Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Controversy: "ಚೆಂಡು ಬ್ಯಾಟ್‌ಗೆ ತಾಗಿಲ್ಲ ನೆಲಕ್ಕೆ ತಾಗಿದೆ, ನಾನು ಔಟ್‌ ಅಲ್ಲ"

ಗುಜರಾತ್‌ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಣ ಪಂದ್ಯ ಬುಧವಾರ ಅಹಮದಾಬಾದ್‌ನ ಮೈದಾನದಲ್ಲಿ ನಡೆಯಿತು. ಈ ವೇಳೆ ಮತ್ತೊಮ್ಮೆ ಅಂಪೈರ್‌ ನಿರ್ಣಯದ ಬಗ್ಗೆ ಪ್ರಶ್ನೆಗಳು ಏಳುವಂತೆ ಆಗಿವೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಂಪೈರಿಂಗ್ ಉತ್ತಮವಾಗಿಲ್ಲವಾ ಎಂಬ ಸಂದೇಹಗಳು ಮೂಡಲು ಕಾರಣವಾಗುತ್ತದೆ. ಹಾಗಿದ್ದರೆ ಆಗಿದ್ದು ಏನು? ಎಂಬ ಬಗ್ಗೆ ವರದಿ ಇಲ್ಲಿದೆ.

ಬುಧವಾರ ಗುಜರಾತ್ ಟೈಟಾನ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಪಂದ್ಯ ನಡೆಯಿತು. ಈ ವೇಳೆ ಟೈಟಾನ್ಸ್‌ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 217 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ ಕಳಪೆ ಆರಂಭವನ್ನು ಕಂಡಿತು. ಹಿಂದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್‌ ಔಟ್ ಬೇಗನೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಿತೀಶ್ ರಾಣಾ ಸಹ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಮೂರನೇ ವಿಕೆಟ್‌ಗೆ ನಾಯಕ ಸಂಜು ಸ್ಯಾಮ್ಸನ್‌ ಜೊತೆಗೂಡಿದ ರಿಯಾನ್‌ ಪರಾಗ್‌ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು.

Umpiring Controversy in GT vs RR Match After Riyan Parag s Dismissal

ಮೂರನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್‌ ಹಾಗೂ ರಿಯಾನ್ ಪರಾಗ್ ಜೋಡಿ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟುವತ್ತ ಚಿತ್ತ ನೆಟ್ಟಿತು. ಈ ಜೋಡಿ ತಂಡದ ಮೊತ್ತವನ್ನು ಹಿಗ್ಗಿಸುತ್ತಲೇ ಸಾಗಿತು. ಪವರ್‌ ಪ್ಲೇನಲ್ಲಿ ಮತ್ತೆ ವಿಕೆಟ್‌ ಬೀಳದಂತೆ ನೋಡಿಕೊಂಡ ಜೋಡಿ ಸ್ಥಿರ ಪ್ರದರ್ಶನ ನೀಡಿತು. ಆದರೆ ಪವರ್‌ ಪ್ಲೇ ಮುಗಿಯುತ್ತಿದ್ದಂತೆ ರಿಯಾನ್‌ ಪರಾಗ್‌ ಪೆವಿಲಿಯನ್‌ ನತ್ತ ಹೆಜ್ಜೆ ಹಾಕಬೇಕಾಯಿತು.

ಪರಾಗ್‌ ಔಟ್‌, ನಾಟೌಟ್?

ಇನಿಂಗ್ಸ್‌ ಏಳನೇ ಓವರ್ ಮಾಡುವ ಜವಾಬ್ದಾರಿಯನ್ನು ಶುಭಮನ್‌ ಗಿಲ್‌, ಕುಲ್ವಂತ್ ಖೇಜ್ರೋಲಿಯಾಗೆ ನೀಡಿದರು. ರಿಯಾನ್‌ ಪರಾಗ್‌ ಇವರ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸಿದರು. ಇವರು ಎಸೆದ ನಾಲ್ಕನೇ ಎಸೆತದಲ್ಲಿ ಪರಾಗ್‌, ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್ ನಲ್ಲಿ ಚೆಂಡನ್ನು ಬಾರಿಸಲು ಮುಂದಾದರು. ಆದರೆ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ವಿಕೆಟ್‌ ಕೀಪರ್‌ ಜೋಸ್ ಬಟ್ಲರ್‌ ಅವರ ಕೈ ಸೇರುತ್ತದೆ. ಅಪೀಲ್ ಮಾಡಿದಾಗ ಅಂಪೈರ್ ಔಟ್ ಎಂದು ನೀಡಿದರು. ರಿಯಾನ್‌ ಪರಾಗ್‌ ಮೇಲ್ನನವಿ ಸಲ್ಲಿಸಿದರು.

ರಿಯಾನ್‌ ಪರಾಗ್‌ ತಕ್ಷಣ ಡಿಆರ್‌ಎಸ್‌ ಪಡೆದಿದ್ದು, ಹಾಗೂ ಅವರ ಹಾವ ಭಾವವನ್ನು ನೋಡಿದರೆ ಚೆಂಡು ಬ್ಯಾಟಿಗೆ ತಾಗೇ ಇಲ್ಲ ಎಂಬಂತೆ ಕಂಡು ಬಂದಿತು. ಮೂರನೇ ಅಂಪೈರ್‌ ಚೆಂಡು ಬ್ಯಾಟ್‌ನ ಸಮೀಪ ಹಾದುಹೋದ ಸಂಪರ್ಕಿಸಿದಂತೆ ಕಂಡು ಬಂದಿತು. ಇದರಿಂದ ರಿಯಾನ್ ತೃಪ್ತರಾಗಿರಲಿಲ್ಲ. ರಿಯಾನ್ ಅಂಪೈರ್ ಜೊತೆ ಮಾತನಾಡಲು ಮುಂದಾದರು. ಅಲ್ಟ್ರಾಎಡ್ಜ್‌ನಲ್ಲಿ ಕಂಡುಬಂದ ಸ್ಪೈಕ್, ಬ್ಯಾಟ್ ನೆಲಕ್ಕೆ ಬಡಿದ ಕಾರಣ ಉಂಟಾಗಿದೆ ಎಂದು ಹೇಳಲು ಪ್ರಯತ್ನಿಸುತ್ತಿದ್ದರು. ಆದರೆ ಅಂಪೈರ್‌ ಮೂರನೇ ಅಂಪೈರ್ ಔಟ್ ಎಂಬ ತೀರ್ಮಾನವನ್ನು ನೀಡಿದ್ದಾರೆ ಎಂದು ತಿಳಿಸಿದರು. ಬಳಿಕ ರಿಯಾನ್‌ ಸಪ್ಪೆ ಮುಖ ಮಾಡಿಕೊಂಡು ಪೆವಿಲಿಯನ್ ಕಡೆಗೆ ನಡೆದರು.

Story first published: Thursday, April 10, 2025, 10:27 [IST]
Other articles published on Apr 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+