For Quick Alerts
ALLOW NOTIFICATIONS  
For Daily Alerts
 

U19 World Cup 2026: ಅಂಡರ್ 19 ವಿಶ್ವಕಪ್‌ 2026 ಫೈನಲ್‌ ಪಂದ್ಯದಲ್ಲಿ ಭರ್ಜರಿ ಜಯ: ಚಾಂಪಿಯನ್‌ ಆದ ಭಾರತ

U19 World Cup 2026: ಜಿಂಬಾಬ್ವೆಯ ಹರಾರೆ ಸ್ಪೋರ್ಟ್‌ ಕ್ಲಬ್‌ನಲ್ಲಿ ನಡೆದ ಐಸಿಸಿ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ 2026ರ ಫೈನಲ್‌ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. 100 ರನ್‌ಗಳ ಅಂತರದ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 411 ರನ್‌ಗಳನ್ನು ಕಲೆಹಾಕಿ ಎದುರಾಳಿ ಇಂಗ್ಲೆಂಡ್‌ಗೆ 412 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 40.2 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಬರೀ 311 ರನ್‌ಗಳನ್ನು ಮಾತ್ರ ಕಲೆಹಾಕಿ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ 100 ರನ್‌ಗಳ ಭರ್ಜರಿ ಜಯ ದಾಖಲಿಸಿದ್ದು, ಆರು ಬಾರಿ ಅಂಡರ್ 19 ವಿಶ್ವಕಪ್‌ ಎತ್ತಿಹಿಡಿದ ದಾಖಲೆ ಬರೆದಿದೆ.

U19 World Cup 2026 India Beat England by 100 Runs to Win in Final Know complete details

ಶತಕ ಸಿಡಿಸಿ ಮಿಂಚಿದ ವೈಭವ್: ಭಾರತದ ಗೆಲುವಿಗೆ ಪ್ರಮುಖ ಕಾರವಾಗಿದ್ದೇ, ವೈಭವ್‌ ಸೂರ್ಯವರ್ಶಿ ಬ್ಯಾಟ್‌ನಿಂದ ಹರಿದ ರನ್‌ಗಳ ಸುರಿಮಳೆ ಅಂದ್ರೆ ತಪ್ಪಾಗಲಾರದು. ಮತ್ತೊಂದೆಡೆ, ಭಾರತದ ಬೌಲರ್‌ಗಳು ಕೂಡ ಉತ್ತಮ ದಾಳಿ ನಡೆಸಿ ಎಲ್ಲಾ ವಿಕೆಟ್‌ ಕಬಳಿಸಿದರು. ಬ್ಯಾಟಿಂಗ್ ವಿಚಾರಕ್ಕೆ ಬಂದರೆ, ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಶತಕ ತಂಡಕ್ಕೆ ಬಲವಾದ ಅಡಿಪಾಯ ಹಾಕಿತು. ಅವರು ಕೇವಲ 80 ಎಸೆತಗಳಲ್ಲಿ 15 ಸಿಕ್ಸ್‌, 15 ಬೌಂಡರಿ ಸಹಿತ ಬರೋಬ್ಬರಿ 175 ರನ್‌ಗಳನ್ನು ಸಿಡಿಸಿ ಇತಿಹಾಸ ನಿರ್ಮಿಸಿದರು.

ಇಂಗ್ಲೆಂಡ್‌ ಬೌಲರ್‌ಗಳ ತತ್ತರ: ಆರಂಭದಲ್ಲಿ ಬ್ಯಾಟಿಂಗ್‌ಗಿಳಿದ ಆರನ್ ಜಾರ್ಜ್ 9(11) ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ, ಅಖಾಡಕ್ಕಿಳಿದ ನಾಯಕ ಆಯುಷ್ ಮ್ಹಾತ್ರೆ 53(51), ವೈಭವ್ ಸೂರ್ಯವಂಶಿ 175 (80) ಇವರಿಬ್ಬರು ಎರಡನೇ ವಿಕೆಟ್‌ಗೆ ಉತ್ತಮವಾಗಿ ಜೊತೆಯಾಟವಾಡಿದರು. ಮ್ಹಾತ್ರೆ ಅರ್ಧಶತಕದ ಕೊಡುಗೆ ನೀಡಿದರೆ, ವೈಭವ್ ಸೂರ್ಯವಂಶಿ ವೇಗವಾಗಿ ರನ್ ಗಳಿಸುವ ಮೂಲಕ ಇಂಗ್ಲೆಂಡ್ ಬೌಲರ್‌ಗಳಿಗೆ ಬೆವರಿಸಿಳಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ವೇದಾಂತ್ ತ್ರಿವೇದಿ 32(36), ವಿಹಾನ್ ಮಲ್ಹೋತ್ರ 30(36), ಅಭಿಗ್ಯಾನ್ ಕುಂಡು 40(31), ಅಂಬ್ರಿಷ್ 18(24), ಕನಿಷ್ಕ ಚೌಹಣ್ ಅಜೇಯ 37(20) ರನ್‌ಗಳನ್ನು ಸಿಡಿಸಿದರು. ಹೆನಿಲ್ ಪಾಟೇಲ್‌ 5(7), ದೀಪೇಶ್ ದೇವೇಂದ್ರನ್ ಯಾವುದೇ ರನ್‌ ಬಾರಿಸಿದೆ ಅಜೆಯರಾಗಿ ಉಳಿದರು. ಕೊನೆಯದಾಗಿ ಕನಿಷ್ಕ ಚೌಹಣ್ ಬ್ಯಾಟ್‌ನಿಂದ ಬಂದ 37 ರನ್‌ಗಳೇ ಭಾರತ ತಂಡ 400 ರನ್‌ಗಳ ಗಡಿ ದಾಟಲು ಕಾರಣವಾಯಿತು.

ಭಾರತ ನೀಡಿದ 412 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಕೆಲೆಬ್ ಫಾಲ್ಕನರ್ ಅವರ ಶತಕ ಹಾಗೂ ಬೆನ್ ಡಾಕಿನ್ಸ್ ಅವರ ಅರ್ಧಶತಕ ತಂಡಕ್ಕೆ ಸ್ವಲ್ಪ ಜೀವ ನೀಡಿತು. ಬೆನ್ ಮೆಯ್ಸ್ ಸಹ ಸ್ಫೋಟಕ ಬ್ಯಾಟಿಂಗ್ ಮೂಲಕ ಉತ್ತಮ ರನ್ ಗಳಿಸಿದರು. ಆದರೂ ಭಾರತ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿ ಎದುರಿಸಲು ಇಂಗ್ಲೆಂಡ್ ತಂಡ ವಿಫಲವಾಯಿತು. ಅಂತಿಮವಾಗಿ 311 ರನ್‌ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಒಪ್ಪಿಸಿ ಇಂಗ್ಲೆಂಡ್, 100 ರನ್‌ಗಳ ಅಂತರದ ಸೋಲನುಭವಿಸಿತು. ಈ ಗೆಲುವಿನೊಂದಿಗೆ ಭಾರತ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ದಾಖಲೆಯ 6ನೇ ಬಾರಿ ಚಾಂಪಿಯನ್ ಆಗಿದೆ. ಯುವ ಆಟಗಾರರ ಆತ್ಮವಿಶ್ವಾಸ, ಸಮತೋಲನಗೊಂಡ ತಂಡದ ಒಗ್ಗಟ್ಟಿನ ಪ್ರದರ್ಶನವೇ ಈ ಮಹತ್ವದ ಸಾಧನೆಗೆ ಪ್ರಮುಖ ಕಾರಣವಾಗಿದೆ.

Story first published: Friday, February 6, 2026, 20:40 [IST]
Other articles published on Feb 6, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+