ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಆ ಆಟಗಾರನೇ ನಿರ್ಣಾಯಕ ಎಂದ ಉಮರ್ ಗುಲ್

ಒಂದೆಡೆ ಏಷ್ಯಾ ಕಪ್ ನಡೆಯುತ್ತಿದ್ದರೆ ಮತ್ತೊಂದೆಡೆ ಟಿ20 ವಿಶ್ವಕಪ್ ವಿಚಾರವಾಗಿಯೂ ಸಾಕಷ್ಟು ಕುತೂಹಲಗಳು ಗರಿಗೆದರುತ್ತಿವೆ. ಈ ಪ್ರತಿಷ್ಠಿತ ಟೂರ್ನಿಗೆ ಕೆಲ ತಂಡಗಳು ಈಗಾಗಲೇ ತಮ್ಮ ತಂಡವನ್ನು ಪ್ರಕಟಿಸುತ್ತಿದ್ದು ಟೂರ್ನಿಗೆ ಸಜ್ಜಾಗುತ್ತಿದೆ. ಏಷ್ಯಾದ ರಾಷ್ಟ್ರಗಳು ಏಷ್ಯಾ ಕಪ್ ಟೂರ್ನಿಯ ಮೂಲಕ ಈ ಟೂರ್ನಿಗೆ ಉತ್ತಮ ತಯಾರಿಯನ್ನೂ ನಡೆಸುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಉಮರ್ ಗುಲ್ ಪ್ರತಿಕ್ರಿಯಿಸಿದ್ದು ಪಾಕ್ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ನಿರ್ಣಾಯಕ ಪಾತ್ರವಹಿಸುವ ಓರ್ವ ಆಟಗಾರನನ್ನು ಹೆಸರಿಸಿದ್ದಾರೆ.
ಕಳೆದ ಶ್ರೀಲಂಕಾ ವಿರುದ್ಧದ ಸರಣಿಯ ಸಂದರ್ಭದಲ್ಲಿ ಗಾಯಗೊಂಡಿರುವ ಪಾಕಿಸ್ತಾನದ ಯುವ ವೇಗಿ ಶಾಹಿನ್ ಶಾ ಅಫ್ರಿದಿ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಿಂದ ಅನಿವಾರ್ಯವಾಗಿ ಹೊರಗುಳಿದಿದ್ದಾರೆ. ಆದರೆ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಪಾಖಿಸ್ತಾನ ತಂಡಕ್ಕೆ ಈ ಆಟಗಾರನೇ ನಿರ್ಣಾಯಕವಾಗಲಿದ್ದಾರೆ ಎಂದಿದ್ದಾರೆ ಉಮರ್ ಗುಲ್.

ಪಾಕ್ ಮ್ಯಾನೇಜ್‌ಮೆಂಟ್‌ಗೆ ಉಮರ್ ಗುಲ್ ಸಲಹೆ
ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಉಮರ್ ಗುಲ್ ತಂಡದ ಮ್ಯಾನೇಜ್‌ಮೆಂಟ್‌ಗೆ ವೇಗಿಗಳ ಬಗ್ಗೆ ಸಲಹೆಯೊಂದನ್ನು ನೀಡಿದ್ದಾರೆ. ಪಾಕಿಸ್ತಾನ ತಂಡ ತನ್ನ ವೇಗದ ಬೌಲರ್‌ಗಳನ್ನು ಉತ್ತಮವಾಗಿ ನೋಡಿಕೊಳ್ಳಬೇಕಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಗುಲ್ ಮುಂದಿನ ವಿಶ್ವಕಪ್ ವೇಳೆಗೆ ಶಾಹೀನ್ ಶಾ ಅಫ್ರಿದಿ ಸಂಪೂರ್ಣವಾಗಿ ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಉತ್ತಮ ವೇಗಿಗಳನ್ನು ಹೊಂದಿದೆ ಪಾಕ್
"ಪಾಕಿಸ್ತಾನ ತಂಡ ಉತ್ತಮವಾದ ವೇಗಿಗಳನ್ನು ಹೊಂದಿದೆ. ತಂಡದ ಬೆಂಚ್ ಸಾಮರ್ಥ್ಯ ಕೂಡ ಉತ್ತಮವಾಗಿದ್ದು ಆಟಗಾರರು ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳಬೇಕಿದೆ. ಮುಂದಿನ ಟಿ20 ವಿಶ್ವಕಪ್‌ನಲ್ಲಿ ಶಾಹೀನ್ ಶಾ ಅಫ್ರಿದಿ ಪ್ರಮುಖ ಪಾತ್ರವಹಿಸಲಿದ್ದು ಆ ಟೂರ್ನಿಗೂ ಮುನ್ನ ಅವರು ಸಂಪೂರ್ಣವಾಗಿ ಫಿಟ್ ಆಗಬೇಕಿದೆ. ಶಾಹೀನ್ ಅಫ್ರಿದಿಗೆ ಒತ್ತಡ ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ ಅವರು ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಹಸನ್ ಅಲಿ ತಂಡದ ಒಳಗೆ ಹೊರಗೆ ಬರುತ್ತಿದ್ದು ಅವರ ಫಾರ್ಮ್ ಈ ಮೊದಲು ಇದ್ದಂತಿಲ್ಲ. ಅವರು ಕೂಡ ಈ ಮುನ್ನ ತುಂಬಾ ಉತ್ತಮ ಪ್ರದರ್ಶಣ ನೀಡಿದ್ದಾರೆ" ಎಂದಿದ್ದಾರೆ ಉಮರ್ ಗುಲ್.

ಭಾರತದ ವಿರುದ್ಧ ಸೋಲು ಅನುಭವಿಸಿರುವ ಪಾಕಿಸ್ತಾನ
ಈ ಬಾರಿಯ ಏಷ್ಯಾ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನ ತಂಡ ಹಿನ್ನಡೆ ಅನುಭವಿಸಿದೆ. ಭಾರತದ ವಿರುದ್ಧ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ ಪೈಪೋಟಿಯ ಪ್ರದರ್ಶನ ನೀಡಿತಾದರೂ ಗೆಲುವು ಸಾಧ್ಯವಾಗಲಿಲ್ಲ. ಭಾರತ 5 ವಿಕೆಟ್‌ಗಳ ಅಂತರದಿಂದ ಪಾಕ್‌ಗೆ ಸೋಲಿನ ರುಚಿ ತೋರಿಸಿದೆ. ಇದೀಗ ಪಾಕಿಸ್ತಾನ ಶುಕ್ರವಾರ ಹಾಂಕಾಂಗ್ ವಿರುದ್ಧ ನಿರ್ಣಾಯಕ ಪಂದ್ಯವನ್ನಾಡಲಿದ್ದು ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮಾತ್ರವೇ ಸೂಪರ್ 4 ಹಂತಕ್ಕೇರಲು ಅರ್ಹತೆ ಪಡೆಯಲಿದೆ. ಹಾಗಾದಲ್ಲಿ ಮುಂದಿನ ಭಾನುವಾರ ಪಾಕಿಸ್ತಾನ ತಂಡಕ್ಕೆ ಮತ್ತೆ ಭಾರತ ಎದುರಾಳಿಯಾಗಿರಲಿದ್ದು ಅಭಿಮಾನಿಗಳು ಮತ್ತೊಂದು ರೋಚಕ ಕದನಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಪಾಕಿಸ್ತಾನ ಸ್ಕ್ವಾಡ್ ಹೀಗಿದೆ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾನವಾಜ್ ದಹಾನಿ, ಉಸ್ಮಾನ್ ಖಾದಿರ್, ಹಸನ್ ಅಲಿ, ಮೊಹಮ್ಮದ್ ಹಸನೈನ್, ಹೈದರ್ ಅಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications