ಇಂಗ್ಲೆಂಡ್‌ನಲ್ಲಿರುವ ಭಾರತ ತಂಡದಲ್ಲಿ ಇಬ್ಬರಿಗೆ ಕೋವಿಡ್-19 ಪಾಸಿಟಿವ್!

ಲಂಡನ್: ಕೋವಿಡ್-19 ಸೋಂಕು ಹಬ್ಬುವಿಗೆ ಬರೀ ಇಂಗ್ಲೆಂಡ್ ತಂಡದಲ್ಲಷ್ಟೇ ಉಳಿದಿಲ್ಲ, ಭಾರತೀಯ ತಂಡಕ್ಕೂ ಹಬ್ಬಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿರುವುದಾಗಿ ವರದಿಯಾಗಿದೆ. ಆದರೆ ಇಬ್ಬರೂ ಆಟಗಾರರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ (ಸಾಂದರ್ಭಿಕ ಚಿತ್ರ).
ಇಬ್ಬರು ಸೋಂಕಿತರಲ್ಲಿ ಒಬ್ಬನಿಗೆ ಈಗಾಗಲೇ ನೆಗೆಟಿವ್ ಬಂದಿರುವುದಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಿಳಿಸಿದೆ. ಮತ್ತೊಬ್ಬ ಪಾಸಿಟಿವ್ ಇದ್ದ ಆಟಗಾರ ಕೂಡ ಚೇತರಿಸಿಕೊಳ್ಳುತ್ತಿದ್ದು, ಜುಲೈ 18ಕ್ಕೆ ಅವರ ಐಸೊಲೇಶನ್ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ಲಭಿಸಿದೆ.
ಎಎನ್‌ಐ ಜೊತೆ ಮಾತನಾಡಿರುವ ಬಿಸಿಸಿಐ ಮೂಲ, ಪಾಸಿಟಿವ್ ಬಂದಿರುವ ಇಬ್ಬರೂ ಆಟಗಾರರಿಗೆ ಬಹುತೇಕ ರೋಗ ಗುಣಲಕ್ಷಣಗಳಿರಲಿಲ್ಲ. ಸಣ್ಣ ಮಟ್ಟಿಗೆ ಶೀತ ಮತ್ತು ಕೆಮ್ಮು ಇತ್ತಷ್ಟೇ. ಆದರೆ ಚಿಂತೆ ಮಾಡೋದೇನಿಲ್ಲ ಎಂದು ತಿಳಿಸಿದೆ. ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಆರಂಭಗೊಳ್ಳಲಿದೆ.
"ಅದೃಷ್ಟವಶಾತ್, ಚಿಂತೆ ಮಾಡುವಂತದ್ದು ಏನೂ ಇಲ್ಲ. ಕೋವಿಡ್-19ಗೆ ಪಾಸಿಟಿವ್ ಬಂದ ಬಳಿಕ ಇಬ್ಬರೂ ಆಟಗಾರರು ಈಗಾಗಲೇ ನೆಗೆಟಿವ್ ಬಂದಿದ್ದಾರೆ. ಮತ್ತೊಬ್ಬ ಆಟಗಾರನಿಗೆ ಭಾನುವಾರ ಮತ್ತೆ ಪರೀಕ್ಷೆಯಿದೆ. ಆತ ಈಗ ಐಸೊಲೇಶನ್‌ನಲ್ಲಿದ್ದಾನೆ. ನೆಗೆಟಿವ್ ರಿಪೋರ್ಟ್ ಬಳಿಕ ಆತ ಸಭ್ಯಾಸ ತಂಡಕ್ಕೆ ಸೇರಲಿದ್ದಾರೆ," ಎಂದು ಮೂಲ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications