IPL 2025 KKR: ಐಪಿಎಲ್ ಆರಂಭಕ್ಕೂ ಮುನ್ನವೇ ಹಾಲಿ ಚಾಂಪಿಯನ್ ಕೆಕೆಆರ್‌ಗೆ ಪೆಟ್ಟು: ವೇಗಿ ಟೂರ್ನಿಯಿಂದ ಔಟ್
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲ ತಂಡಗಳು ಅಭ್ಯಾಸ ನಡೆಸಿವೆ. ಇನ್ನು ಕೆಲವು ತಂಡಗಳಿಗೆ ಗಾಯ ನುಂಗುಲರಾದ ತುತ್ತಾಗಿದೆ. ಐಪಿಎಲ್ ಇತಿಹಾಸದಲ್ಲಿ ವೇಗದ ಬೌಲಿಂಗ್ ಮಾಡಿದ ಭಾರತೀಯ ಪ್ಲೇಯರ್ ಈಗ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇವರು ಟೂರ್ನಿಗೆ ಅಲಭ್ಯರಾಗಿರುವುದು ನಿಜಕ್ಕೂ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ತುಂಬಲಾರದ ನಷ್ಟವಾಗಿದೆ.
ಐಪಿಎಲ್‌ನಲ್ಲಿ ವೇಗದ ಎಸೆತಗಳ ಮೂಲಕ ಹೆಸರುವಾಸಿಯಾಗಿದ್ದ, 'ಜಮ್ಮು ಎಕ್ಸ್‌ಪ್ರೆಸ್' ಎಂದೇ ಜನಪ್ರಿಯರಾಗಿರುವ ಉಮ್ರಾನ್ ಮಲಿಕ್ ಗಾಯದ ಕಾರಣದಿಂದ ಇವರು ಈ ಬಾರಿಯ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಉಮ್ರಾನ್ ಮಲಿಕ್ ಗಾಯಕ್ಕೆ ತುತ್ತಾಗಿರುವ ಬಗ್ಗೆ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಪಷ್ಟ ಪಡಿಸಿದೆ. ಇವರನ್ನು ಕೆಕೆಆರ್ ಸೌದಿಯಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ತಂಡಕ್ಕೆ ಸೇರಿಸಿಕೊಂಡಿತ್ತು. ಇವರಿಗೆ 75 ಲಕ್ಷ ರೂಪಾಯಿ ತಂಡಕ್ಕೆ ಬರಮಾಡಿಕೊಂಡಿತ್ತು. ಈಗ ಮಲಿಕ್ ಗಾಯಕ್ಕೆ ತುತ್ತಾಗಿರುವುದು ಹಾಲಿ ಚಾಂಪಿಯನ್‌ರಿಗೆ ಹಿನ್ನಡೆಯಾಗಿದೆ.

ಉಮ್ರಾನ್ ಮಲಿಕ್ ಅವರು ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಆದರೆ ಇವರನ್ನು ಉಳಿಸಿಕೊಳ್ಳುವ ಮನಸ್ಸನ್ನು ಎಸ್‌ಆರ್‌ಎಚ್ ಮಾಡಲಿಲ್ಲ. ಹೀಗಾಗಿ ಇವರು ಐಪಿಎಲ್ ಹರಾಜಿನ ಅಂಗಳಕ್ಕೆ ಕಾಲಿಟ್ಟರು. ಈ ವೇಳೆ ಕೆಕೆಆರ್ ಇವರಿಗೆ ಮಣೆ ಹಾಕಿದೆ. ಇವರು ಈಗಾಗಲೇ ಎಸ್‌ಆರ್‌ಎಚ್ ತಂಡದ ಪರ 26 ಪಂದ್ಯಗಳಲ್ಲಿ 29 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಇವರಿಗೆ ಹೆಚ್ಚಿನ ಆಡುವ ಅವಕಾಶ ಸಿಗಲಿಲ್ಲ. ಇವರು ಕೇವಲ ಒಂದು ಪಂದ್ಯವನ್ನು ಆಡಿದ್ದರು. ಅಲ್ಲದೆ ಬರಿ ಗೈಯಲ್ಲಿ ವಾಪಸ್ ಆಗಿದ್ರು.
ಮಲಿಕ್ ಬದಲಿಗೆ ಯಾರಿಗೆ ಅವಕಾಶ?
ಉಮ್ರಾನ್ ಮಲಿಕ್ ಅವರ ಬದಲಿಗೆ 25 ವರ್ಷದ ಚೇತನ್ ಸಕಾರಿಯನ್ನು ಕೆಕೆಆರ್ ತಂಡಕ್ಕೆ ಸೇರಿಸಿಕೊಂಡಿದೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ಮಿಂಚು ಹರಿಸಿರುವ ಯುವ ಆಟಗಾರ. ಇವರು ಆಡಿರುವ 19 ಪಂದ್ಯಗಳಲ್ಲಿ 20 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ ಅನುಭವ ಇವರಿಗೆ. ಉಮ್ರಾನ್ ಮಲಿಕ್ ಬದಲಿಗೆ ಈಗ ತಮ್ಮ ಕ್ಷಮತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿಕೊಳ್ಳಲು ಚೇತನ್‌ಗೆ ಒಳ್ಳೆಯ ಅವಕಾಶ. ಇವರನ್ನು ಕೆಕೆಆರ್ ನೆಟ್ ಬೌಲರ್ ರೂಪದಲ್ಲಿ ತಂಡದಲ್ಲಿ ಸೇರಿಸಿಕೊಂಡಿತ್ತು. ಈಗ ಇವರು ತಂಡ ಸೇರಿಕೊಂಡಿದ್ದಾರೆ.
ಕೆಕೆಆರ್ ತಂಡ: ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ, ರಮಣದೀಪ್ ಸಿಂಗ್, ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿ ಕಾಕ್, ರಹಮಾನಲ್ಲಾ ಗುರ್ಬಾಜ್, ಅನ್ರಿಚ್ ನಾರ್ಟ್ಜೆ, ಅಂಗ್ಕ್ರಿಶ್ ರಘುವಂಶಿ, ವೈಭವ್ ಅರೋರಾ, ಮಾಯಾಂಕ್ ಮಾರ್ಕಂಡೆ, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ಸ್ಪೆನ್ಸರ್ ಜಾನ್ಸನ್, ಲವನಿತ್ ಸಿಸೋಡಿಯಾ, ಅನುಕುಲ್ ರಾಯ್, ಮೊಯಿನ್ ಅಲಿ, ಚೇತನ್ ಸಕರಿಯಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications