ಫಿಕ್ಸಿಂಗ್ ಆರೋಪಿ ಸಂಜೀವ್ ಕುಮಾರ್ ವಶಕ್ಕೆ ಯುಕೆ ಕೋರ್ಟ್ ತೀರ್ಪು

ಲಂಡನ್, ಜನವರಿ 7: ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹ್ಯಾನ್ಸಿ ಕ್ರೊನಿಯೆ ಅವರ ಜೊತೆ ಸೇರಿ 2000ನೇ ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಆರೋಪಿಸಲಾಗಿರುವ ಸಂಜೀವ್ ಕುಮಾರ್ ಚಾವ್ಲಾ ಅವರನ್ನು ವಶಪಡಿಸಿಕೊಳ್ಳುವಂತೆ ಯುಕೆ ಕೋರ್ಟ್ ತೀರ್ಪು ನೀಡಿದೆ. ದೂರನ್ನು ಯುಕೆ ಗೃಹಕಾರ್ಯದರ್ಶಿಗೆ ರವಾನಿಸಲಾಗಿದೆ.
2002ರಲ್ಲಿ ವಿಮಾನ ಅಪಘಾತದಲ್ಲಿ ಮೃತರಾಗಿರುವ ಕ್ರೊನಿಯೆ ಅವರ ಜೊತೆ ಸೇರಿ 2000 ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಂಜೀವ್ ಪಾಲ್ಗೊಂಡಿದ್ದರು ಎಂದು ಆರೋಪಿಸಲಾಗಿತ್ತು. ಭಾರತದಿಂದ ಇಂಗ್ಲೆಂಡ್‌ಗೆ 1996ರಲ್ಲೇ ತೆರಳಿ ವಾಸವಿದ್ದ ಸಂಜೀವ್ ಅವರನ್ನು ಜೂನ್ 2016ರಂದು ಲಂಡನ್‌ನಲ್ಲಿ ಇದೇ ಪ್ರಕರಣದಡಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು.
ಫಿಕ್ಸಿಂಗ್ ಕೇಸ್ ನ ಇನ್ನೊಬ್ಬ ಆರೋಪಿ ಮನಮೋಹನ್ ಕುಮಾರ್ ಖಟ್ಟರ್ ಗೆ ಸಿಬಿಐ ಮೂಲಕ ರೆಡ್ ನೋಟಿಸ್ ನೀಡಲಾಗಿತ್ತು. 2000ನೇ ಇಸವಿಯ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ನಡೆದ ಕ್ರಿಕೆಟ್ ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿದ್ದು, ಹ್ಯಾನ್ಸಿ ಕ್ರೋನಿಯೆ ಜೊತೆ ಸಂಜೀವ್ ಕುಮಾರ್ ಚಾವ್ಲಾ ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications