Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ವೇಗಿ ಉಮೇಶ್ ಯಾದವ್ ಹೊರಕ್ಕೆ

Umesh Yadav has been ruled out of the Test Series against Australia

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಭಾರತದ ವೇಗಿ ಉಮೇಶ್ ಯಾದವ್ ಹೊರ ಬಿದ್ದಿದ್ದಾರೆ. ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ವೇಳೆ ಯಾದವ್ ಕಾಲಿನ ಗಾಯಕ್ಕೀಡಾಗಿದ್ದರು. ಆವತ್ತು ಯಾದವ್ ಪಂದ್ಯದ ಅರ್ಧದಲ್ಲೇ ಮೈದಾನದಿಂದ ಹೊರ ನಡೆದಿದ್ದರು.

ಕಾಲಿನ ಹಿಂಭಾಗದ ಸ್ನಾಯು ನೋವಿಗೆ (ಕಾಫ್‌ ಪೇನ್) ತುತ್ತಾಗಿದ್ದ ಉಮೇಶ್ ಯಾದವ್ ದ್ವಿತೀಯ ಟೆಸ್ಟ್‌ನ 4ನೇ ಓವರ್‌ (3.3 ಓವರ್‌ಗೆ ಎಸೆದಿದ್ದರು) ಅರ್ಧಕ್ಕೆ ನಿಲ್ಲಿಸಿ ಮೈದಾನದಿಂದ ಹೊರ ನಡೆದಿದ್ದರು. ಯಾದವ್ ಓವರ್‌ ಅನ್ನು ವೇಗಿ ಮೊಹಮ್ಮದ್ ಸಿರಾಜ್ ಪೂರ್ಣಗೊಳಿಸಿದ್ದರು.

ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಜನವರಿ 7ರಂದು ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಉಮೇಶ್ ಯಾದವ್ ಬದಲಿಗೆ ವೇಗಿ ಟಿ ನಟರಾಜನ್ ಅವರನ್ನು ಭಾರತ ತಂಡದಲ್ಲಿ ಹೆಸರಿಸಲಾಗಿದೆ. ನಟರಾಜನ್ ಈ ಪಂದ್ಯದ ಮೂಲಕ ಟೆಸ್ಟ್‌ಗೆ ಪಾದಾರ್ಪಣೆ ಮಾಡುವುದನ್ನು ನಿರೀಕ್ಷಿಸಲಾಗಿದೆ.

ಆಸೀಸ್ ಟೆಸ್ಟ್ ಸರಣಿಯಿಂದ ಹೊರ ಬಿದ್ದಿರುವುದರಿಂದ ಉಮೇಶ್ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಈಗಾಗಲೇ ನಡೆದಿದರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ಜಯ ಗಳಿಸಿದ್ದರೆ, ಮತ್ತೊಂದರಲ್ಲಿ ಪ್ರವಾಸಿ ಭಾರತ 8 ವಿಕೆಟ್ ಗೆಲುವು ಸಾಧಿಸಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯೀಗ 1-1ರಿಂದ ಸಮಬಲಗೊಂಡಿದೆ.

Story first published: Thursday, December 31, 2020, 12:11 [IST]
Other articles published on Dec 31, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+