For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾವನ್ನು ಅದರ ನೆಲದಲ್ಲೇ ಸೋಲಿಸುವುದು ಗುರಿ: ಆಸಿಸ್ ಕೋಚ್

Ultimate Goal Is To Beat India In Their Backyard-Justin Langer

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮರಳಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. ಕ್ರಿಕೆಟನ್ನು ಹಲವು ವರ್ಷಗಳ ಕಾಲ ಅಕ್ಷರಶಃ ಆಳಿದ್ದ ಆಸಿಸ್ ಇತ್ತೀಚೆಗೆ ಮಂಕಾಗಿತ್ತು. ಆದರೆ ಈಗ ಮತ್ತೆ ತನ್ನ ಹಳೇ ಲಯಕ್ಕೆ ಬಂದಂತೆ ಕಂಡು ಬರುತ್ತಿದೆ. ಟೆಸ್ಟ್ ಮಾತ್ರವಲ್ಲ ಟಿ20ಯಲ್ಲೂ ಆಸಿಸ್ ತಂಡ ಮೊದಲ ಸ್ಥಾನಕ್ಕೇರಿದೆ.

ಈ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್. ಈ ಶ್ರೇಯಾಂಕ ಎಷ್ಟು ಅಸ್ಥಿರ ಎಂಬುದರ ಅರಿವು ನಮಗಿದೆ, ಆದರೆ ಈ ಸಂದರ್ಭದಲ್ಲಿ ಇದು ನಿಜಕ್ಕೂ ಖುಷಿ ನೀಡುವ ಸುದ್ಧಿಯಾಗಿದ ಎಂದು ಅವರು ಹೇಳಿದರು. ಇದರ ಜೊತೆಗೆ ಆಸ್ಟ್ರೇಲಿಯಾ ತಂಡದ ಬಹು ದೊಡ್ಡ ಗುರಿಯೊಂದನ್ನೂ ಅವರು ಬಿಚ್ಚಿಟ್ಟಿದ್ದಾರೆ.

ಸಹಜವಾಗಿ ನಮ್ಮ ಗುರಿ ಟೆಸ್ಟ್ ಚಾಂಪಿಯನ್‌ಷಿಪ್ ಮೇಲೆ ಇದೆ. ಆದರೆ ಭಾರತ ತಂಡವನ್ನು ಮಣಿಸುವುದು ನಮ್ಮ ಬಹುದೊಡ್ಡ ಗುರಿಯಾಗಿದೆ. ಭಾರತವನ್ನು ಭಾರತದ ನೆಲದಲ್ಲಿ ಮಣಿಸುವುದು ನಮ್ಮ ಬಹುದೊಡ್ಡ ಗುರಿಯಾಗಿದೆ. ಭಾರತ ಆಸ್ಟ್ರೇಲಿಯಾಗೆ ಬಂದಾಗ ಇಲ್ಲೂ ಅವರನ್ನು ಸೋಲಿಸಬೇಕಿದೆ ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ನಮ್ಮನ್ನ ನಾವು ಎಷ್ಟು ಬಲಿಷ್ಠರು ಎಂದು ಪರೀಕ್ಷಿಸಿಕೊಳ್ಳಬೇಕಾದರೆ ನಾವು ಬಲಿಷ್ಠರೊಂದಿಗೆ ಕಾದಾಡಬೇಕು ಅವರನ್ನು ಮಣಿಸಬೇಕು. ನಮಗೆ ಬಲಿಷ್ಠವಾದ ಎದುರಾಳಿಗಳು ಇದ್ದಾರೆ ಎಂದು ತಮ್ಮ ಮುಂದಿರುವ ಆದ್ಯತೆಗಳ ಬಗ್ಗೆ ಆಸ್ಟ್ರೇಲಿಯಾದ ಕೋಚ್ ಜಸ್ಟಿಮ್ ಲ್ಯಾಂಗರ್ ಹೇಳಿಕೊಂಡರು.

ಇದೇ ಸಂದರ್ಭದಲ್ಲಿ ಜಸ್ಟಿನ್ ಲ್ಯಾಂಗರ್ ಟಿ20 ಕ್ರಿಕೆಟ್ ಬಗ್ಗೆಯೂ ಮಾತನಾಡಿದರು, ಅರೋನ್ ಫಿಂಚ್ ನೇತೃತ್ವದ ಟಿ20 ತಂಡ ಮುಂದಿನ ವಿಶ್ವಕಪ್‌ನಲ್ಲಿ ಗೆಲುವನ್ನು ಸಾಧಿಸಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Story first published: Friday, May 1, 2020, 21:19 [IST]
Other articles published on May 1, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+