T20 World Cup 2024: ಸೆಮಿಫೈನಲ್ ಪಂದ್ಯಗಳಿಗೆ ಅಂಪೈರ್‌ಗಳ ಘೋಷಣೆ; ಭಾರತ-ಇಂಗ್ಲೆಂಡ್ ಮ್ಯಾಚ್ ರೆಫರಿ ಯಾರು?
ಜೂನ್ 26 ಬುಧವಾರ, 2024ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಲಿರುವ ನಾಲ್ಕು ತಂಡಗಳನ್ನು ನಿರ್ಧರಿಸಲಾಗಿದೆ. ಎರಡೂ ಸೆಮಿಫೈನಲ್ ಪಂದ್ಯಗಳು ಜೂನ್ 27 ರಂದು ಭಾರತೀಯ ಕಾಲಮಾನ ಬೆಳಿಗ್ಗೆ 6 ಮತ್ತು ರಾತ್ರಿ 8 ಗಂಟೆಗೆ ನಡೆಯಲಿವೆ.
ಈ ಸೆಮಿಫೈನಲ್ ಪಂದ್ಯಗಳ ಅಂಪೈರ್‌ಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕೃತವಾಗಿ ಪ್ರಕಟಿಸಿದೆ. ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಮೊದಲ ಸೆಮಿಫೈನಲ್‌ಗೆ ನ್ಯೂಜಿಲೆಂಡ್‌ನ ಕ್ರಿಸ್ ಗಫ್ನಿ ಮತ್ತು ಆಸ್ಟ್ರೇಲಿಯಾದ ರಾಡ್ನಿ ಟಕರ್ ಅವರನ್ನು ಆನ್-ಫೀಲ್ಡ್ ಅಂಪೈರ್‌ಗಳಾಗಿ ಘೋಷಣೆ ಮಾಡಲಾಗಿದೆ.

ಟಿ20 ವಿಶ್ವಕಪ್ 2024ರ ಮೊದಲ ಸೆಮಿಫೈನಲ್ ಪಂದ್ಯ ಜೂನ್ 27 ರಂದು ಬೆಳಿಗ್ಗೆ 6 ಗಂಟೆಗೆ ನಡೆಯಲಿದೆ. ಮಳೆ ಅಡ್ಡಿಯಾದರೆ ಈ ಪಂದ್ಯಕ್ಕೆ ಮೀಸಲು ದಿನವನ್ನು ಸಹ ಇರಿಸಲಾಗಿದೆ.
ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಭಾರತದ ನಿತಿನ್ ಮೆನನ್ ತೀರ್ಪುಗಾರರಾಗಿ ಹಾಗು ಇಂಗ್ಲೆಂಡ್‌ನ ರಿಚರ್ಡ್ ಇಲ್ಲಿಂಗ್‌ವರ್ತ್ ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಪಂದ್ಯ ಜೂನ್ 27 ರಂದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ನಡೆಯಲಿದೆ.
2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಟಿವಿ ಅಂಪೈರ್ ಆಗಿದ್ದ ಜೋಯಲ್ ವಿಲ್ಸನ್ ಅವರನ್ನು ಮತ್ತೆ ಟಿವಿ ಅಂಪೈರ್ ಮಾಡಲಾಗಿದೆ. ಜೂನ್ 27 ರಂದು ಗಯಾನಾದಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ಪಂದ್ಯದಲ್ಲಿ ಪಾಲ್ ರೀಫೆಲ್ ನಾಲ್ಕನೇ ಅಂಪೈರ್ ಆಗಿ ಹಾಜರಾಗಲಿದ್ದಾರೆ.
ಇದಲ್ಲದೇ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ರಿಚರ್ಡ್ ಕೆಟಲ್‌ಬರೋ ಟಿವಿ ಅಂಪೈರ್ ಆಗಿದ್ದರೆ, ಅಹ್ಸಾನ್ ರಜಾ ನಾಲ್ಕನೇ ಅಂಪೈರ್ ಆಗಲಿದ್ದಾರೆ.
ಮಂಗಳವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಜಯಗಳಿಸುವ ಮೂಲಕ ಮೊದಲ ಬಾರಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸೆಮಿಫೈನಲ್ ಪ್ರವೇಶಿಸಿತು. ಇದು ನಿಜವಾಗಿಯೂ ಅಫ್ಘಾನಿಸ್ತಾನ ಕ್ರಿಕೆಟ್‌ಗೆ ದೊಡ್ಡ ದಿನವಾಗಿತ್ತು.
ಏಕೆಂದರೆ ಇಲ್ಲಿಯವರೆಗೆ ಈ ತಂಡವು ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಸಹ-ಆತಿಥೇಯ ಯುಎಸ್‌ಎ ವಿರುದ್ಧ 10 ವಿಕೆಟ್‌ಗಳ ಜಯದೊಂದಿಗೆ ಅಂತಿಮ ನಾಲ್ಕರಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿತು. ಆದರೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 24 ರನ್‌ಗಳ ಜಯದೊಂದಿಗೆ ಸೂಪರ್ 8 ಹಂತವನ್ನು ಅಂತಿಮಗೊಳಿಸಿತು.
ಟಿ20 ವಿಶ್ವಕಪ್ 2024ರ ಸೆಮಿಫೈನಲ್ ತಂಡಗಳು
- ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ
- ಭಾರತ vs ಇಂಗ್ಲೆಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications