
ಟಿ20 ವಿಶ್ವಕಪ್‌ನ ಆರಂಭಿಕ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ನೀಡಿದ ಹೀನಾಯ ಪ್ರದರ್ಶನದಿಂದಾಗಿ ಸತತ ಎರಡು ಕೆಟ್ಟ ಸೋಲನ್ನು ಅನುಭವಿಸಿತ್ತು. ಆದರೆ ಅಫ್ಘಾನಿಸ್ತಾನದ ವಿರುದ್ಧ ಭಾರತ ಅಮೋಘ ಆಟವನ್ನು ಪ್ರದರ್ಶಿಸುವ ಮೂಲಕ ಅದ್ಭುತ ಜಯ ದಾಖಲಿಸಿದೆ. ಈ ಮೂಲಕ ಭಾರತ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಗೆಲುವಿನ ನಂತರ ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಗ್ಗೆ ಉತ್ತರ ನೀಡಿದ್ದಾರೆ.
ಮೊದಲ ಎರಡು ಪಂದ್ಯಗಳಲ್ಲಿ ನಿರ್ಣಾಯಕ ಹಂತದಲ್ಲಿ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ವಿಫಲವಾಗಿದ್ದೆವು. ಇದರಿಂದಾಗಿ ಭಾರತ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು ಎಂದಿದ್ದಾರೆ. ಅಲ್ಲದೆ ಎರಡು ಕೆಟ್ಟ ಪಂದ್ಯಗಳಿಂದಾಘಿ ನಮ್ಮದು ಕೆಟ್ಟ ತಂಡ ಎನಿಸಿಕೊಳ್ಳುವುದಿಲ್ಲ ಎಂದು ಕೂಡ ರೋಹಿತ್ ಶರ್ಮಾ ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಭಾರತ ತನ್ನ ಎರಡು ದೊಡ್ಡ ಸೋಲುಗಳ ನಂತರ ಈಗ ತಿರುಗಿಬೀಳುವವಲ್ಲಿ ಯಶಸ್ವಿಯಾಗಿದೆ. ಅಬುಧಾಬಿಯಲ್ಲಿ ನಡೆದ ಅಫ್ಘಾನಿಸ್ತಾನದ ವಿರುದ್ಧ ಎಲ್ಲಾ ವಿಭಾಗಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಪಡೆ 66 ರನ್‌ಗಳ ಅಂತರದ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಶತಕದ ಜೊತೆಯಾಟವನ್ನು ನೀಡಿದರು. ರೋಹಿತ್ ಹಾಗೂ ರಾಹುಲ್ ಜೋಡಿ ಮೊದಲ ವಿಕೆಟ್‌ಗೆ 140 ರನ್‌ಗಳ ಜೊತೆಯಾಟ ನೀಡಿದರು. ನಂತರ ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ಸ್ಪೋಟಕವಾಗಿ ಆಡುವ ಮೂಲಕ ತಂಡದ ಮೊತ್ತ 210ಕ್ಕೆ ಏರಿಸುವಲ್ಲಿ ಯಶಸ್ವಿಯಾಗಿದ್ದರು. ಅದಾದ ನಂತರ ಬೌಲಿಂಗ್‌ನಲ್ಲಿ ಆರ್ ಅಶ್ವಿನ್ ಹಾಗೂ ಮೊಹಮ್ಮದ್ ಶಮಿ ಪ್ರದರ್ಶನದಿಂದಾಗಿ ಅಫ್ಘಾನಿಸ್ತಾನ ತಂಡವನ್ನು ಕೇವಲ 144/7 ರನ್‌ಗಳಿಗೆ ಕಟ್ಟಿ ಹಾಕಿವ ಮೂಲಕ ಭಾರತ ಬೃಹತ್ ಗೆಲುವು ಸಾಧಿಸಿದೆ.
ಈ ಅದ್ಭುತ ಗೆಲುವು ಭಾರತದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಅಲ್ಲದೆ ಟೀಮ್ ಇಂಡಿಯಾ ಸೆಮಿಫೈನಲ್‌ಗೇರುವ ಕನಸನ್ನು ಜೀವಂತವಾಗುಳಿಸಿದೆ. "ನಾವು ಕ್ರಿಕೆಟ್ ಆಡುವತ್ತಿರುವ ಪ್ರಮಾಣದಿಂದಾಗಿ ಹಾಗೂ ನಮ್ಮ ಜೀವನ ನಡೆಯುತ್ತಿರಯವ ರೀತಿಯಿಂದಾಗಿ ಪರಿಸ್ಥಿತು ಬಹಳಷ್ಟು ಕಠಿಣವಾಗಿದೆ. ನಾವು ಪ್ರತೀ ಬಾರಿಯೂ ಮೈದಾನಕ್ಕೆ ಇಳಿದಾಗಲೂ ಸರಿಯಾದ ನಿರ್ಧಾರವನ್ನೇ ಮಾಡಬೇಕಿರುತ್ತದೆ. ಹಾಗಾಗಿ ನಮ್ಮ ಮಾನಸಿಕ ಸ್ಥೊತಿ ತಾಜಾತನದಿಂದ ಕೂಡಿರಬೇಕಾಗುತ್ತದೆ. ಅಂತಾ ಸಂದರ್ಭದಲಲ್ಇ ನಮ್ಮ ನಿರ್ಧಾರಗಳು ಸರಿಯಾಗಿ ಕೈಗೂಡದಿದ್ದಾಗ ಈ ರೀತಿಯಾಗುತ್ತದೆ. ನೀವು ಅತಿಯಾಗಿ ಕ್ರಿಕೆಟ್ ಆಡಿದಾಗ ಇಂತದ್ದಕ್ಕೆ ಕಾರಣವಾಗುತ್ತದೆ, ಹಾಗಾಗಿಯೇ ಕೆಲವೊಮ್ಮೆ ಆಟದಿಂದ ದೂರವಿರುವುದು ಕೂಡ ಬಹಳ ಮುಖ್ಯವಾಗುತ್ತದೆ. ಕೆಲ ಕಾಲ ಮನಸ್ಸನ್ನು ನೀವು ತಾಜಾತನದಿಂದ ಇರುವಂತೆ ಮಾಡಬೇಕಿದೆ" ಎಂದು ರೋಹಿತ್ ಶರ್ಮಾ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
"ಆದರೆ ವಿಶ್ವಕಪ್‌ನಂತಾ ಟೂರ್ನಿಯ ಸಂದರ್ಭದಲ್ಲಿ ನಿಮ್ಮ ಸಂಪೂರ್ಣ ಗಮನ ಈ ಟೂರ್ನಿಯ ಮೇಲಿರಬೇಕಾಗುತ್ತದೆ. ನಾವು ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಂದ ಮಾತ್ರಕ್ಕೆ ನಮ್ಮದು ಕೆಟ್ಟ ತಂಡ ಅಥವಾ ಕೆಟ್ಟ ಆಟಗಾರರು ಎಂದು ಪರಿಗಣಿಸಲು ಸಾಧ್ಯವಿಲ್ಲ. ನಾವು ಈ ವರ್ಷದ ಆರಂಭದಿಂದಲೂ ತುಂಬಾ ಉತ್ತಮ ಕ್ರಿಕೆಟ್‌ಅನ್ನು ಆಡಿಕೊಂಡು ಬಂದಿದ್ದೇವೆ" ಎಂದು ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ.