Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾ ಆಟಗಾರರಿಗೆ ಸಿಹಿಸುದ್ದಿ ಕೊಟ್ಟ ಇಂಗ್ಲೆಂಡ್

 UK Govt accepts BCCI request to allow family members of India cricketers during the England tour

ಜೂನ್ 18ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದೆ ಹಾಗೂ ಈ ಪಂದ್ಯ ಮುಗಿದ ನಂತರ ಟೀಮ್ ಇಂಡಿಯಾ ತಂಡ ಇಂಗ್ಲೆಂಡ್‌ನಲ್ಲಿಯೇ ಬೀಡುಬಿಡಲಿದ್ದು ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

ಹೀಗಾಗಿ ಜೂನ್ 3ರಂದೇ ಚಾರ್ಟರ್ಡ್ ವಿಮಾನದ ಮೂಲಕ ಟೀಮ್ ಇಂಡಿಯಾ ತಂಡ ಇಂಗ್ಲೆಂಡ್ ತಲುಪಲಿದೆ. ಕಳೆದ ಎರಡು ಮೂರು ವಾರಗಳಿಂದ ಮುಂಬೈನ ಹೊಟೇಲ್ ಒಂದರಲ್ಲಿ ಟೀಮ್ ಇಂಡಿಯಾ ಸದಸ್ಯರು ಕ್ವಾರಂಟೈನ್‌ಗೆ ಒಳಗಾಗಿದ್ದು ಭಾರತೀಯ ವನಿತೆಯರು ಕೂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದರಿಂದ ವನಿತೆಯರ ತಂಡವೂ ಕ್ವಾರಂಟೈನ್‌ ನಿಯಮವನ್ನು ಅನುಸರಿಸುತ್ತಿದೆ.

ಜೂನ್ 3ರಂದು ಭಾರತೀಯ ಪುರುಷ ಮತ್ತು ಮಹಿಳೆಯರ ತಂಡಗಳೆರಡೂ ಒಂದೇ ವಿಮಾನದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಬ್ರಿಟನ್ ಸರ್ಕಾರ ಖುಷಿಯ ವಿಚಾರವೊಂದನ್ನು ತಿಳಿಸಿದೆ. ಹೌದು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಪುರುಷ ಮತ್ತು ಮಹಿಳೆಯರ ತಂಡದ ಜೊತೆ ಸಿಬ್ಬಂದಿ ವರ್ಗ ಹಾಗೂ ಕುಟುಂಬಸ್ಥರು ಕೂಡ ಪ್ರಯಾಣ ಬೆಳೆಸಬಹುದು ಎಂದು ಬ್ರಿಟನ್ ಸರ್ಕಾರ ಅನುಮತಿ ನೀಡಿದೆ. ಆಟಗಾರರ ಜೊತೆ ಸಿಬ್ಬಂದಿವರ್ಗ ಮತ್ತು ಕುಟುಂಬಸ್ಥರು ಜೂನ್ 3ರಂದು ಇಂಗ್ಲೆಂಡ್ ತಲುಪಿದ ನಂತರ ಆಟಗಾರರ ರೀತಿಯೇ ಅವರು ಕೂಡ ಕ್ವಾರಂಟೈನ್ ನಿಯಮವನ್ನು ಅನುಸರಿಸಬೇಕಿದೆ.

Story first published: Tuesday, June 1, 2021, 19:49 [IST]
Other articles published on Jun 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+