For Quick Alerts
ALLOW NOTIFICATIONS  
For Daily Alerts
 

ಎರಡು ಪ್ರತ್ಯೇಕ ಘಟನೆ: ಕ್ರಿಕೆಟ್‌ ಅಂಗಳದಲ್ಲೇ ಇಬ್ಬರು ಸಾವು

ಕ್ರಿಕೆಟ್ ಅಂಗಳದಲ್ಲಿ ಆಟಗಾರರು ಸಾವನ್ನಪ್ಪಿರುವ ಘಟನೆ ದೇಶದ ಎರಡು ಭಾಗಗಳಲ್ಲಿ ನಡೆದಿದೆ. ಈ ಸುದ್ದಿ ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯನ್ನು ತಂದಿರುತ್ತದೆ. ನೋಯ್ಡಾ ಹಾಗೂ ಮುಂಬೈನಲ್ಲಿ ಕ್ರಿಕೆಟ್‌ ಮೈದಾನದಲ್ಲಿ ಆಟಗಾರರು ಸಾವನ್ನಪ್ಪಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ನೋಯ್ಡಾದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಆಟಗಾರನೊಬ್ಬ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ. ಮೃತರ ಹೆಸರು ವಿಕಾಸ್ ನೇಗಿ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ವಿಕಾಸ್ ನೇಗಿ ಹವ್ಯಾಸಿ ಕ್ರಿಕೆಟ್ ಆಟಗಾರ.

Two separate incidents: Two die in the cricket field

ಘಟನೆ ಶನಿವಾರ ನಡೆದಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನೋಯ್ಡಾದ ಸೆಕ್ಟರ್ 135 ರಲ್ಲಿ ನಿರ್ಮಿಸಲಾದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ಪಂದ್ಯ ಮಾವೆರಿಕ್-11 ಮತ್ತು ಬ್ಲೇಜಿಂಗ್ ಬುಲ್ಸ್ ಕ್ರಿಕೆಟ್ ತಂಡಗಳ ನಡುವೆ ನಡೆದಿತ್ತು. ಪಂದ್ಯದ ಮೊದಲ ಇನಿಂಗ್ಸ್‌ ವೇಳೆಯೇ ಭೀಕರ ಅಪಘಾತ ಸಂಭವಿಸಿದೆ.

ಸಿಂಗಲ್‌ ರನ್‌ ಓಡುವಾಗ ಹೃದಯಾಘಾತ

ಮೇವರಿಕ್ -11 ರ ಬ್ಯಾಟಿಂಗ್ ನಡೆಯುತ್ತಿತ್ತು. ಉಮೇಶ್ ಕುಮಾರ್ ಮತ್ತು ವಿಕಾಸ್ ನೇಗಿ ಬ್ಯಾಟಿಂಗ್ ಮಾಡುತ್ತಿದ್ದರು. ಉಮೇಶ್ 14ನೇ ಓವರ್‌ನ ಐದನೇ ಎಸೆತದಲ್ಲಿ ಸಿಂಗಲ್‌ ರನ್‌ ಕದಿಯಲು ಓಡಿದರು. ಚೆಂಡು ಬೌಂಡರಿ ತಲುಪಿತು ಮತ್ತು ಉಮೇಶ್ ಅವರೊಂದಿಗೆ ಕೈಕುಲುಕಿದ ನಂತರ, ವಿಕಾಸ್ ತನ್ನ ತುದಿಯತ್ತ ಹೆಜ್ಜೆ ಹಾಕಿದರು. ಆಗ ಏಕಾಏಕಿ ಪಿಚ್ ಮೇಲೆ ಬಿದ್ದರು. ಅವರು ಬೀಳುವುದನ್ನು ನೋಡಿದ ವಿಕೆಟ್ ಕೀಪರ್ ಮೊದಲು ಓಡಿಹೋದರು. ಇದಾದ ನಂತರ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಕೂಡ ಅವರತ್ತ ಓಡಿದರು. ಕೆಲವೇ ಕ್ಷಣಗಳಲ್ಲಿ ಎಲ್ಲಾ ಆಟಗಾರರು ವಿಕಾಸ್ ಸುತ್ತಲೂ ಜಮಾಯಿಸಿದರು.

ಪಿಚ್‌ನಲ್ಲಿಯೇ ಸಿಪಿಆರ್ ನೀಡಿದರು

ಇಲ್ಲಿ ಆಟಗಾರರು ತಕ್ಷಣವೇ ಅವರಿಗೆ ಸಿಪಿಆರ್ (ಹೃದಯ ಮತ್ತು ಶ್ವಾಸಕೋಶ ಪ್ರಚೋದಕ) ನೀಡಿದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಈ ಸಂಪೂರ್ಣ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

52 ವರ್ಷದ ವ್ಯಕ್ತಿ ಸಾವು

ಮುಂಬೈನಲ್ಲಿ ಪಂದ್ಯ ಆಡುತ್ತಿದ್ದ 52 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಜಯೇಶ್ ಸಾವ್ಲಾ ಎಂಬ ವ್ಯಕ್ತಿ ಫೀಲ್ಡಿಂಗ್ ಮಾಡುವಾಗ ಕಿವಿಗೆ ಚೆಂಡು ಬಡಿದಿದೆ.

ಇವರ ಕಿವಿಗೆ ಬಡೆದ ಚೆಂಡು ಮೈದಾನದಲ್ಲಿ ನಡೆಯುತ್ತಿದ್ದ ಇನ್ನೊಂದು ಪಂದ್ಯದ್ದಾಗಿತ್ತು. ಅಂದರೆ ಮೈದಾನದಲ್ಲಿ ಏಕಕಾಲಕ್ಕೆ ಎರಡು ಪಂದ್ಯಗಳು ನಡೆಯುತ್ತಿರುವುದರಿಂದ ಅವಘಡ ಸಂಭವಿಸಿದೆ.

Two separate incidents: Two die in the cricket field

ಸೋಮವಾರ ಮಧ್ಯಾಹ್ನ ಮಾಟುಂಗಾದ ದಾಡ್ಕರ್ ಮೈದಾನದಲ್ಲಿ ಎರಡು ಪಂದ್ಯಗಳು ಏಕಕಾಲದಲ್ಲಿ ನಡೆಯುತ್ತಿದ್ದವು. ಎರಡೂ ಪಂದ್ಯಗಳು ಒಂದೇ ಟಿ20 ಟೂರ್ನಿಯದ್ದಾಗಿದ್ದವು. ಇದು 50 ವರ್ಷ ಮೇಲ್ಪಟ್ಟವರಿಗಾಗಿ ನಡೆದ ಪಂದ್ಯಾವಳಿಯಾಗಿತ್ತು.

ಈ ಮೈದಾನದಲ್ಲಿ ಯಾವಾಗಲೂ ಅನೇಕ ಪಂದ್ಯಗಳು ಏಕಕಾಲದಲ್ಲಿ ನಡೆಯುತ್ತಿವೆ. ಅಲ್ಲದೆ ಇದರಿಂದ ಆಟಗಾರರು ಗಾಯಗೊಂಡಿರುವ ಹಲವಾರು ವರದಿಗಳು ಬಂದಿವೆ. ಆದರೆ ಇಂತಹ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದು ಇದೇ ಮೊದಲು.

ಹಿಂಬದಿಯಿಂದ ಚೆಂಡು ಬಡಿದ ಜಯೇಶ್ ಅಲ್ಲೇ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

Story first published: Wednesday, January 10, 2024, 12:38 [IST]
Other articles published on Jan 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+