ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ದುಬೈ ಕ್ಯಾಪಿಟಲ್ಸ್

ಯುಎಇ ಕ್ರಿಕೆಟ್ ಮಂಡಳಿ ನೂತನ ಫ್ರಾಂಚೈಸಿ ಲೀಗ್ ಒಂದನ್ನು ಆರಂಭಿಸಲಿದ್ದು, ಇದಕ್ಕೆ ಇಂಟರ್‌ನ್ಯಾಷನಲ್ ಲೀಗ್ ಟಿ ಟ್ವೆಂಟಿ ಟೂರ್ನಮೆಂಟ್ ಎಂದು ನಾಮಕರಣ ಮಾಡಿದೆ. ಮುಂದಿನ ವರ್ಷಾರಂಭಕ್ಕೆ ಈ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಆರಂಭವಾಗಲಿದ್ದು, ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಂಡಗಳನ್ನು ಹೊಂದಿರುವ ಮಾಲೀಕರು ಈ ಟೂರ್ನಿಯಲ್ಲಿಯೂ ಸಹ ತಂಡಗಳನ್ನು ಖರೀದಿಸಿದ್ದಾರೆ.
ಈಗಾಗಲೇ ಮುಂಬೈ ಇಂಡಿಯನ್ಸ್ ಮಾಲೀಕರು ಇಲ್ಲಿ ಎಂಐ ಎಮಿರೇಟ್ಸ್ ತಂಡವನ್ನು ಖರೀದಿಸಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಮಾಲೀಕರು ಅಬುಧಾಬಿ ನೈಟ್ ರೈಡರ್ಸ್ ತಂಡವನ್ನು ಖರೀದಿಸಿದ್ದಾರೆ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕರು ಗಲ್ಫ್ ಜೈಂಟ್ಸ್ ತಂಡವನ್ನು ಖರೀದಿಸಿದ್ದಾರೆ. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕತ್ವವನ್ನು ಹೊಂದಿರುವ ಜಿಎಂಆರ್ ಗ್ರೂಪ್ ಈ ಇಂಟರ್‌ನ್ಯಾಷನಲ್ ಲೀಗ್ ಟಿ ಟ್ವೆಂಟಿಯಲ್ಲಿ ದುಬೈ ಕ್ಯಾಪಿಟಲ್ಸ್ ತಂಡವನ್ನು ಖರೀದಿಸಿದೆ.
ಈ ಹಿಂದೆಯೇ ಜಿಎಂಆರ್ ಗ್ರೂಪ್ ದುಬೈ ಕ್ಯಾಪಿಟಲ್ಸ್ ತಂಡವನ್ನು ಖರೀದಿಸಿದ್ದ ವಿಷಯ ಹೊರಬಿದ್ದು ಈ ತಂಡದ ಪರ ಆಡಲಿರುವ ಕೆಲ ಆಟಗಾರರ ಹೆಸರು ಬಹಿರಂಗವಾಗಿತ್ತು. ಇದೀಗ ಜಿಎಂಆರ್ ಗ್ರೂಪ್ ವೆಸ್ಟ್ ಇಂಡೀಸ್ ತಂಡದ ಪವರ್ ಹಿಟ್ಟರ್ ರೋವ್ಮನ್ ಪೊವೆಲ್ ಹಾಗೂ ಶ್ರೀಲಂಕಾ ವೈಟ್ ಬಾಲ್ ತಂಡದ ನಾಯಕ ದಸುನ್ ಶನಕ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದನ್ನು ಬಹಿರಂಗಪಡಿಸಿದೆ. ಈ ಮೂಲಕ ದುಬೈ ಕ್ಯಾಪಿಟಲ್ಸ್ ತಂಡದ 14 ಆಟಗಾರರ ಪಟ್ಟಿ ಹೊರ ಬಿದ್ದಿದ್ದು ಸಂಪೂರ್ಣ ತಂಡದ ವಿವರ ಈ ಕೆಳಕಂಡಂತಿದೆ.

ದುಬೈ ಕ್ಯಾಪಿಟಲ್ಸ್ ಸ್ಕ್ವಾಡ್
ರೋವ್ಮನ್ ಪೊವೆಲ್, ದುಷ್ಮಂತ ಚಮೀರಾ, ಹಜರತುಲ್ಲಾ ಝಜೈ, ಫ್ಯಾಬಿಯನ್ ಅಲೆನ್, ಮುಜೀಬ್ ಉರ್ ರೆಹಮಾನ್, ಸಿಕಂದರ್ ರಜಾ, ನಿರೋಶನ್ ಡಿಕ್ವೆಲ್ಲಾ, ದಾಸುನ್ ಶನಕ, ಭಾನುಕಾ ರಾಜಪಕ್ಸೆ, ಡಾನ್ ಲಾರೆನ್ಸ್, ಬ್ಲೆಸ್ಸಿಂಗ್ ಮುಜರಬಾನಿ, ಇಸುರು ಉದಾನ, ಜಾರ್ಜ್ ಮುನ್ಸೆ, ಫ್ರೆಡ್ ಕ್ಲಾಸೆನ್

ತಂಡದ ಬಗ್ಗೆ ಜಿಎಂಆರ್ ಗ್ರೂಪ್ ಹೇಳಿದ್ದಿಷ್ಟು
ಈ ಇಂಟರ್ ನ್ಯಾಶನಲ್ ಲೀಗ್ ಟಿ ಟ್ವೆಂಟಿ ಟೂರ್ನಿಯಲ್ಲಿ ತಂಡವನ್ನು ಘೋಷಿಸಿರುವುದರ ಕುರಿತಾಗಿ ಮಾತನಾಡಿದ ಜಿಎಂಆರ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕಿರಣ್ ಕುಮಾರ್ ಗಾಂಧಿ ಟಿ ಟ್ವೆಂಟಿ ಕ್ರಿಕೆಟ್‌ನ ಅತ್ಯದ್ಭುತ ವೇದಿಕೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 15 ವರ್ಷಗಳಿಂದ ಭಾಗವಾಗಿರುವ ನಾವು ವಿಶ್ವದ ವಿವಿಧ ಫ್ರಾಂಚೈಸಿ ಲೀಗ್‌ಗಳಲ್ಲಿ ನಮ್ಮ ಫ್ರಾಂಚೈಸಿಯನ್ನು ವಿಸ್ತರಿಸಲು ಇದು ಸರಿಯಾದ ಸಮಯವೆಂದು ಭಾವಿಸುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಟಿ ಟ್ವೆಂಟಿ ಲೀಗ್ ಮುಂದಿನ ವರ್ಷದ ಜನವರಿ 6ರಂದು ಆರಂಭವಾಗಲಿದ್ದು, ಫೆಬ್ರವರಿ 12ಕ್ಕೆ ಮುಕ್ತಾಯಗೊಳ್ಳಲಿದೆ.

ಎಂ ಐ ಎಮಿರೇಟ್ಸ್ ಹಾಗೂ ಅಬುಧಾಬಿ ನೈಟ್ ರೈಡರ್ಸ್ ತಂಡಗಳು ಹೀಗಿವೆ
ದುಬೈ ಕ್ಯಾಪಿಟಲ್ಸ್ ತಂಡಕ್ಕೂ ಮುನ್ನ ಘೋಷಣೆಯಾಗಿದ್ದ ಎಂಐ ಎಮಿರೇಟ್ಸ್ ಹಾಗೂ ಅಬುಧಾಬಿ ನೈಟ್ ರೈಡರ್ಸ್ ಸ್ಕ್ವ್ಯಾಡ್ ಈ ಕೆಳಕಂಡಂತಿದೆ.
ಎಂಐ ಎಮಿರೇಟ್ಸ್: ಕಿರಾನ್ ಪೊಲಾರ್ಡ್, ಡ್ವೇನ್ ಬ್ರಾವೋ, ನಿಕೋಲಸ್ ಪೂರನ್, ಟ್ರೆಂಟ್ ಬೌಲ್ಟ್, ಆಂಡ್ರೆ ಫ್ಲೆಚರ್, ಇಮ್ರಾನ್ ತಾಹಿರ್, ಸಮಿತ್ ಪಟೇಲ್, ವಿಲ್ ಸ್ಮೀಡ್, ಜೋರ್ಡಾನ್ ಥಾಂಪ್ಸನ್, ನಜಿಬುಲ್ಲಾ ಜದ್ರಾನ್, ಜಹೀರ್ ಖಾನ್, ಫಜಲ್ಹಕ್ ಫಾರೂಕಿ, ಬ್ರಾಡ್ಲಿ ವೀಲ್, ಬಾಸ್ ಡಿ ಲೀಡೆ
ಅಬುದಾಭಿ ನೈಟ್ ರೈಡರ್ಸ್: ಸುನಿಲ್ ನರೈನ್, ಆಂಡ್ರೆ ರಸೆಲ್, ಅಕೇಲ್ ಹೊಸೈನ್, ರೇಮನ್ ರೈಫರ್, ಕೆನ್ನಾರ್ ಲೂಯಿಸ್, ರವಿ ರಾಂಪಾಲ್ ( ವೆಸ್ಟ್ ಇಂಡೀಸ್), ಜಾನಿ ಬೈರ್‌ಸ್ಟೋ (ಇಂಗ್ಲೆಂಡ್), ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್), ಲಹಿರು ಕುಮಾರ, ಚರಿತ್ ಅಸಲಂಕಾ, ಸೀಕ್ಕುಗೆ ಪ್ರಸನ್ನ (ಶ್ರೀಲಂಕಾದ ಮೂವರು) , ಕಾಲಿನ್ ಇಂಗ್ರಾಮ್ (ದಕ್ಷಿಣ ಆಫ್ರಿಕಾ), ಅಲಿ ಖಾನ್ (ಯುಎಸ್ಎ), ಬ್ರಾಂಡನ್ ಗ್ಲೋವರ್ (ನೆದರ್ಲ್ಯಾಂಡ್ಸ್).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications