For Quick Alerts
ALLOW NOTIFICATIONS  
For Daily Alerts
 

'ಅಂಪೈರ್ಸ್ ಕಾಲ್' ಬಹಳಷ್ಟು ಗೊಂದಲಗಳನ್ನು ಸೃಷ್ಠಿಸುತ್ತಿದೆ: ಕೊಹ್ಲಿ

Umpires call creates lot of confusion, says Virat Kohli

ಪೂಣೆ: ಲೆಗ್ ಬಿಫೋರ್ ಔಟ್ ಸಂದರ್ಭ ಡಿಸಿಶನ್ ರಿವ್ಯೂ ಸಿವ್ಯೂ ಸಿಸ್ಟಮ್ (ಡಿಆರ್‌ಎಸ್) ಅಥವಾ ಸಾಫ್ಟ್ ಸಿಗ್ನಲ್ ವೇಳೆ ಸಾಕಷ್ಟು ಗೊಂದಲಗಳು ನಿರ್ಮಾಣವಾಗುತ್ತವೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಡಿಆರ್‌ಎಸ್ ಮತ್ತು ಸಾಫ್ಟ್‌ ಸಿಗ್ನಲ್ ಬಗ್ಗೆ ಕೊಹ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ನನ್ನ ಪ್ರಕಾರ ಅಂಪೈರ್ಸ್ ಕಾಲ್ ಸಾಕಷ್ಟು ಗೊಂದಲಗಳನ್ನು ನಿರ್ಮಿಸುತ್ತಿದೆ. ನೀವೊಬ್ಬ ಬ್ಯಾಟ್ಸ್‌ಮನ್‌ ಅನ್ನು ಬೌಲ್ಡ್ ಮಾಡಿದಾಗ ನೀವು ಚೆಂಡು ಸ್ಟಂಪನ್ನು 50 ಶೇ.ಗಿಂತ ಹೆಚ್ಚು ತಾಗಿದೆ ಎಂದು ಪರಿಗಣಿಸಿದ ಬಳಿಕ ಅದನ್ನು ಔಟ್ ಎಂದು ತೀರ್ಮಾನಿಸುವುದಕ್ಕಾಗಲ್ಲ. ಕ್ರಿಕೆಟ್‌ನ ಮೂಲ ಜ್ಞಾನ ಇದ್ದಾಗ ಅದರಲ್ಲಿ ಯಾವುದೇ ಚರ್ಚೆ ಇರುತ್ತದೆ ಎಂದು ನನಗನ್ನಿಸುತ್ತಿಲ್ಲ. ಯಾಕೆಂದರೆ ಚೆಂಡು ಸ್ಟಂಪ್‌ಗೆ ಕೊಂಚ ತಾಗಿದರೂ ಔಟೇ,' ಎಂದು ಕೊಹ್ಲಿ ಹೇಳಿದ್ದಾರೆ.

ಕ್ರಿಕೆಟ್‌ನ ಅನುಭವಗಳ ಬಗ್ಗೆ ಮಾತನಾಡಿದ ಕೊಹ್ಲಿ, 'ಡಿಆರ್‌ಎಸ್ ಬರುವುದಕ್ಕೂ ಮುನ್ನವೇ ಬಹಳ ಕಾಲದಿಂದ ನಾನು ಆಡುತ್ತಿದ್ದೇನೆ. ಆಗ ಡಿಆರ್ಎಸ್ ಇರಲಿಲ್ಲ. ಒಂದು ವೇಳೆ ಅಂಪೈರ್ ಔಟ್ ಕೊಟ್ಟರೆ ಬ್ಯಾಟ್ಸ್‌ಮನ್‌ ಔಟಾಗಿರಲಿ ಇಲ್ಲದಿರಲಿ, ಬ್ಯಾಟ್ಸ್‌ಮನ್‌ ಅದನ್ನು ಔಟ್ ಎಂದು ಒಪ್ಪಿಕೊಳ್ಳಬೇಕಾಗಿತ್ತು. ಅದು ಕನಿಷ್ಠ ಮಟ್ಟದಲ್ಲಿ ಔಟ್ ಆಗಿರಲಿ ಇಲ್ಲದಿರಲಿ,' ಎಂದು ವಿವರಿಸಿದರು.

ಭಾರತ-ಇಂಗ್ಲೆಂಡ್ 4ನೇ ಟಿ20 ಪಂದ್ಯದ ವೇಳೆ ಸೂರ್ಯಕುಮಾರ್ ಔಟ್ ತೀರ್ಪು ವಿವಾದ ಸೃಷ್ಠಿಸಿತ್ತು. ಆವತ್ತು ಸ್ಯಾಮ್ ಕರನ್ ಓವರ್‌ನಲ್ಲಿ ಯಾದವ್ ಕ್ಯಾಚ್ ಪಡೆದಿದ್ದ ಡೇವಿಡ್ ಮಲಾನ್ ವಿವಾದಕ್ಕೆ ಕಾರಣರಾಗಿದ್ದರು. ಯಾಕೆಂದರೆ ಮಲಾನ್ ಕ್ಯಾಚ್‌ ವೇಳೆ ಚೆಂಡು ನೆಲಕ್ಕೆ ತಾಗಿದ್ದ ರೀತಿಯಲ್ಲಿ ಕಾಣಿಸಿತ್ತು. ಆದರೆ ಈ ಬಗ್ಗೆ ಸ್ಪಷ್ಟ ನಿರ್ಧಾರ ತಾಳಲಾಗದಿದ್ದರಿಂದ ಯಾದವ್ ಅವರನ್ನು ಔಟ್ ಎಂದು ಡಿಆರ್‌ಎಸ್ ಬಳಿಕ ತೀರ್ಮಾನಿಸಲಾಗಿತ್ತು.

Story first published: Tuesday, March 23, 2021, 10:01 [IST]
Other articles published on Mar 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+