U-19 Asia Cup: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಂತಿಮ ಹಣಾಹಣಿ, ಯಾವಾಗ, ಎಲ್ಲಿ?
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಂಡರ್-19 ಪುರುಷರ ಏಷ್ಯಾಕಪ್ 2024ರ ಫೈನಲ್ ಪಂದ್ಯವು ಡಿಸೆಂಬರ್ 8 ಭಾನುವಾರ ದಂದು ನಡೆಯಲಿದೆ. ಈ ಪಂದ್ಯ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 10:30 ಗಂಟೆಗೆ ಆರಂಭವಾಗಲಿದೆ. ಉಭಯ ತಂಡಗಳು ಪ್ರಶಸ್ತಿಯನ್ನು ಎತ್ತಿ ಹಿಡಿಯಲು ಸಜ್ಜಾಗಿವೆ. ಕ್ರಿಕೆಟ್ ಅಭಿಮಾನಿಗಳು ಕೂಡ ರೋಚಕ ಪಂದ್ಯವನ್ನು ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ಅಂಡರ್-19 ಪುರುಷರ ಏಷ್ಯಾಕಪ್ 2024ರ ಫೈನಲ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಣ್ಣು ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಮೇಲೆ ನೆಟ್ಟಿದೆ. ಆಯುಷ್ ಮತ್ತು 13 ವರ್ಷದ ವೈಭವ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಗೆಲುವಿನ ಆಸೆ ಚಿಗುರಿಸಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ವೈಭವ್ ಸತತ ಎರಡು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಮತ್ತೊಂದೆಡೆ, ಆಯುಷ್ ಕೂಡ ಅದ್ಭುತವಾಗಿ ಬ್ಯಾಟಿಂಗ್ ಆಡಿದ್ದಾರೆ. ಆಯುಷ್ ಮತ್ತು ವೈಭವ್ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 175 ಮತ್ತು 167 ರನ್ ಗಳಿಸಿದ್ದಾರೆ.

ಈ ಫೈನಲ್ ಪಂದ್ಯದ ಸಮರದಲ್ಲಿ ಭಾರತಕ್ಕೆ ತನ್ನ ಅತ್ಯುತ್ತಮ ಬ್ಯಾಟಿಂಗ್ ಬಲವಿದೆ. ಇತ್ತ ಬಾಂಗ್ಲಾದೇಶಕ್ಕೆ ಬಲಿಷ್ಠ ಬೌಲಿಂಗ್ ತಂಡದ ಶಕ್ತಿಯಾಗಿದೆ. ಹೀಗಾಗಿ 2023ರ ಸೆಮಿಫೈನಲ್‌ನಂತೆ ಈಗ ಮತ್ತೊಮ್ಮೆ ಭಾರತ ಬ್ಯಾಟಿಂಗ್ ಮತ್ತು ಬಾಂಗ್ಲಾದೇಶದ ಬೌಲಿಂಗ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಈ ಟೂರ್ನಿಯಲ್ಲಿ ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರೆ, ಬಾಂಗ್ಲಾದೇಶ ತಂಡ ಪಾಕಿಸ್ತಾನವನ್ನು ಸೋಲಿಸಿ ಫೈನಲ್‌ಗೆ ತಲುಪಿದೆ.
ನೇರಪ್ರಸಾರ
ಬಹುನಿರೀಕ್ಷಿತ ಫೈನಲ್ ಪಂದ್ಯವೂ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಆದರೆ ಈ ಪಂದ್ಯವನ್ನು ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದು.
ಅಂಡರ್-19 ಪುರುಷರ ಏಷ್ಯಾಕಪ್ 2024ರ ಟೂರ್ನಿಯಲ್ಲಿ ಬಾಂಗ್ಲಾದೇಶ ಪರ ಮೊಹಮ್ಮದ್ ಅಲ್ ಫಹಾದ್ 10 ವಿಕೆಟ್ ಪಡೆದಿದ್ದಾರೆ. ಅವರು ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದಾದ ಬಳಿಕ ಮೊಹಮ್ಮದ್ ಇಕ್ಬಾಲ್ ಹಸನ್ ಎಮೋನ್ ಕೂಡ 10 ವಿಕೆಟ್ ಕಬಳಿಸಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಎದುರಿಸಿ ಸೋಲು ಕಂಡಿತ್ತಿ. ಇದಾದ ಬಳಿಕ ಗೆಲುವಿನ ಓಟವನ್ನು ಕಾಯ್ದುಕೊಂಡ ಭಾರತ ಫೈನಲ್ ಪ್ರವೇಶಿಸಿದೆ. ಬಾಂಗ್ಲಾದೇಶ ಕೂಡ ಗ್ರೂಪ್ ಹಂತದಲ್ಲಿ ಶ್ರೀಲಂಕಾ ವಿರುದ್ಧ ಸೋತಿತ್ತು. ಇದೀಗ ಉಭಯ ತಂಡಗಳ ಕಾದಾಟ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications