ಐಪಿಎಲ್: ಬೆಂಗಳೂರು ಮೂಲದ 'ಅನ್‌ಅಕಾಡೆಮಿ' ಜೊತೆಗೆ 3 ವರ್ಷದ ಒಪ್ಪಂದ

ಕೊರೊನಾ ವೈರಸ್‌ನಿಂದಾಗಿ ಮುಂದೂಡಲ್ಪಟ್ಟ 13ನೇ ಆವೃತ್ತಿಯ ಐಪಿಎಲ್‌ಗೆ ಸಾಕಷ್ಟು ಸವಾಲುಗಳು ಎದುರಾಗಿ ಎಲ್ಲವೂ ಒಂದೊಂದಾಗಿ ನಿವಾರಣೆಯಾಗುತ್ತಾ ಬಂದಿದೆ. ಟೈಟಲ್ ಪ್ರಾಯೋಜಕತ್ವದಿಂದ ಹೊರ ಬಂದ 'ವಿವೋ' ಜಾಗಕ್ಕೆ ಡ್ರೀಮ್11 ಬಂದಿದೆ . ಇದರ ಬೆನ್ನಲ್ಲೇ 'ಫ್ಯೂಚರ್ ಗ್ರೂಪ್' ಪ್ರಾಯೋಜಕತ್ವದಿಂದ ಹಿಂದಕ್ಕೆ ಸರಿದಿದ್ದು ಆ ಸ್ಥಾನಕ್ಕೂ ಪರ್ಯಾಯವನ್ನು ಬಿಸಿಸಿಐ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸೆಂಟ್ರಲ್ ಸ್ಪಾನ್ಸರ್‌ಶಿಪ್ ಹೊಂದಿದ್ದ ಫ್ಯೂಚರ್ ಗ್ರೂಪ್ ಹೊರ ಬಂದ ವಿಚಾರ ನಿನ್ನೆಯಷ್ಟೇ ಬಹಿರಂಗವಾಗಿತ್ತು. ಮಂಗಳವಾರ ಈ ಸ್ಥಾನಕ್ಕೆ ಬೆಂಗಳೂರು ಮೂಲದ 'ಅನ್‌ಅಕಾಡೆಮಿ' ಸಂಸ್ಥೆ ಒಪ್ಪಂದ ಮಾಡಿಕೊಂಡಿರುವ ವಿಚಾರವನ್ನು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದು ಶೀಘ್ರವೇ ಇದು ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಎಜುಕೇಶನ್ ಟೆಕ್ನಾಲಜಿ ಸಂಸ್ಥೆಯಾಗರುವ ಅನ್‌ಅಕಾಡೆಮಿ 3 ವರ್ಷಗಳ ಅವಧಿಯ ಐಪಿಎಲ್ ಸೆಂಟ್ರಲ್ ಸ್ಪಾನ್ಸರ್ ಸ್ಥಾನಕ್ಕೆ ಒಪ್ಪಂದ ಮಾಡಿಕೊಂಡಿದೆ. ಈ ಅವಧಿಗೆ 120-130 ಕೋಟಿ ಹೂಡಿಕೆಯನ್ನು ಅದು ಮಾಡಲಿದೆ. ಈ ಬಗ್ಗೆ ಅಧಿಕೃತವಾಗಿ ಶೀಘ್ರವೇ ಪ್ರಕಟಣೆಯಾಗಲಿದೆ ಎಂದು ಬಿಸಿಸಿಐ ಅಧಿಕಾರಿ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಸೆಂಟ್ರಲ್ ಸ್ಪಾನ್ಸರ್‌ಶಿಪ್‌ನ ಎರಡು ಅವಕಾಶದಲ್ಲಿ ಈ ಹಿಂದೆಯಿದ್ದ 'ಫ್ಯೂಚರ್ ಗ್ರೂಪ್' ಅದರಿಂದ ಹೊರಬಂದಿದೆ. ಇನ್ನೊಂದು ಕಂಪನಿ ಡ್ರೀಮ್11 ಟೈಟಲ್ ಪ್ರಾಯೋಜಕತ್ವಕ್ಕೆ ಭಡ್ತಿ ಪಡೆದುಕೊಂಡಿದೆ. ಹೀಗಾಗಿ ಇನ್ನೂ ಒಂದು ಸೆಂಟ್ರಲ್ ಸ್ಪಾನ್ಸರ್‌ಶಿಪ್ ಸ್ಥಾನ ಬಾಕಿಯಿದ್ದು ಕ್ರೆಡಿಟ್‌ಕಾರ್ಡ್ ಪೇಮೆಂಟ್ ಕಂಪನಿ 'ಕ್ರೆಡ್' ಜೊತೆಗೆ ಬಿಸಿಸಿಐ ಮಾತುಕತೆಯನ್ನು ನಡೆಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications