ಅಂಡರ್-19 ವಿಶ್ವಕಪ್: ಶುಭಾರಂಭ ಮಾಡಿದ ಭಾರತ
ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಂಡರ್ 19 ವಿಶ್ವಕಪ್ ತಂಡದ ಶುಭಾರಂಭ ಮಾಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ 84 ರನ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 251 ರನ್ ಕಲೆ ಹಾಕಿತು. ಇದಕ್ಕುತ್ತರಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ 45.5 ಓವರ್‌ಗಲ್ಲಿ 167 ರನ್‌ಗಳಿಗೆ ಸರ್ವಪತನ ಕಂಡಿತು.
ಟೀಮ್ ಇಂಡಿಯಾದ ಆರಂಭಿಕ ಆಟಗಾರರು ಕಳಪೆ ಪ್ರದರ್ಶನ ನೀಡಿದರು. ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಆದರ್ಶ ಸಿಂಗ್ ಹಾಗೂ ಉದಯ್ ಸಹರಾನ್ ಜೋಡಿ ತಂಡಕ್ಕೆ ಆಧಾರವಾದರು.

ಶತಕದ ಜೊತೆಯಾಟ
ಮೂರನೇ ವಿಕೆಟ್‌ಗೆ ಆದರ್ಶ ಸಿಂಗ್ ಹಾಗೂ ಉದಯ್ ಸಹರಾನ್ ಜೋಡಿ ಅಬ್ಬರದ ಜೊತೆಯಾಟವನ್ನು ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಬಾಂಗ್ಲಾ ಬೌಲರ್‌ಗಳು ವಿಫಲರಾದರು. ಈ ಜೋಡಿ 144 ಎಸೆತಗಳಲ್ಲಿ 116 ರನ್ ಸೇರಿಸಿತು.ಆದರ್ಶ ಸಿಂಗ್ 96 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 76 ರನ್ ಬಾರಿಸಿ ಔಟ್ ಆದರು. ಉದಯ್ ಸಹರಾನ್ 94 ಎಸೆತಗಳಲ್ಲಿ 4 ಬೌಂಡರಿ ಸೇರಿದಂತೆ 64 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.
ಉಳಿದಂತೆ ಪ್ರಿಯಾಂಷು ಹಾಗೂ ಆರ್ವೆಲ್ ತಲಾ 23 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಸಚಿನ್ ಧಾಸ್ 26 ರನ್ ಸಿಡಿಸಿದರು.
ಮುರುಫ್‌ಗೆ ಐದು ವಿಕೆಟ್
ಮುರುಫ್ ಬಿಗುವಿನ ದಾಳಿ ನಡೆಸಿದರು. ಇವರು ಎಂಟು ಓವರ್‌ಗಳಲ್ಲಿ ಒಂದು ಮೇಡನ್ ಸೇರಿದಂತೆ 43 ರನ್ ನೀಡಿ ಐದು ವಿಕೆಟ್ ಪಡೆದರು.

ಕಳಪೆ ಆರಂಭ
ಬಾಂಗ್ಲಾದೇಶದ ಮೇಲ್ಪಂಕ್ತೀಯ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ತಂಡದ ಮೊತ್ತ 50 ರನ್ ಆಗಿದ್ದಾಗ ನಾಲ್ಕು ವಿಕೆಟ್‌ಗಳು ಬಿದ್ದವು.
ಐದನೇ ವಿಕೆಟ್‌ಗೆ ಅರಿಫುಲ್ ಇಸ್ಲಾಂ, ಮೊಹಮ್ಮದ್ ಶಿಹಾಬ್ ಜೇಮ್ಸ್ ಜೋಡಿ ಅಬ್ಬರಿಸಿತು. ಈ ಜೋಡಿ 118 ಎಸೆತಗಳಲ್ಲಿ 77 ರನ್ ಸೇರಿಸಿತು. ಅರಿಫುಲ್ ಇಸ್ಲಾಂ 41 ರನ್ ಬಾರಿಸಿದರು. ಮೊಹಮ್ಮದ್ ಶಿಹಾಬ್ ಜೇಮ್ಸ್ 7 ಬೌಂಡರಿ ನೆರವಿನಿಂದ 54 ರನ್ ಸಿಡಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.ಸುಮಯ್ ಪಾಂಡೆ 24 ರನ್ ನೀಡಿ 4, ಮುಶೀರ್ ಖಾನ್ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications