ಭಾರತ ತಂಡ ತನ್ನ ಕೊನೆಯ ಸೂಪರ್-6 ಸುತ್ತಿನ ಪಂದ್ಯದಲ್ಲಿ ನೇಪಾಳ ತಂಡವನ್ನು ಸೋಲಿಸಿದೆ. ಟೀಂ ಇಂಡಿಯಾ 132 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನ ನಂತರ, ಭಾರತ ತಂಡವು ಟೂರ್ನಿಯ ಸೆಮಿಫೈನಲ್ ಹಂತವನ್ನು ತಲುಪಿದೆ. ಉದಯ್ ಸಹರನ್ ನೇತೃತ್ವದ ಭಾರತ ತಂಡ ತನ್ನ ಮೊದಲ ಸೂಪರ್-6 ಸುತ್ತಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 214 ರನ್‌ಗಳಿಂದ ಜಯ ಸಾಧಿಸಿತ್ತು. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಸತತ 5 ಪಂದ್ಯಗಳನ್ನು ಗೆದ್ದುಕೊಂಡಿದೆ.

ಇದೀಗ ಭಾರತ ತಂಡ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಇದುವರೆಗೂ ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಸತತ ಗೆಲುವು ಸಾಧಿಸಿದೆ. ಭಾರತ ತಂಡ ಬಾಂಗ್ಲಾದೇಶ, ಐರ್ಲೆಂಡ್, ಅಮೆರಿಕ. ನ್ಯೂಜಿಲೆಂಡ್ ಮತ್ತು ನೇಪಾಳವನ್ನು ಸೋಲಿಸಿದೆ. ಆದ್ದರಿಂದ ಟೀಂ ಇಂಡಿಯಾವನ್ನು ಸೆಮಿಫೈನಲ್‌ನಲ್ಲಿ ಕಟ್ಟಿಹಾಕುವುದು ದಕ್ಷಿಣ ಆಫ್ರಿಕಾಕ್ಕೆ ದೊಡ್ಡ ಸವಾಲಾಗಿದೆ.
ಈ ಟೂರ್ನಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಹೊರತಾಗಿ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.ಟಾಸ್ ಗೆದ್ದ ಭಾರತ ತಂಡದ ನಾಯಕ ಉದಯ್ ಸಹರಾನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 5 ವಿಕೆಟ್ ಗೆ 297 ರನ್ ಗಳಿಸಿತು. ಭಾರತದ ಪರ ನಾಯಕ ಉದಯ್ ಸಹರನ್ ಮತ್ತು ಸಚಿನ್ ದಾಸ್ ಭರ್ಜರಿ ಶತಕ ಬಾರಿಸಿದರು. ಭಾರತದ ನಾಯಕ 107 ಎಸೆತಗಳಲ್ಲಿ 100 ರನ್ ಗಳಿಸಿದರು. ಆದರೆ, ಸಚಿನ್ ದಾಸ್ 101 ಎಸೆತಗಳಲ್ಲಿ 116 ರನ್ ಬಾರಿಸಿದರು. ಉದಯ್ ಸಹರಾನ್ ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿಗಳು ಸೇರಿವೆ. ಆದರೆ ಸಚಿನ್ ದಾಸ್ ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡಿವೆ.
ಇವರಿಬ್ಬರ ಅಮೊಘ ಆಟದ ಬಲದಿಂದ ಟೀಮ್ ಇಂಡಿಯಾ ನಿಗದಿತ ಓವರ್‌ಗಳಲ್ಲಿ ಐದು ವಿಕೆಟ್‌ಗೆ 297 ರನ್ ಕಲೆ ಹಾಕಿತು.

298 ರನ್‌ಗಳ ಗುರಿ ಬೆನ್ನಟ್ಟಿದ ನೇಪಾಳಿ ಬ್ಯಾಟ್ಸ್‌ಮನ್‌ಗಳು ಭಾರತದ ಬೌಲರ್‌ಗಳ ವಿರುದ್ಧ ಹೋರಾಟವನ್ನು ಮುಂದುವರೆಸಿದರು. ಮತ್ತು ಬ್ಯಾಟ್ಸ್‌ಮನ್‌ಗಳು ಸತತ ವಿಕೆಟ್‌ಗಳನ್ನು ನೀಡಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಲೇ ಇದ್ದರು. ಇದರಿಂದಾಗಿ ನೇಪಾಳ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 165 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ, ನೇಪಾಳ ಉತ್ತಮ ಆರಂಭ ಪಡೆದಿತ್ತು. ನೇಪಾಳದ ಆರಂಭಿಕರಾದ ದೀಪಕ್ ಬೋಹ್ರಾ ಮತ್ತು ಅರ್ಜಿನ್ ಕುಮಾಲ್ ಮೊದಲ ವಿಕೆಟ್‌ಗೆ 48 ರನ್ ಸೇರಿಸಿದರು, ಆದರೆ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಬೆಂಬಲ ಸಿಗಲಿಲ್ಲ. ನೇಪಾಳದ 7 ಬ್ಯಾಟ್ಸ್‌ಮನ್‌ಗಳು 77 ರನ್ ಸೇರಸಲಷ್ಟೇ ಶಕ್ತರಾದರು. ನೇಪಾಳದ ಆರು ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟಲು ಸಾಧ್ಯವಾಗಲಿಲ್ಲ.
ಭಾರತೀಯ ಬೌಲರ್‌ಗಳಾದ ಸೌಮಿ ಪಾಂಡೆ ಅತ್ಯಂತ ಯಶಸ್ವಿ ಬೌಲರ್. ಸೌಮಿ ಪಾಂಡೆ 10 ಓವರ್‌ಗಳಲ್ಲಿ 29 ರನ್ ನೀಡುವ ಮೂಲಕ 4 ವಿಕೆಟ್ ಪಡೆದರು. ಅರ್ಶಿನ್ ಕುಲಕರ್ಣಿ 2 ವಿಕೆಟ್ ಪಡೆದರು. ಇದಲ್ಲದೆ ರಾಜ್ ಲಿಂಬಾನಿ, ಆರಾಧ್ಯ ಶುಕ್ಲಾ ಮತ್ತು ಮುರುಗನ್ ಅಭಿಷೇಕ್ ತಲಾ 1 ವಿಕೆಟ್ ಕಬಳಿಸಿದರು.
ಅದೇ ಸಮಯದಲ್ಲಿ, ಈ ಗೆಲುವಿನ ನಂತರ ಉದಯ್ ಸಹರಾನ್ ನೇತೃತ್ವದ ಭಾರತ ತಂಡ ಸೆಮಿಫೈನಲ್ ತಲುಪಿದೆ. ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.