For Quick Alerts
ALLOW NOTIFICATIONS  
For Daily Alerts
 

ಇರಾನ್‌ ಮಣಿಸಿದ ಭಾರತ ಇತಿಹಾಸ: ಎಎಫ್‌ಸಿ U17 ಏಷ್ಯನ್ ಕಪ್‌ಗೆ ಅರ್ಹತೆ

ಭಾರತ ಫುಟ್‌ಬಾಲ್‌ ಕ್ರೀಡೆಯಲ್ಲಿ ಒಂದು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಭಾರತದ ಯುವ ಫುಟ್‌ಬಾಲ್ ತಂಡ, ಇರಾನ್‌ ತಂಡವನ್ನು ಮಣಿಸಿ, ಪ್ರತಿಷ್ಠಿತ ಎಎಫ್‌ಸಿ (AFC) ಅಂಡರ್ 17 ಏಷ್ಯನ್ ಕಪ್ 2025 ಟೂರ್ನಿಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ.

ಗ್ರೂಪ್ ಡಿ ಪಂದ್ಯದಲ್ಲಿ ಇರಾನ್ ಅನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತ 2026 ರ ಎಎಫ್‌ಸಿ ಅಂಡರ್-17 ಏಷ್ಯನ್ ಕಪ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಡಲ್ಲಾಮುವಾನ್ ಗ್ಯಾಂಗ್ಟೆ ಮತ್ತು ಗುನ್ಲೀಬಾ ಗೋಲು ಬಾರಿಸಿ ಭಾರತದ ಜಯದಲ್ಲಿ ಮಿಂಚಿದ್ದಾರೆ. ಈ ಮೂಲಕ ಭಾರತ 10ನೇ ಬಾರಿಗೆ ಟೂರ್ನಿಯಲ್ಲಿ ಸ್ಥಾನ ಪಡೆದಿದೆ. ಇರಾನ್ ಏಳು ಅಂಕಗಳೊಂದಿಗೆ ಫೇವರಿಟ್ ಆಗಿ ಪಂದ್ಯವನ್ನು ಪ್ರವೇಶಿಸಿತು. ಈ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಇರಾನ್‌ ಮುಂದಿನ ಹಾದಿ ಸುಗಮವಾಗುತ್ತಿತ್ತು. ಆದರೆ ಭಾರತ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ.

U17 AFC Asian Cup 2026 India Beats Iran 2-1 Qualifies for 10th Time

ಈ ಪಂದ್ಯಕ್ಕೂ ಮುನ್ನ ಭಾರತ 4 ಅಂಕವನ್ನು ಕಲೆ ಹಾಕಿತ್ತು. ಮತ್ತು ಕೇವಲ ಒಂದು ಗೆಲುವು ಮಾತ್ರ ಮುಂದಿನ ಹಂತದ ಕನಸು ನನಸಾಗುತ್ತಿತ್ತು. ಭಾರತ ತಂಡವು ಅಂತಿಮವಾಗಿ ಅಮೋಘ ಪ್ರದರ್ಶನ ನೀಡಿತು. ಅಲ್ಲದೆ ಇರಾನ್‌ ಸವಾಲನ್ನು ಮೆಟ್ಟಿನಿಂತು ಜಯ ಭೇರಿ ಬಾರಿಸಿತು.

ಮೊದಲವಧಿಯ ಆಟ ರೋಚಕತೆ ಹುಟ್ಟಿಸಿತ್ತು. ಇರಾನ್‌ ಆರಂಭದಲ್ಲಿ ಒಂದು ಗೋಲು ಬಾರಿಸಿ ಭಾರತದ ಮೇಲೆ ಒತ್ತಡ ಹೇರುವ ತಂತ್ರವನ್ನು ಪ್ರಯೋಗಿಸಿತು. ಇರಾನ್ 19ನೇ ನಿಮಿಷದಲ್ಲಿ ಭಾರತದ ಗೋಲಿಯನ್ನು ವಂಚಿಸುವಲ್ಲಿ ಸಫಲವಾಯಿತು. ಭಾರತ ಈ ಅಂತರವನ್ನು ಕಡಿಮೆಯಾಗಿಸಲು ಈ ಅವಧಿಯ ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿತು. ಈ ಅವಧಿಯಲ್ಲಿ ಭಾರತದ ಪರ ಗುನ್ಲೀಬಾ ಗೋಲು ಬಾರಿಸಿದರು. ಪರಿಣಾಮ ಮೊದಲಾವಧಿಯ ಮುಕ್ತಾಯಕ್ಕೆ ಉಭಯ ತಂಡಗಳು ತಲಾ ಒಂದೊಂದು ಗೋಲು ದಾಖಲಿಸಿದವು.

ಭಾರತ ಅಬ್ಬರ

ಭಾರತದ ಗೋಲ್‌ಕೀಪರ್ ರಾಜ್‌ರೂಪ್ ಸರ್ಕಾರ್‌ ಅಮೋಘ ಪ್ರದರ್ಶನ ನೀಡಿ, ಇರಾನ್‌ ತಂಡಕ್ಕೆ ಗೋಲು ನೀಡದಂತೆ ತಡೆಯುವಲ್ಲಿ ಸಫಲರಾದರು. ಪರಿಣಾಮ ಭಾರತದ ಮೇಲೆ ಹೆಚ್ಚಿನ ಒತ್ತಡ ಬೀಳಲಿಲ್ಲ. ಎರಡನೇ ಅವಧಿಯ ಆಟದಲ್ಲಿ ಭಾರತ ಇರಾನ್‌ ತಂಡಕ್ಕೆ ಗೋಲನ್ನು ನೀಡದೆ ತಡೆಯುವಲ್ಲಿ ಸಫಲವಾಯಿತು. ಅಲ್ಲದೆ 56ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರವನ್ನು ಹೆಚ್ಚಿಸಿಕೊಂಡಿತು. ಕೊನೆಯ ಕ್ಷಣದ ವರೆಗೂ ಇರಾನ್ ಗೋಲು ಬಾರಿಸುವ ಆಸೆ ಫಲಿಸಲಿಲ್ಲ. ಭಾರತ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿತು.

Story first published: Tuesday, December 2, 2025, 0:05 [IST]
Other articles published on Dec 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+