನು ಕಾಮೆಂಟ್ರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಹಾಗೂ ಸಂಜಯ್ ಮಂಜೇಕ್ರರ್ ಹೊಗಳಿದರು. ಆದರೆ, ನಂತರ ಮ್ಯಾಕ್ಸ್ ವೆಲ್ ಅಣಕಿಸಿದ ರೀತಿ ಇಬ್ಬರ ಬಾಯಿಗೆ ಬೀಗ ಹಾಕಿತು.
ಆಸ್ಟ್ರೇಲಿಯನ್ನರ ತರ್ಲೆ
ವಿಡಿಯೋ: ಗಾಯಾಳು ಕೊಹ್ಲಿರನ್ನು ಮ್ಯಾಕ್ಸ್ ವೆಲ್ ಗೇಲಿ ಮಾಡಿದ್ದು ಹೇಗೆ ಎಂಬ ವಿಡಿಯೋ ಹರಿದಾಡುತ್ತಿದೆ.
ಮ್ಯಾಕ್ಸ್ ವೆಲ್ ಗೆ ಛೀಮಾರಿ
ಮ್ಯಾಕ್ಸ್ ವೆಲ್ ನಡೆದುಕೊಂಡ ರೀತಿ ಸಭ್ಯತೆಯ ಎಲ್ಲೆ ಮೀರಿದ್ದು, ಎಲ್ಲಕ್ಕೂ ಮಿತಿ ಇರುತ್ತದೆ. ಇದು ನಾಚಿಕೆಗೇಡಿನ ನಡತೆ ಎಂದು ಫ್ಯಾನ್ಸ್ ಛೀಮಾರಿ ಹಾಕಿದ್ದಾರೆ.
ಕೊಹ್ಲಿ ಹಾಗೂ ಮ್ಯಾಕ್ಸ್ ವೆಲ್
ಕೊಹ್ಲಿ ಹಾಗೂ ಮ್ಯಾಕ್ಸ್ ವೆಲ್ ಇಬ್ಬರು ಬಿದ್ದು ಎದ್ದ ಚಿತ್ರಗಳನ್ನು ಹೋಲಿಕೆ ಮಾಡಿ ಟ್ವೀಟ್ ಮಾಡಲಾಗುತ್ತಿದೆ. ಮ್ಯಾಕ್ಸ್ ವೆಲ್ ಬಗ್ಗೆ ಫ್ಯಾನ್ ಗರಂ ಆಗಿದ್ದಾರೆ.
ಸ್ಮಿತ್ ಗೂ ಉಗಿದ ಫ್ಯಾನ್ಸ್
ಮ್ಯಾಕ್ಸ್ ವೆಲ್ ರಂತೆ, ಸ್ಟೀವ್ ಸ್ಮಿತ್ ಕೂಡಾ ಅಣಕು ಪ್ರದರ್ಶನ ನೀಡಿದರು ಎಂದು ಫ್ಯಾನ್ಸ್ ಗರಂ ಆಗಿದ್ದಾರೆ
ಹ್ಯಾಂಡ್ಸ್ ಕಂಬ್ ಕೈ
ಸ್ಮಿತ್ ಅವರು ಅಣಕಿಸಿಲ್ಲ, ಹ್ಯಾಂಡ್ಸ್ ಕಂಬ್ ಅವರು ಸ್ಮಿತ್ ಭುಜದ ಮೇಲೆ ಕೈಯಿರಿಸಿದ್ದು, ತಪ್ಪಾಗಿ ಅರ್ಥೈಸಲಾಗಿದೆ ಎಂದು ನಂತರ ಸ್ಪಷ್ಟನೆ ಸಿಕ್ಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications