ಅಂಡರ್-19 ವಿಶ್ವಕಪ್ 2020: 15 ಜನರ ತಂಡದಲ್ಲಿ ಕರ್ನಾಟಕದ ಇಬ್ಬರು ಆಯ್ಕೆ

ನವದೆಹಲಿ, ಡಿಸೆಂಬರ್ 2: ಮುಂದಿನ ವರ್ಷ ನಡೆಯಲಿರುವ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತವನ್ನು ಉತ್ತರ ಪ್ರದೇಶದ ಬ್ಯಾಟ್ಸ್‌ಮನ್ ಪ್ರಿಯಾಮ್ ಗರ್ಗ್ ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಈ ಪ್ರಮುಖ ಟೂರ್ನಿಗಾಗಿ ಬಿಸಿಸಿಐ, 15 ಜನರ ಭಾರತ ತಂಡವನ್ನು ಪ್ರಕಟಿಸಿದೆ.
2020ರ ಜನವರಿ 17ರಿಂದ ಫೆಬ್ರವರಿ 9ರ ವರೆಗೆ ನಡೆಯಲಿರುವ ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸುತ್ತಿರುವ ಗರ್ಗ್, ಟಾಪ್ ಆರ್ಡರ್‌ನಲ್ಲಿರುವ ಬಲ ಗೈ ಬ್ಯಾಟ್ಸ್‌ಮನ್. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ, ಲಿಸ್ಟ್ 'ಎ' ಪಂದ್ಯದಲ್ಲಿ ಶತಕ ಬಾರಿಸಿದ ದಾಖಲೆ ಪ್ರಿಯಾಮ್ ಹೆಸರಿನಲ್ಲಿದೆ. ಮುಂಬರಲಿರುವ ದಕ್ಷಿಣ ಆಫ್ರಿಕಾ ಪ್ರವಾಸ ಸರಣಿಗೂ ಭಾರತ ಅಂ-19 ತಂಡ ಪ್ರಕಟಿಸಲಾಗಿದೆ. ಬಿಸಿಸಿಐ ಪ್ರಕಟಿಸಿರುವ 15 ಜನರ ತಂಡದಲ್ಲಿ ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದಾರೆ. ವಿದ್ಯಾಧರ್ ಪಾಟೀಲ್ ಶುಭಾಂಗ್ ಹೆಗ್ಡೆ ಕರ್ನಾಟಕದಿಂದ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿರುವ ಆಟಗಾರರಾಗಿದ್ದಾರೆ.

ದೇವಧರ್ ಟ್ರೋಫಿಯಲ್ಲಿ ರನ್ನರ್‌ಅಪ್ ಪ್ರಶಸ್ತಿ ಗೆದ್ದಿದ್ದ ಭಾರತ 'ಸಿ' ತಂಡದಲ್ಲಿ ಪ್ರಯಾಮ್ ಗರ್ಗ್ ಕೂಡ ಇದ್ದರು. ಕಳೆದ ತಿಂಗಳು ನಡೆದಿದ್ದ ದೇವಧರ್ ಟ್ರೋಫಿ ಫೈನಲ್‌ನಲ್ಲಿ ಭಾರತ 'ಬಿ' ವಿರುದ್ಧ ಗರ್ಗ್ 74 ರನ್ ಬಾರಿಸಿದ್ದರು. ಅಂದ್ಹಾಗೆ, ಅಂಡರ್ 19 ವಿಶ್ವಕಪ್ 2020ರ ಪಂದ್ಯಗಳು 4 ತಂಡಗಳ 4 ಗುಂಪುಗಳ ಮಧ್ಯೆ ಅಂದರೆ ಒಟ್ಟು 16 ತಂಡಗಳ ಮಧ್ಯೆ ನಡೆಯಲಿದೆ (ಚಿತ್ರದಲ್ಲಿ ಪ್ರಿಯಾಮ್ ಗರ್ಗ್).
ಅಂಡರ್ 19 ವಿಶ್ವಕಪ್‌ಗೆ ಭಾರತ ತಂಡ: ಪ್ರಿಯಾಮ್ ಗರ್ಗ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ದಿವ್ಯಾಂಶ್ ಸಕ್ಸೇನಾ, ಧ್ರುವ್ ಚಂದ್ ಜೂರೆಲ್ (ಉಪನಾಯಕ ಮತ್ತು ವಿಕೆ), ಶಾಶ್ವತ್ ರಾವತ್, ದಿವ್ಯಾಂಶ್ ಜೋಶಿ, ಶುಭಾಂಗ್ ಹೆಗ್ಡೆ, ರವಿ ಬಿಷ್ಣೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೆಕರ್ (ವಿಕೆ), ಸುಶಾಂತ್ ಮಿಶ್ರಾ, ವಿದ್ಯಾಧರ್ ಪಾಟೀಲ್.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಅಂಡರ್ 19 ತಂಡ: ಪ್ರಿಮಾಮ್ ಗರ್ಗ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ದಿವ್ಯಾಂಶ್ ಸಕ್ಸೇನಾ, ಧ್ರುವ್ ಚಂದ್ ಜೂರೆಲ್ (ಉಪನಾಯಕ ಮತ್ತು ವಿಕೆ), ಶಾಶ್ವತ್ ರಾವತ್, ದಿವ್ಯಾನ್ಶ್ ಜೋಶಿ, ಶುಭಾಂಗ್ ಹೆಗ್ಡೆ, ರವಿ ಬಿಷ್ಣೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೆಕರ್, ಸುಶಾಂತ್ ಮಿಶ್ರಾ, ವಿದ್ಯಾಧರ್ ಪಾಟೀಲ್, ಸಿಟಿಎಲ್ ರಕ್ಷನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications