ಅಂಡರ್ 19 ವಿಶ್ವಕಪ್ ಹೀರೋ ಮನ್ಜೋತ್ ಕಲ್ರಾ ರಣಜಿಯಿಂದ ಅಮಾನತು!

ಬೆಂಗಳೂರು, ಜನವರಿ 2: ಎಡಗೈ ಯುವ ಬ್ಯಾಟ್ಸ್‌ಮನ್, ಓಪನರ್, ಕಳೆದ ಅಂಡರ್ 19 ವಿಶ್ವಕಪ್‌ನ ಫೈನಲ್‌ನಲ್ಲಿ ಶತಕ ಬಾರಿಸಿದ್ದ ಮನ್ಜೋತ್ ಕಲ್ರಾ, ರಣಜಿ ಟ್ರೋಫಿ ಟೂರ್ನಿಯಿಂದ ಅಮಾನತಾಗಿದ್ದಾರೆ. ಅಂಡರ್ 16, ಅಂಡರ್ 19 ದಿನಗಳಲ್ಲಿ ವಯಸ್ಸಿನ ವಂಚನೆಯ ಆರೋಪಕ್ಕಾಗಿ ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಒಂಬುಡ್ಸ್ಮನ್, ಮನ್ಜೋತ್‌ಗೆ ರಣಜಿಯಿಂದ 1 ವರ್ಷದ ನಿಷೇಧ ವಿಧಿಸಿದೆ.
ವಯಸ್ಸಿನ ದಾಖಲೆಯಲ್ಲಿನ ವಂಚನೆಯ ಆರೋಪ ಡೆಲ್ಲಿ ತಂಡದ ಉಪನಾಯಕ ನಿತೀಶ್ ರಾಣಾ ಮೇಲೂ ಕೇಳಿ ಬಂದಿದೆ. ಜೂನಿಯರ್ ಲೆವೆಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಾಗ ರಾಣಾ ಕೂಡ ವಂಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜನ್ಮ ದಿನಾಂಕ ಸಾಭೀತುಪಡಿಸಲು ಇನ್ನೊಂದಿಷ್ಟು ದಾಖಲೆಗಳನ್ನು ನೀಡುವಂತೆ ಅವರಿಗೆ ಹೇಳಲಾಗಿದೆ.
ಉತ್ತರ ಪ್ರದೇಶದ ವೇಗಿ ಶಿವಂ ಮಾವಿ ಕೂಡ ಏಜ್ ಫ್ರಾಡ್ ಆರೋಪ ಎದುರಿಸುತ್ತಿದ್ದಾರೆ. ರಾಣಾ, ಮಾವಿ ಇಬ್ಬರೂ ವಯಸ್ಸಿಗೆ ಸಂಬಂಧಿಸಿದಂತೆ ಸರಿಯಾದ ದಾಖಲೆ ಒದಗಿಸುವಲ್ಲಿ ವಿಫಲರಾದರೆ, ತಪ್ಪು ಸಾಭೀತಾದರೆ ಇಬ್ಬರೂ 2020ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯಿಂದ ಹೊರ ಬೀಳಬೇಕಾಗುತ್ತದೆ.
ಬಿಸಿಸಿಐ ದಾಖಲೆಗಳ ಪ್ರಕಾರ ಕಲ್ರಾ ಅವರ ವಯಸ್ಸು 20 ವರ್ಷ 351 ದಿನಗಳು. ಕಳೆದ ವಾರ ಅಂಡರ್ 23 ಟೂರ್ನಿಯಲ್ಲಿ ದೆಹಲಿ ಪರ ಬರೋಡಾ ವಿರುದ್ಧ ಆಡಿದ್ದ ಕಲ್ರಾ 80 ರನ್ ಬಾರಿಸಿದ್ದರು. ಡಿಡಿಸಿಎ ಅಧಿಕಾರಿಗಳು ವಯಸ್ಸಿನ ಬಗ್ಗೆ ವಿಚಾರಿಸಿದಾಗ ಕಲ್ರಾ ತನ್ನ ಅಸಹಾಯಕತೆ ತೋರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications