ದಕ್ಷಿಣ ಆಫ್ರಿಕಾದ ಇಬ್ಬರು ಕ್ರಿಕೆಟಿಗರಿಗೆ ಕೊರೊನಾವೈರಸ್ ಪಾಸಿಟಿವ್

ಕೇಪ್‌ಟೌನ್, ಆಗಸ್ಟ್ 20: ದಕ್ಷಿಣ ಆಫ್ರಿಕಾ ಪುರುಷರ ಕ್ರಿಕೆಟ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಕ್ರಿಕೆಟ್ ಸೌತ್ ಆಫ್ರಿಕಾ ಈ ವಿಚಾರವನ್ನು ಗುರುವಾರ (ಆಗಸ್ಟ್ 20) ತಿಳಿಸಿದೆ. ಸಿಎಸ್‌ಎ ಒಟ್ಟಾರೆ 50 ಆಟಗಾರರಿಗೆ ಪರೀಕ್ಷೆ ನಡೆಸಿತ್ತು.
ಆಗಸ್ಟ್ 18ರಿಂದ 22ರ ವರೆಗೆ ಸ್ಕುಕುಜದಲ್ಲಿ ನಡೆಯಲಿರುವ ಕ್ಯಾಂಪ್‌ನಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಕ್ರಿಕೆಟ್ ದಕ್ಷಿಣ ಆಫ್ರಿಕಾ 32 ಆಟಗಾರರನ್ನು ಪರೀಕ್ಷೆಗೆ ಒಳಪಡಿಸಿತ್ತು. ಇದರಲ್ಲಿ ಇಬ್ಬರ ಫಲಿತಾಂಶ ಪಾಸಿಟಿವ್ ಬಂದಿದೆ. ಈ ಇಬ್ಬರೂ ಕೂಡ ಕ್ಯಾಂಪ್ ಮಿಸ್ ಮಾಡಿಕೊಳ್ಳಲಿದ್ದಾರೆ. ಇಬ್ಬರು ಹೆಸರನ್ನು ದಕ್ಷಿಣ ಆಫ್ರಿಕಾ ಬಹಿರಂಗಪಡಿಸಿಲ್ಲ.
'ವೈರಸ್ ಹರಡುವುದನ್ನು ನಿಯಂತ್ರಿಸುವ ಸಂಸ್ಥೆಯ ಬಾಧ್ಯತೆ ಮತ್ತು ಬದ್ಧತೆಯನ್ನು ಪೂರೈಸುವಲ್ಲಿ ಪರೀಕ್ಷೆ ಅನುಗುಣವಾಗಿರುತ್ತದೆ. ಪಾಸಿಟಿವ್ ಬಂದಿರುವ ಇಬ್ಬರು ಆಟಗಾರರಿಗೆ ಬದಲಿ ಆಟಗಾರರನ್ನು ಇನ್ನೂ ಹೆಸರಿಸಲಾಗಿಲ್ಲ,' ಎಂದು ಸಿಎಸ್‌ಎ ತಿಳಿಸಿದೆ.
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾ ಡು ಪ್ಲೆಸಿಸ್ ಕ್ಯಾಂಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಡು ಪ್ಲೆಸಿಸ್ ಕ್ಯಾಂಪ್ ಮಿಸ್ ಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತೊಬ್ಬ ಆಟಗಾರ ಥ್ಯೂನಿಸ್ ಡಿ ಬ್ರೂಯಿನ್ ಕೂಡ ವೈಯಕ್ತಿಕ ಕಾರಣದಿಂದಾಗಿ ಕ್ಯಾಂಪ್‌ನಲ್ಲಿ ಕಾಣಿಸಿಕೊಂಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications