Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ಕಿಂಗ್ ಕೊಹ್ಲಿಯನ್ನು ಭೇಟಿಯಾದ ಸಿಎಸ್‌ಕೆ ಯುವ ಆಟಗಾರ

19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಭಾರತೀಯ ತಂಡದ ನಾಯಕ ಆಯುಷ್ ಮ್ಹಾತ್ರೆ ಅವರು ತಮ್ಮ ಸಾಮಾಜಿಕ ತಾಣದಲ್ಲಿ ಹಾಕಿಕೊಂಡ ಒಂದು ಫೋಟೋ ಈಗ ಸಖತ್ ವೈರಲ್ ಆಗುತ್ತಿದೆ. ಆಯುಷ್ ಮಾತ್ರೆ, ಆರ್‌ಸಿಬಿ ತಂಡದ ವಿರಾಟ್‌ ಕೊಹ್ಲಿ ಅವರನ್ನು ಭೇಟಿಯಾದರು. ಶನಿವಾರ ಬೆಂಗಳೂರಿನಲ್ಲಿ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನಲ್ಲಿ ಭೇಟಿಯಾಗಿದ್ದಾರೆ. 17 ವರ್ಷದ ಯುವ ಬ್ಯಾಟ್ಸ್‌ಮನ್ ಆಯುಷ್, ವಿರಾಟ್ ಕೊಹ್ಲಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಸರಣಿ ಜುಲೈ 14 ರಿಂದ ಆರಂಭವಾಗುವ ಸರಣಿಯಲ್ಲಿ ವಿರಾಟ್ ಪ್ರಮುಖ ಆಕರ್ಷಣೆ. ಇವರು ತವರಿನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನು ಗಾಯದಿಂದಾಗಿ ತಪ್ಪಿಸಿಕೊಂಡಿದ್ದಾರೆ.

U19 WC Winner

ವಿರಾಟ್‌ ಕೊಹ್ಲಿ ಕೊನೆಯ ಬಾರಿಗೆ ಐಪಿಎಲ್‌ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್‌ನಲ್ಲಿ ಕೊಹ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ವಿರಾಟ್‌ ಕೊಹ್ಲಿ, ಅಜೇಯ 75 ರನ್ ಗಳಿಸಿದರು. ಇದು ಆರ್‌ಸಿಬಿ ತಂಡವನ್ನು ಸತತ ಎರಡನೇ ಪ್ರಶಸ್ತಿ ಗೆಲ್ಲುವಲ್ಲಿ ಸಫಲವಾಯಿತು.

ಇಂಗ್ಲೆಂಡ್‌ನಲ್ಲಿ ಹೇಗಿದೆ ವಿರಾಟ್ ಪ್ರದರ್ಶನ?

ಇಂಗ್ಲೆಂಡ್‌ ಸರಣಿಗೂ ಮುನ್ನ ವಿರಾಟ್‌ ಕೊಹ್ಲಿ ಫಿಟ್ನೆಸ್‌ ಪರೀಕ್ಷೆಗೆ ಒಳಗಾಗಬೇಕಿದೆ. ಇದಕ್ಕೆ ಪೂರಕವಾಗಿ ಇವರು ಬೆಂಗಳೂರಿನಲ್ಲಿರುವ ಸಿಒಇನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ವಿರಾಟ್ ಕೊಹ್ಲಿ ಪ್ರಸಕ್ತ ಭಾರತದ ಪರ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಇವರ ಬ್ಯಾಟಿಂಗ್ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುದಿಂದ ಕಾಯುತ್ತಿದ್ದಾರೆ. ಇಂಗ್ಲೆಂಡ್‌ ಪ್ರವಾಸದಲ್ಲಿ ವಿರಾಟ್ ಅಬ್ಬರದ ಪ್ರದರ್ಶನ ನೀಡಲು ಬೇಕಾದ ಸಿದ್ಧತೆ ನಡೆಸುತ್ತಿದ್ದಾರೆ.

ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿ ಅಂಕಿ ಅಂಶ ಉತ್ತಮವಾಗಿವೆ. ಆಂಗ್ಲರ ನಾಡಿನಲ್ಲಿ ಆಡಿದ 33 ಏಕದಿನ ಪಂದ್ಯಗಳಲ್ಲಿ ವಿರಾಟ್‌ 51ರ ಸರಾಸರಿಯಲ್ಲಿ 1349 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 12 ಅರ್ಧಶತಕಗಳು ಸಹ ಸೇರಿವೆ.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಿದ್ದ ಆಯುಷ್ ಮಾತ್ರೆ ಗಾಯದ ಕಾರಣದಿಂದಾಗಿ ಐಪಿಎಲ್‌ 2026ರ ಮಧ್ಯದಲ್ಲಿ ಹೊರನಡೆದರು. 19ನೇ ಆವೃತ್ತಿಯಲ್ಲಿ ಆಯುಷ್ ಮಾತ್ರೆ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ 201 ರನ್ ಗಳಿಸಿದ್ದಾರೆ. ಈ ವೇಳೆ ಇವರು 33.50 ಸರಾಸರಿ ಮತ್ತು 177.87 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಎರಡು ಅರ್ಧ ಶತಕ ಸೇರಿದೆ. ಮುಂಬೈನ ಆಯುಷ್ ಇದುವರೆಗೆ ಏಳು ಲಿಸ್ಟ್ ಎ ಪಂದ್ಯಗಳಲ್ಲಿ 458 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ಒಂದು ಅರ್ಧ ಶತಕ ಸೇರಿವೆ.

Story first published: Sunday, June 28, 2026, 14:03 [IST]
Other articles published on Jun 28, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+