
ವಯನಾಡ್, ಜನವರಿ 25: ಕೇರಳದ ವಯನಾಡ್‌ನ ಕೃಷ್ಣನಗರಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕೇರಳವನ್ನು 11 ರನ್‌ನಿಂದ ಸೋಲಿಸಿದ ವಿದರ್ಭ ತಂಡ ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ವಿದರ್ಭ ವೇಗಿ ಉಮೇಶ್ ಯಾದವ್ ಅದ್ಭುತ ಬೌಲಿಂಗ್ ಬೆಂಬಲದಿಂದ ತಂಡ ರೋಚಕ ಗೆಲುವು ದಾಖಲಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೇರಳ, ಮೊದಲ ಇನ್ನಿಂಗ್ಸ್‌ನಲ್ಲಿ 28.4 ಓವರ್‌ಗೆ 106 ರನ್ ಬಾರಿಸಿತು. ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ನಾಯಕ ಫೈಝ್ ಫಝಲ್ 75 ರನ್ ಸೇರಿಸಿದ್ದರಿಂದ 52.4 ಓವರ್‌ಗಳಲ್ಲಿ 208 ಪೇರಿಸುವುದರೊಂದಿಗೆ ಮುನ್ನಡೆ ಸಾಧಿಸಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕೇರಳ ದುರ್ಬಲ ಬ್ಯಾಟಿಂಗ್ ಪ್ರದರ್ಶಿಸಿತು. ಅರುಣ್ ಕಾರ್ತಿಕ್ 36 ರನ್ ಬೆಂಬಲದೊಂದಿಗೆ ಸಚಿನ್ ಬೇಬಿ ನಾಯಕತ್ವದ ಕೇರಳ 24.5 ಓವರ್‌ಗೆ 91 ರನ್ ಕಲೆ ಹಾಕಲಷ್ಟೇ ಶಕ್ತವಾಯ್ತು.
ಹೀಗಾಗಿ ವಿದರ್ಭ ಒಂದು ಇನ್ನಿಂಗ್ಸ್ ಆಡದೆಯೇ ಗೆಲುವನ್ನಾಚರಿಸಿತು.
ವಿದರ್ಭ ಗೆಲುವಿಗೆ ಮುಖ್ಯ ಕಾರಣ ಉಮೇಶ್ ಯಾದವ್. ಎರಡೂ ಇನ್ನಿಂಗ್ಸ್ ಗಳು ಸೇರಿ ಒಟ್ಟು 79 ರನ್ನಿಗೆ 12 ವಿಕೆಟ್‌ಗಳನ್ನು ಉಮೇಶ್ ಕಬಳಿಸಿದ್ದರು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು. ಅಂದ್ಹಾಗೆ ಕೇರಳ ತಂಡ ಸೆಮಿಫೈನಲ್‌ಗೆ ಇದೇ ಮೊದಲಬಾರಿ ಪ್ರವೇಶಿಸಿತ್ತು.