For Quick Alerts
ALLOW NOTIFICATIONS  
For Daily Alerts
 

U-19 World Cup: ಮುಶೀರ್, ಉದಯ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ಧ ಗೆದ್ದು ಸೂಪರ್-6 ತಲುಪಿದ ಭಾರತ

ಗುರುವಾರ, ಜನವರಿ 25ರಂದು ಬ್ಲೋಮ್‌ಫಾಂಟೈನ್‌ನಲ್ಲಿ ನಡೆದ 2024ರ ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು 201 ರನ್‌ಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಪಂದ್ಯಾವಳಿಯ ಸೂಪರ್-6 ಹಂತವನ್ನು ತಲುಪಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮುಶೀರ್ ಖಾನ್ ಅವರ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 301 ರನ್‌ಗಳನ್ನು ಕಲೆಹಾಕಿತು. ಸರ್ಫರಾಜ್ ಖಾನ್ ಅವರ ಸಹೋದರ ಮುಶೀರ್ ಖಾನ್ ತಮ್ಮ ಅಪಾರ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು.

U-19 World Cup 2024: Team India Reach Super-6 After Win Against Ireland By 201 Runs

ಮುಶೀರ್ ಖಾನ್ ಕೇವಲ 106 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 118 ರನ್ ಬಾರಿಸುವ ತಮ್ಮ ಇನ್ನಿಂಗ್ಸ್‌ನಲ್ಲಿ ಅದ್ಭುತವಾಗಿ ಹೆಜ್ಜೆ ಹಾಕಿದರು. ಮೊದಲು 66 ಎಸೆತಗಳಲ್ಲಿ ಮೊದಲ 50 ರನ್ ಗಳಿಸಿದ ಅವರು, ನಂತರ 50ರಿಂದ 100 ರನ್ ಗಳಿಸಲು ಕೇವಲ 34 ಎಸೆತಗಳನ್ನು ತೆಗೆದುಕೊಂಡರು.

ಭಾರತ ತಂಡದ ನಾಯಕ ಉದಯ್ ಸಹಾರನ್ 84 ಎಸೆತಗಳಲ್ಲಿ 75 ರನ್ ಗಳಿಸಿದರು. ಅಲ್ಲದೆ, ಮುಶೀರ್ ಖಾನ್ 156 ರನ್‌ಗಳ ಜೊತೆಯಾಟ ನಿರ್ಮಿಸಿದರು. ಯುವ ಭಾರತೀಯ ಬ್ಯಾಟರ್‌ಗಳು ಐರ್ಲೆಂಡ್‌ ತಂಡದ ದುರ್ಬಲ ಬೌಲಿಂಗ್ ದಾಳಿಯ ವಿರುದ್ಧ ತಮ್ಮ ರನ್‌ಗಳ ಖಾತೆಯನ್ನು ನೀಡಿದರು.

ಭಾರತ ತಂಡದ ಇನ್ನಿಂಗ್ಸ್‌ ಆರಂಭಿಸಿದ ಆದರ್ಶ್ ಸಿಂಗ್ (17) ಮತ್ತು ಅರ್ಶಿನ್ ಕುಲಕರ್ಣಿ (32) ಮೊದಲ ವಿಕೆಟ್‌ಗೆ 32 ರನ್‌ಗಳ ಜೊತೆಯಾಟ ಒದಗಿಸಿದರು. ಅರವೆಲ್ಲಿ ಅವನೀಶ್ 22 ರನ್, ಸಚಿನ್ ದಾಸ್ 21 ರನ್, ಪ್ರಿಯಾಂಶು ಮೊಲಿಯಾ 2 ರನ್ ಗಳಿಸಿದರು.

ಐರ್ಲೆಂಡ್ ತಂಡದ ಪರ ಬೌಲಿಂಗ್‌ನಲ್ಲಿ ಆಲಿವರ್ ರಿಲೆ 3 ವಿಕೆಟ್ ಪಡೆದರೆ, ಜಾನ್ ಮೆಕ್ನಾಲಿ 2 ವಿಕೆಟ್ ಮತ್ತು ಫಿನ್ ಲುಟನ್ ಒಂದು ವಿಕೆಟ್ ಪಡೆದರು.

ಭಾರತ ನೀಡಿದ 302 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ 29.4 ಓವರ್‌ಗಳಲ್ಲಿ ಕೇವಲ 100 ರನ್‌ಗಳಿಗೆ ಆಲೌಟ್ ಆಯಿತು. ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಜೋರ್ಡಾನ್ ನೀಲ್ (11) ಮತ್ತು ರಯಾನ್ ಹಂಟರ್ (13) ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು.

ಕಿಯಾನ್ ಹಿಲ್ಟನ್ 9 ರನ್, ಸ್ಕಾಟ್ ಮ್ಯಾಕ್‌ಬೆತ್ 2 ರನ್, ಮಕ್ದಾರ ಕಾಸ್ಗ್ರೇವ್ 3 ರನ್, ಒಲಿವರ್ ರಿಲಿ 15 ರನ್, ಡೆನಿಯಲ್ ಫೊರ್ಕಿನ್ 27 ರನ್, ಫಿನ್ ಲಟ್ಟನ್ 7 ರನ್ ಮಾತ್ರ ಗಳಿಸಿದರು.

ಬೌಲಿಂಗ್‌ನಲ್ಲಿ ಐರ್ಲೆಂಡ್ ಪರ ನಮನ್ ತಿವಾರಿ 10 ಓವರ್‌ಗಳಲ್ಲಿ 53 ರನ್ ನೀಡಿ 4 ವಿಕೆಟ್ ಪಡೆದರೆ, ಸೌಮಿ ಪಾಂಡೆ 9 ಓವರ್‌ಗಳಲ್ಲಿ 21 ರನ್ ನೀಡಿ 3 ವಿಕೆಟ್ ಕಬಳಿಸಿದರು. ಧನುಷ್ ಗೌಡ, ಮುರುಗನ್ ಅಭಿಷೇಕ್ ಮತ್ತು ಉದಯ್ ಸಹರಾನ್ ತಲಾ ಒಂದೊಂದು ವಿಕೆಟ್ ಪಡೆದರು.

Story first published: Thursday, January 25, 2024, 21:22 [IST]
Other articles published on Jan 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+