Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ ತಂಡಕ್ಕೆ ಮತ್ತಿಬ್ಬರು ಮಾಜಿ ಕ್ರಿಕೆಟರ್‌ಗಳು ಕೋಚ್‌ಗಳಾಗಿ ನೇಮಕ

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಲೀಗ್ ಹಂತದಲ್ಲಿ ನಿರ್ಗಮಿಸಿದ ಬಳಿಕ ತಂಡದ ಮ್ಯಾನೇಜ್‌ಮೆಂಟ್‌ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಆಯ್ಕೆ ಮಂಡಳಿಯಿಂದ ಹಿಡಿದು ಕೋಚ್, ನಾಯಕತ್ವ ಎಲ್ಲವೂ ಬದಲಾವಣೆಗಳಾಗಿದೆ. ಇದೀಗ ಪಾಕಿಸ್ತಾನ ತಂಡಕ್ಕೆ ಇಬ್ಬರು ಮಾಜಿ ಬೌಲರ್‌ಗಳನ್ನು ಬೌಲಿಂಗ್ ವಿಭಾಗದ ಕೋಚ್‌ಗಳನ್ನಾಡಿ ನೇಮಿಸಿಕೊಳ್ಳಲಾಗಿದೆ.

ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಉಮರ್ ಗುಲ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವೇಗದ ಬೌಲಿಂಗ್ ಕೋಚ್ ಆಗಿ ನೇಮಿಸಿದ್ದು ಸಯೀದ್ ಅಜ್ಮಲ್ ಅವರನ್ನು ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ. ಮುಂದಿನ ಡಿಸೆಂಬರ್ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಈ ಇಬ್ಬರು ಪಾಕಿಸ್ತಾನ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಪಿಸಿಬಿ ಮಾಹಿತಿ ನೀಡಿದೆ.

Umar Gul and Saeed Ajmal joined Pakistan team as bowling coaches

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆಯುವಲ್ಲಿಯೂ ವಿಫಲವಾದ ಬಳಿಕ ಕೋಚಿಂಗ್ ಸೆಟಪ್ ಹಾಗೂ ನಾಯಕತ್ವ ವಿಭಾಗದಲ್ಲಿ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ. ನಾಯಕನಾಗಿದ್ದ ಬಾಬರ್ ಅಜಂ ಎಲ್ಲಾ ಮಾದರಿಯಲ್ಲಿಯೂ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಾರೆ. ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕನನ್ನಾಗಿ ಹಾಗೂ ಶಾಹೀನ್ ಶಾ ಅಫ್ರಿದಿ ಅವರನ್ನು ಟಿ20 ನಾಯಕನನ್ನಾಗಿ ನೇಮಕಗೊಳಿಸಿದೆ.

ಇನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ದೇಶಕನನ್ನಾಗಿ ಹೆಸರಿಸಲಾಗಿದೆ. ಇನ್ನು ಮಾಜಿ ವೇಗದ ಬೌಲರ್ ವಹಾಬ್ ರಿಯಾಜ್ ಅವರು ಇನ್ಜಮಾಮ್ ಉಲ್ ಹಕ್ ಅವರಿಂದ ತೆರವಾಗಿದ್ದ ಆಯ್ಕೆ ಮಂಡಳಿಯ ಮುಖ್ಯಸ್ಥ ಸ್ಥಾನಕ್ಕೆ ನೇಮಕವಾಗಿದ್ದಾರೆ. ಇನ್ಜಮಾಮ್ ಉಲ್ ಹಕ್ ವಿರುದ್ಧ ಆಯ್ಕೆಯಲ್ಲಿ ಪಕ್ಷಪಾತದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇನ್ನು ಉಮರ್ ಗುಲ್‌ಗೆ ಇದು ಬೌಲಿಂಗ್ ಕೋಚ್ ಆಗಿ ಎರಡನೇ ಅವಕಾಶವಾಗಿದೆ. ಟಿ20 ವಿಶ್ವಕಪ್ ವಿಜೇತ ಬೌಲರ್ ಆಗಿರುವ ಗುಲ್ ಮಾರ್ಚ್ 2023 ರಲ್ಲಿ ಯುಎಇನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಟಿ20I ಸರಣಿಯ ಸಂದರ್ಭದಲ್ಲಿ ಮತ್ತು ಬಳಿಕ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧದ ಸರಣಕಿಯಲ್ಲಿಯೂ ಕರ್ಯವ್ಯ ನಿರ್ವಹಿಸಿದ್ದರು. ಇನ್ನು ಗುಲ್ ಅಫ್ಘಾನಿಸ್ತಾನ ಕ್ರಿಕೆಟ್ ತಂಡದಲ್ಲಿ ಪರವಾಗಿ 2021ರ ಟಿ20 ವಿಶ್ವಕಪ್‌ನಲ್ಲಿ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಮಾಜಿ ವಿಶ್ವ ನಂ. 1 ಏಕದಿನ ಬೌಲರ್ ಸಯೀದ್ ಅಜ್ಮಲ್ ಸ್ಪಿನ್ ಬೌಲಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಯೀದ್, 35 ಟೆಸ್ಟ್‌ಗಳು, 113 ಏಕದಿನ ಪಂದ್ಯ ಮತ್ತು 64 ಟಿ20ಐ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರು ಮಾದರಿಯಲ್ಲಿ 447 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Tuesday, November 21, 2023, 15:46 [IST]
Other articles published on Nov 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+