Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Under-19 Women's T20 World Cup: ಜನವರಿ 18ರಿಂದ ಟಿ20 ವಿಶ್ವಕಪ್‌: ಇಲ್ಲದೆ ಸಂಪೂರ್ಣ ಮಾಹಿತಿ

ಎರಡನೇ ಆವೃತ್ತಿಯ ಅಂಡರ್‌ 19 ಮಹಿಳೆಯರ ಟಿ20 ವಿಶ್ವಕಪ್‌ ಈ ವರ್ಷ ನಡೆಯಲಿದೆ. ಈ ಮೆಗಾ ಟೂರ್ನಿಗೆ ಮಲೇಷ್ಯಾ ಆತಿಥ್ಯ ವಹಿಸಲಿದೆ. ಈ ಟೂರ್ನಿ ಜನವರಿ 18ರಿಂದ ಆರಂಭವಾಗಲಿದೆ. ಅಂಡರ್‌ 19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಸ್ಥಾನ ಪಡೆದಿವೆ. ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಪೂರ್ವ ಏಷ್ಯಾ-ಪೆಸಿಫಿಕ್ ದೇಶ ಒಂದು ಭಾಗವಹಿಸುತ್ತಿದೆ. ಅರ್ಹತಾ ಸುತ್ತಿನಲ್ಲಿ ಸ್ಥಿರ ಪ್ರದರ್ಶನ ನೀಡಿದ ಸಮೋವಾ ಪ್ರಧಾನ ಘಟಕ್ಕೆ ಕ್ವಾಲಿಫೈ ಆಗಿದೆ.

ಜನವರಿ 18 ರಿಂದ ಆರಂಭವಾಗುವ ಟೂರ್ನಿಯಲ್ಲಿನ 16 ತಂಡಗಳನ್ನು ಒಟ್ಟು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮಲೇಷ್ಯಾ, ಶ್ರೀಲಂಕಾ ಹಾಗೂ ವೆಸ್ಟ್‌ ಇಂಡೀಸ್ ತಂಡಗಳು ಇದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಇತ್ತೀಚಿಗೆ ನಡೆದ ಅಂಡರ್ 19 ವಿಶ್ವಕಪ್‌ ಗೆದ್ದಿರುವ ಭಾರತ ಅತಿ ಉತ್ಸಾಹದಲ್ಲಿ ಅಂಗಳ ಪ್ರವೇಶಿಸಲಿದೆ.

U-19 Women s T20 World Cup 2025 Full Details Teams Groups and Schedule

ಯಾವ ಗುಂಪಿನಲ್ಲಿ ಯಾವ ತಂಡ?

"ಬಿ" ಗುಂಪಿನಲ್ಲಿ ಇಂಗ್ಲೆಂಡ್, ಐರ್ಲೆಂಡ್, ಪಾಕಿಸ್ತಾನ, ಯನೈಟೆಡ್‌ ಸ್ಟೇಟ್ಸ್ ತಂಡಗಳು ಸ್ಥಾನ ಪಡೆದಿವೆ. "ಸಿ" ಗುಂಪಿನಲ್ಲಿ ನ್ಯೂಜಿಲೆಂಡ್, ನೈಜಿರಿಯಾ, ಸಮೋವಾ, ದಕ್ಷಿಣ ಆಫ್ರಿಕಾ ತಂಡಗಳು ಇವೆ. "ಡಿ" ಗುಂಪಿನಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೇಪಾಳ ಹಾಗೂ ಸ್ಕಾಟ್ಲೆಂಡ್‌ ತಂಡಗಳು ಸ್ಥಾನ ಪಡೆದಿವೆ.

ಸೂಪರ್‌ ಸಿಕ್ಸ್ ಹಂತದ ಪಂದ್ಯಗಳಿಗೂ ಎರಡೂ ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಗುಂಪು ವಿಭಾಗದಲ್ಲಿನ ಅಗ್ರ ಮೂರು ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ. ಸೂಪರ್‌ ಸಿಕ್ಸ್‌ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನ ಪಡೆಯುವ ತಂಡಗಳು ಸೆಮಿಪೈನಲ್‌ ಪ್ರವೇಶಿಸುತ್ತವೆ.

ಭಾರತದ ನಾಯಕಿ ಯಾರು?

ಭಾರತ ತಂಡ ಇತ್ತೀಚೆಗೆ ನಡೆದ ಏಷ್ಯಾಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಇದೀಗ ಭಾರತ ತಂಡ ಟಿ20 ವಿಶ್ವಕಪ್‌ಗೆ ಸಜ್ಜಾಗಿದೆ. ಟೀಂ ಇಂಡಿಯಾ ನಾಯಕತ್ವವನ್ನು ನಿಕ್ಕಿ ಪ್ರಸಾದ್‌ಗೆ ನೀಡಲಾಗಿದೆ. ಏಷ್ಯಾ ಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಆಯುಷಿ ಶುಕ್ಲಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ತಂಡ: ನಿಕ್ಕಿ ಪ್ರಸಾದ್ (ನಾಯಕಿ), ಸಾನಿಕಾ ಚಲ್ಕೆ, ಜಿ ತ್ರಿಶಾ, ಕಮಲಿನಿ ಜಿ, ಭಾವಿಕಾ ಅಹಿರೆ, ಈಶ್ವರಿ ಅವಸಾರೆ, ಮಿಥಿಲಾ ವಿನೋದ್, ಜೋಶಿತಾ ವಿಜೆ, ಸೋನಮ್ ಯಾದವ್, ಪರುಣಿಕಾ ಸಿಸೋಡಿಯಾ, ಕೇಸರಿ ದೃಥಿ, ಆಯುಷಿ ಶುಕ್ಲಾ, ಆನಂದಿತಾ ಕಿಶೋರ್, ಎಂಡಿ ಶಬ್ನವಿ, ವೈಷ್ಣವಿ ಎಸ್.

ಭಾರತದ ವೇಳಾ ಪಟ್ಟಿ

ಜ.19, ಭಾರತ ವಿರುದ್ಧ ವೆಸ್ಟ್‌ ಇಂಡೀಸ್‌, ಮಧ್ಯಾಹ್ನ 12
ಜ.21, ಭಾರತ ವಿರುದ್ಧ ಮಲೇಷ್ಯಾ, ಮಧ್ಯಾಹ್ನ 12
ಜ.23, ಭಾರತ ವಿರುದ್ಧ ಶ್ರೀಲಂಕಾ, ಮಧ್ಯಾಹ್ನ 12

ಸೆಮಿಫೈನಲ್‌ ಹಾಗೂ ಫೈನಲ್‌ ವೇಳಾ ಪಟ್ಟಿ

ಜ.31, ಮೊದಲ ಸೆಮಿಫೈನಲ್‌, ಬೆಳಗ್ಗೆ 8
ಜ.31, ಎರಡನೇ ಸೆಮಿಫೈನಲ್‌, ಮಧ್ಯಾಹ್ನ 12
ಫೆ.2, ಫೈನಲ್‌, ಮಧ್ಯಾಹ್ನ 12

Story first published: Saturday, January 4, 2025, 7:55 [IST]
Other articles published on Jan 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+