Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್‌ಗೆ ಹೆಣ್ಣುಮಗು ಜನನ

Umesh Yadav has been blessed with a baby girl

ನವದೆಹಲಿ: ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್‌ಗೆ ಹೆಣ್ಣು ಮಗು ಜನಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಯಾದವ್ ಇತ್ತೀಚೆಗಷ್ಟೇ ಭಾರತಕ್ಕೆ ವಾಪಸ್ಸಾಗಿದ್ದರು. ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಪಂದ್ಯವನ್ನಾಡಿದ್ದ ಯಾದವ್ ಆ ಬಳಿಕ ಗಾಯಗೊಂಡು ಸರಣಿಯಿಂದ ಹೊರ ಬಿದ್ದಿದ್ದರು.

ತನಗೆ ಹೆಣ್ಣುಮಗು ಜನಿಸಿರುವುದನ್ನು ಉಮೇಶ್ ಯಾದವ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. 'ಇದು ಹೆಣ್ಣುಮಗು' ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಮಗುವಿನ ಚಿತ್ರದಲ್ಲಿ, 'ಪುಟಾಣಿ ರಾಜಕುಮಾರಿಗೆ ಜಗತ್ತಿಗೆ ಸ್ವಾಗತ' ಎಂದು ಬರೆಯಲಾಗಿದೆ. ಮಗು ಜನಿಸಿದ್ದ ದಿನಾಂಕ ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ ಟ್ವಿಟರ್ ಪೋಸ್ಟ್‌ ಗಮನಿಸಿದರೆ, ಜನವರಿ 1ರ ಹೊಸ ವರ್ಷದಂದು ಜನಿಸಿದಂತಿದೆ.

ಮೆಲ್ಬರ್ನ್ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 4ನೇ ಓವರ್‌ ಎಸೆಯುತ್ತಿದ್ದಾಗ ಉಮೇಶ್ ಕಾಲಿನ ಹಿಂಭಾಗದ ಸ್ನಾಯುಗಳು (ಕಾಫ್‌ ಮಸಲ್) ನೋವಿಗೀಡಾಗಿತ್ತು. ಹೀಗಾಗಿ 3.3 ಓವರ್‌ ಎಸೆದಿದ್ದ ಯಾದವ್ ಮೈದಾನದಿಂದ ಹೊರ ನಡೆದಿದ್ದರು. ಆ ಬಳಿಕ ಮೊಹಮ್ಮದ್ ಸಿರಾಜ್, ಉಮೇಶ್ ಓವರ್‌ ಪೂರ್ಣಗೊಳಿಸಿದ್ದರು.

ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ಯಾದವ್ ಬದಲಿಗೆ ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡದಲ್ಲಿ ಒಂದೋ ವೇಗಿ ಶಾರ್ದೂಲ್ ಅಥವಾ ಟಿ ನಟರಾಜನ್ ಆಡುವ ನಿರೀಕ್ಷೆಯಿದೆ. ತೃತೀಯ ಟೆಸ್ಟ್ ಜನವರಿ 7ಕ್ಕೆ ಸಿಡ್ನಿಯಲ್ಲಿ ಆರಂಭಗೊಳ್ಳಲಿದೆ. ಯಾದವ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ.

Story first published: Friday, January 1, 2021, 14:25 [IST]
Other articles published on Jan 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+