ಪಟಾಕಿ ಹೊಡಿಬೇಡಿ ಎಂದ ಯುವಿ ಮೇಲೆ ನಗೆ ಚಟಾಕಿ ಬಾಂಬ್ ಎಸೆತ
ಬೆಂಗಳೂರು, ಅಕ್ಟೋಬರ್ 17: ದೆಹಲಿ ಹಾಗೂ ಎನ್ಸಿಆರ್ನಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಹೇರಿರುವ ನಿಷೇಧ ಹೇರಿರುವ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಕ್ರಿಕೆಟರ್ ಯುವರಾಜ್ ಸಿಂಗ್ ಕೂಡಾ ಈ ಬಗ್ಗೆ ಚರ್ಚೆ ಆರಂಭಿಸಲು ಹೋಗಿ ನಗೆಪಟಾಲಿಗೀಡಾಗಿದ್ದಾರೆ.
ಅಕ್ರಮವಾಗಿ ಪಟಾಕಿ ಮಾರಾಟ ಮಾಡುವವರ ಬಂಧನವೂ ಆಗಿದೆ. ಈ ಬಗ್ಗೆ ಯುವರಾಜ್ ಕೂಡಾ ಮನವಿ ಮಾಡಿಕೊಂಡಿದ್ದರು. ಆದರೆ, ಯುವರಾಜ್ ಮನವಿ ತಿರುಗುಬಾಣವಾಗಿ ಪರಿಣಮಿಸಿದೆ.
ಪಟಾಕಿ ರಹಿತ ದೀಪಾವಳಿಯನ್ನು ಆಚರಿಸುವಂತೆ ಟ್ವೀಟ್ ಮಾಡಿದ್ದರು. ಆದರೆ, ಸಾರ್ವಜನಿಕರು ಯುವರಾಜ್ ಸಿಂಗ್ ಟ್ವೀಟ್ ಗೆ ಪ್ರತಿಯಾಗಿ ಟ್ವೀಟ್ ಮಾಡಿ ಗೇಲಿ ಮಾಡಿದ್ದಾರೆ.
'ದೀಪಾವಳಿ ದಿನ ಪಟಾಕಿ ಹೊಡೆಯಬಾರದು ಮದುವೆಯ ದಿನ ಪಟಾಕಿಗಳನ್ನು ಸಿಡಿಸಬಹುದು' ನಾಟಕೀಯತೆ ಎನ್ನುವುದು 100ನೇ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಂಡಿದೆ'ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನಷ್ಟು ಟ್ವೀಟ್ ಗಳು ಮುಂದಿವೆ ಓದಿ ಆನಂದಿಸಿ..

ಯುವಿ ಮೇಲೆ ನಗೆ ಚಟಾಕಿ ಬಾಂಬ್
ಟೀಮ್ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಪಟಾಕಿ ರಹಿತ ದೀಪಾವಳಿಯನ್ನು ಆಚರಿಸುವಂತೆ ಟ್ವೀಟ್ ಮಾಡಿದ್ದರು. ಆದರೆ, ಟ್ವೀಟಿಗರು ಯುವರಾಜ್ರ ಟ್ವೀಟ್ಗೆ ಅಭಿಮಾನಿಗಳು ಟಾಂಗ್ ನೀಡಿದ್ದಾರೆ.
ಪಟಾಕಿ ಹೊಡೆಯಿರಿ ಎಂದ ಆರ್ ಪಿ ಸಿಂಗ್
ನಮ್ಮ ಮನೆಯಲ್ಲಿ ಒಂದಷ್ಟು ಹಳೆ ಪಟಾಕಿಗಳಿವೆ, ನಾನು ಅದನ್ನು ಹೊಡೆದರೆ ತಪ್ಪಾಗುತ್ತಾ, ಪಟಾಕಿ ಇಲ್ಲದೆ ಹಬ್ಬ ಆಚರಿಸುವುದು ಹೇಗೆ? ಎಂದು ಕ್ರಿಕೆಟರ್ ಆರ್ ಪಿ ಸಿಂಗ್ ಪ್ರಶ್ನಿಸಿದ್ದಾರೆ.
ಯುವರಾಜ್ ಸಿಂಗ್ ಕಾರಿನ ಬಗ್ಗೆ ಪ್ರಶ್ನೆ
ಯುವರಾಜ್ ಸಿಂಗ್ ಕಾರಿನ ಬಗ್ಗೆ ಪ್ರಶ್ನೆ ಎತ್ತಿರುವ ಸಾರ್ವಜನಿಕರು Audi, BMW ಕಾರಿನಿಂದ ಪರಿಸರ ಮಾಲಿನ್ಯ ಆಗುವುದಿಲ್ಲವೇ ಎಂದು ಕೇಳಿದ್ದಾರೆ.
ಯುವರಾಜ್ ಸಿಂಗ್ ಮದುವೆ ಫೋಟೊ
ಯುವರಾಜ್ ಸಿಂಗ್ ಮದುವೆ ಫೋಟೊ ಕಿಚಾಯಿಸಲಾಗಿದ್ದು, ನಿಮ್ಮ ಮದುವೆ ದಿನದಂದು ಹೊಡೆದ ಪಟಾಕಿಯಿಂದ ಆಮ್ಲಜನಕ ಉತ್ಪಾದನೆಯಾಗಿದ್ದು, ಇದರಿಂದ ದೆಹಲಿ ಸಂಪೂರ್ಣ ಮಾಲಿನ್ಯ ರಹಿತವಾಗಿದೆ ಎಂದು ಗೇಲಿ ಮಾಡಿದ್ದಾರೆ.
ಯುವಿ ನಿಮ್ಮದು ಗ್ರೀನ್ ವೆಡ್ಡಿಂಗ್
ಯುವರಾಜ್ ನಿಮಗೆ ತಡವಾಗಿ ಶುಭ ಹಾರೈಕೆಗಳು ನಿಮ್ಮ ಗ್ರೀನ್ ವೆಡ್ಡಿಂಗ್ ನಿಂದಾಗಿ ಸುಮಾರು ಗಿಡಗಳನ್ನು ನೆಡಲಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications