ODI World Cup 2023: ಅಂಪೈರ್ & ರೆಫರಿ ಪಟ್ಟಿ ರಿಲೀಸ್, ಪಟ್ಟಿಯಲ್ಲಿ ಒಬ್ಬರೇ ಕನ್ನಡಿಗ
ಅಕ್ಟೋಬರ್ 5ರಿಂದ ಭಾರತದಲ್ಲಿ ಪ್ರಾರಂಭವಾಗುವ ವಿಶ್ವಕಪ್ ಪಂದ್ಯಾವಳಿಗೆ ಐಸಿಸಿ ಅಂಪೈರುಗಳ ಮತ್ತು ಮ್ಯಾಚ್ ರೆಫರಿಗಳ ಪಟ್ಟಿಯನ್ನು ಘೋಷಿಸಿದೆ. ಇದರಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಒಬ್ಬರು ಅಂಪೈರ್ ಆಗಿ ಕಾಣಿಸಿಕೊಂಡರೆ, ಇನ್ನೊಬ್ಬರು ಮ್ಯಾಚ್ ರೆಫರಿ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಐಸಿಸಿ ವಿಶ್ವಕಪ್ ಗೆ 16 ಅಂಪೈರುಗಳು ಮತ್ತು ನಾಲ್ಕು ಮ್ಯಾಚ್ ರೆಫರಿಗಳನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ. ಐಸಿಸಿ ಬಿಡುಗಡೆ ಮಾಡಿರುವ ಮ್ಯಾಚ್ ರೆಫರಿ ಮತ್ತು ಅಂಪೈರ್ ಗಳ ಪಟ್ಟಿಯಲ್ಲಿ ನಿತಿನ್ ಮೆನನ್ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರನ್ನು ಮ್ಯಾಚ್ ರೆಫರಿಯಾಗಿ ಸೇರಿಸಿಕೊಳ್ಳಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಶ್ರೀಲಂಕಾದ ಕುಮಾರ್ ಧರ್ಮಸೇನಾ ಮತ್ತು ನಿತಿನ್ ಮೆನನ್ ಅಂಪೈರ್ ಆಗಿ ಅಂಗಳವನ್ನು ಪ್ರವೇಶಿಸಲಿದ್ದಾರೆ.
16 ಅಂಪೈರ್ ಗಳ ಪಟ್ಟಿ ಹೀಗಿದೆ:
*ಮರೈಸ್ ಎರಾಸ್ಮಸ್
*ಕ್ರಿಸ್ ಗಫ್ನಿ
*ಮೈಕೆಲ್ ಗಾಫ್
*ರಿಚರ್ಡ್ ಕೆಟಲ್ಬರೋ
*ನಿತಿನ್ ಮೆನನ್
*ಅಹ್ಸನ್ ರಾಜ
*ಪಾಲ್ ರೈಫೆಲ್
*ಕ್ರಿಸ್ ಬ್ರೌನ್
*ಕುಮಾರ್ ಧರ್ಮಸೇನಾ
*ಆಡ್ರಿಯನ್ ಹೋಲ್ಡಾಕ್
*ರಾಡ್ ಟಕರ್
*ಅಲೆಕ್ಸ್ ವಾರ್ಫ್
*ಜೋಯಲ್ ವಿಲ್ಸನ್
*ರಿಚರ್ಡ್ ಇಲ್ಲಿಂಗವರ್ತ್
*ಶರಫುದ್ದೌಲಾ ಇಬ್ನ್ ಶಾಫುದ್ದೌಲಾ ಇಬ್ನ್
ಮ್ಯಾಚ್ ರೆಫರಿ:
*ಜಾವಗಲ್ ಶ್ರೀನಾಥ್
*ರಿಚಿ ರಿಚರ್ಡ್ಸನ್
*ಆಂಡಿ ಪೈಕ್ರಾಫ್ಟ್
*ಜೆಫ್ ಕ್ರೋವ್
ಅಕ್ಟೋಬರ್ 5 ರಿಂದ ಪಂದ್ಯಾವಳಿ ಪ್ರಾರಂಭವಾಗಲಿದೆ. ಇದಕ್ಕಾಗಿ ಐಸಿಸಿ ಮತ್ತು ಬಿಸಿಸಿಐ ಸಿದ್ಧತೆಯಲ್ಲಿ ನಿರತವಾಗಿವೆ. ಭಾರತದಲ್ಲಿ ನಡೆಯಲಿರುವ ಐಸಿಸಿ ಮಹಾ ಇವೆಂಟ್ ನಲ್ಲಿ 10 ತಂಡಗಳು ಅದೃಷ್ಟ ಪರೀಕ್ಷೆಯನ್ನು ನಡೆಸಲಿವೆ. ಭಾರತದ 10 ವಿವಿಧ ಸ್ಥಳಗಳಲ್ಲಿ ಟೂರ್ನಿಯನ್ನು ಆಯೋಜಿಸಲಾಗಿದ್ದು, ಒಟ್ಟು 48 ಪಂದ್ಯಗಳು ನಡೆಯಲಿವೆ.
ಮುಂಬೈ ಹಾಗೂ ಕೋಲ್ಕತ್ತಾ ಅಂಗಳಗಳು ಸೆಮಿಫೈನಲ್ ಪಂದ್ಯಕ್ಕೆ ಆತಿಥ್ಯ ನೀಡಿದರೆ, ವಿಶ್ವದ ದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಪಡೆದಿರುವ ಅಹಮದಾಬಾದಿನ ನರೇಂದ್ರ ಮೋದಿ ಮೈದಾನ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಇನ್ನು ಭಾರತ ತನ್ನ ವಿಶ್ವಕಪ್ ಅಭಿಯಾನವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಿಂದ ಆರಂಭಿಸಲಿದೆ. ಅಕ್ಟೋಬರ್ 14 ಭಾರತ ಅಹಮದಾಬಾದ್ ನಲ್ಲಿ ತನ್ನ ಸಂಪ್ರಾದಾಯಿಕ ಎದುರಾಳಿ ಪಾಕ್ ವಿರುದ್ಧ ಸೆಣಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications